ನ್ಯಾಯವಾದಿ ಸಂಜೀವ ಪುನಾಳೇಕರ ಅವರು ಸಲ್ಲಿಸಿರುವ ಅರ್ಜಿಯ ಬಗ್ಗೆ ಸರಕಾರಿ ಪಕ್ಷಕ್ಕೆ ತನ್ನ ವಾದ ಮಂಡಿಸಲು ಏಪ್ರಿಲ್ 18 ರವರೆಗೆ ಸಮಯಾವಕಾಶ

ಡಾ. ನರೇಂದ್ರ ದಾಭೋಲ್ಕರ್ ಕೊಲೆ ಪ್ರಕರಣ

ಬಲಬದಿಗೆ ನ್ಯಾಯವಾದಿ ಸಂಜೀವ ಪುನಾಳೇಕರ ನ್ಯಾಯವಾದಿ ಸಂಜೀವ ಪುನಾಳೇಕರ

ಪುಣೆ – ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಡಾ. ನರೇಂದ್ರ ದಾಭೋಲಕರ್ ಹತ್ಯೆಯ ಪ್ರಕರಣದಲ್ಲಿ ಓರ್ವ ಶಂಕಿತ ನ್ಯಾಯವಾದಿ ಸಂಜೀವ ಪುನಾಳೇಕರ್ ಇವರು 1 ಏಪ್ರಿಲ್ 2024 ರಂದು, CBI (ಕೇಂದ್ರ ತನಿಖಾ ಸಂಸ್ಥೆ) ತನಿಖಾಧಿಕಾರಿ ಎಸ್.ಆರ್. ಸಿಂಗ್ ಇವರು ನ್ಯಾಯಾಲಯಕ್ಕೆ ಒದಗಿಸಿದ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿಯನ್ನು ನೀಡಿದ್ದರು, ಇದರಿಂದ ಸಿಂಗ್ ಇವರಿಗೆ ಶಿಕ್ಷೆಯಾಗಬೇಕು’ ಎಂದು ಸಿಂಗ್ ವಿರುದ್ಧ ಅರ್ಜಿ ದಾಖಲಿಸಿದ್ದರು. ಇದರಿಂದ ಈ ದೂರಿನ ಸಂದರ್ಭದಲ್ಲಿ ಎಸ್.ಆರ್. ಸಿಂಗ್ ಇವರು ಸ್ವತಃ ಎಪ್ರಿಲ್ 8 ರಂದು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು ಮತ್ತು ಅವರು ಈ ಸಂದರ್ಭದಲ್ಲಿ ಉತ್ತರ ನೀಡಲು ಸಮಯಾವಕಾಶವನ್ನು ಕೋರಿದರು. ಅದಕ್ಕೆ ನ್ಯಾಯಾಲಯವು ಅವರಿಗೆ ಎಪ್ರಿಲ್ 18 ವರೆಗೆ ಉತ್ತರ ನೀಡಲು ಹೇಳಿದೆ. ಕಳೆದ ಕೆಲವು ಪ್ರಕರಣಗಳ ಆಲಿಕೆಯಲ್ಲಿ ಪ್ರತಿಪಕ್ಷದ ಪರವಾಗಿ ಯಾವ ಪ್ರತಿವಾದವನ್ನು ಮಾಡಲಾಗಿದೆಯೋ, ಅದಕ್ಕೆ ಬಾಯಿ ಮಾತಿನಿಂದ ಉಕ್ತಿವಾದವನ್ನು ಮಾಡದೇ ಸರಕಾರಿ ಪಕ್ಷದ ವತಿಯಿಂದ ಲಿಖಿತ ಯುಕ್ತಿವಾದವನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು.

ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ವಿಚಾರಣೆಯು ವಿಶೇಷ ನ್ಯಾಯಾಧೀಶ ಪಿ.ಪಿ. ಜಾಧವ್ ಅವರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆ ಸಮಯದಲ್ಲಿ CBI ವಿಶೇಷ ಸರಕಾರಿ ವಕೀಲ ಪ್ರಕಾಶ ಸೂರ್ಯವಂಶಿ ಹಾಜರಿದ್ದರು, ಶಂಕಿತರ ಪರವಾಗಿ ಮುಂಬಯಿ ಉಚ್ಚನ್ಯಾಯಾಲಯದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಮತ್ತು ನ್ಯಾಯವಾದಿ ಸುವರ್ಣ ವತ್ಸ-ಅವ್ಹಾಡ್ ಹಾಜರಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 18, 2024 ರಂದು ನಡೆಯಲಿದೆ.