Modi Is Face Of India: ಭಾರತದ ಪ್ರತಿರೂಪ ಪ್ರಧಾನಿ ಮೋದಿ !

ಭಾರತದ ಗೆಳೆಯ ಎಂದು ಕರೆಸಿಕೊಳ್ಳುವ ಅಮೆರಿಕದ ಸಂಸದ ಬ್ರಾಡ್ ಶೆರ್ಮನ್ ಅವರ ಅಭಿಪ್ರಾಯ

ಲಾಸ್ ಏಂಜಲೀಸ್ (ಅಮೇರಿಕಾ) – 2014 ರಿಂದ ದೇಶದ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾದ ಸಂಸದ ಬ್ರಾಡ್ ಶೆರ್ಮನ್ ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಭಾರತದ ಮುಖವಾಗಿದ್ದಾರೆ ಎಂದರು. ಅಮೆರಿಕಾದ ಸಂಸದ ಬ್ರಾಡ್ ಶೆರ್ಮನ್ ಅವರನ್ನು ಭಾರತದ ಸ್ನೇಹಿತ ಎಂದು ಕರೆಯಲಾಗುತ್ತದೆ.

(ಸೌಜನ್ಯ – Business Today)

ಶೆರ್ಮನ್ ಮಾತು ಮುಂದುವರೆಸುತ್ತಾ,

1. ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಭಾರತ ಮತ್ತು ಅಮೇರಿಕಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಬಲಗೊಂಡಿವೆ. ಹೀಗಿದ್ದರೂ, ರಷ್ಯಾದೊಂದಿಗೆ ಭಾರತದ ರಕ್ಷಣಾ ಸಂಬಂಧವು ಸವಾಲಾಗಿ ಉಳಿದಿದೆ. ಅಂದರೆ, ಪ್ರತಿಯೊಂದು ದೇಶ ಮತ್ತು ನಾಯಕನಿಗೆ ತನ್ನದೇ ಆದ ಸವಾಲುಗಳಿವೆ.

2. ನಾನು ಯಾವುದೇ ದೇಶದ ಯಶಸ್ಸನ್ನು ಒಬ್ಬ ನಾಯಕನಿಗೆ ಮಾತ್ರ ಕೊಡುವುದಿಲ್ಲ. ನಿಮ್ಮಬಳಿ 1.3 ಅಬ್ಜಗಿಂತಲೂ ಹೆಚ್ಚು ಜನರು ಇದ್ದಾರೆ ಮತ್ತು ಅವರೆಲ್ಲರೂ ಭಾರತವನ್ನು ಹೆಚ್ಚು ಯಶಸ್ವಿ ದೇಶವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

3. ಅಮೇರಿಕಾ ಮತ್ತು ಭಾರತದ ನಡುವಿನ ವ್ಯಾಪಾರ ಗಗನಕ್ಕೇರುತ್ತಿದೆ. ವಾಸ್ತವವಾಗಿ, ಭಾರತೀಯ-ಅಮೆರಿಕನ್ನರು ಅತ್ಯಂತ ವಿದ್ಯಾವಂತರು ಮತ್ತು ಅಮೆರಿಕಾದಲ್ಲಿನ ಎಲ್ಲಾ ಜನಾಂಗೀಯ ಗುಂಪುಗಳಿಗಿಂತ ಇವರು ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ.

4. ರಷ್ಯಾದೊಂದಿಗೆ ನಮ್ಮ ಸಂಬಂಧಗಳು ಉತ್ತಮವಾಗಿಲ್ಲ. ಉಕ್ರೇನ್‌ನಲ್ಲಿನ ಯುದ್ಧದ ಯಶಸ್ವಿ ಪರಿಹಾರಕ್ಕಾಗಿ ನಾವೆಲ್ಲರೂ ಆಶಿಸುತ್ತೇವೆ. ಹಾಗೆ ಮಾಡುವುದರಿಂದ ಖಂಡಿತವಾಗಿಯೂ ಜಗತ್ತಿಗೆ ಬಹಳಷ್ಟು ಸಹಾಯವಾಗುತ್ತದೆ ಎಂದು ಹೇಳಿದರು.