ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರನ್ನು ಕೊಲ್ಲುವ ಬಗ್ಗೆ ರಾಜನಾಥ್ ಸಿಂಗ್ ಹೇಳಿಕೆಯ ಪ್ರಕರಣ.
ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಹ ಅವರು ಏಪ್ರಿಲ್ 6 ರಂದು ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಹುಡುಕಿ ಕೊಲ್ಲುವುದು ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯಿಂದ ಪಾಕಿಸ್ತಾನಿ ಮಾಧ್ಯಮಗಳಲ್ಲಿ ಚರ್ಚೆ ಶುರುವಾಗಿದೆ. ಪಾಕಿಸ್ತಾನದ ವಿದೇಶಾಂಗ ವ್ಯವಹಾರ ತಜ್ಞ ಸಾಜಿದ್ ತರಾರ ಈ ಬಗ್ಗೆ ಮಹತ್ವಪೂರ್ಣ ಹೇಳಿಕೆ ನೀಡಿದ್ದಾರೆ. ಅವರು ಮಾತನಾಡಿ, ಪಾಕ್ ಗೆ ನುಗ್ಗಿ ಭಯೋತ್ಪಾದಕರನ್ನು ಕೊಂದರೆ ಭಾರತಕ್ಕೇ ಹಾನಿಯಾಗಲಿದೆ. ಪಾಕಿಸ್ತಾನಕ್ಕೆ ಏನೂ ಆಗುವುದಿಲ್ಲ. ಪಾಕಿಸ್ತಾನದ ಬಳಿ ನೀವು ನಷ್ಟ ಮಾಡುವಂತಹದ್ದು ಏನಿದೆ? ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವ ಬೇಕಾಗಿದೆ. ಹಾಗಾಗಿ ಇಂತಹ ಕೃತ್ಯಗಳಿಂದ ನಿಮ್ಮದೇ ಹಾನಿಯಾಗುವುದು, ಎಂದರು.
ಸಾಜಿದ್ ತರಾರ ತಮ್ಮ ಮಾತು ಮುಂದುವರಿಸಿ,
1. ಜಗತ್ತಿನ ದೇಶಗಳಿಗೆ ಪಾಕಿಸ್ತಾನದೊಂದಿಗೆ ಸಂಬಂಧ ಅನಗತ್ಯವಾಗಿದೆ.
ಭಾರತವು ಕಾಶ್ಮೀರದ ಅಭಿವೃದ್ಧಿಯ ಸಂಪೂರ್ಣ ಗುತ್ತಿಗೆಯನ್ನು ಸಂಯುಕ್ತ ಅರಬ್ ಎಮಿರಾಟ್ಸಗೆ(ಯುಎಇ) ನೀಡಿದೆ. ಪಾಕಿಸ್ತಾನ ಸಂಯುಕ್ತ ಅರಬ ಎಮಿರಾಟ್ಸ ಬಳಿ ಹಣವನ್ನು ಬೇಡುತ್ತಿದೆ. ಈಗ ನಮ್ಮ ಪ್ರಧಾನಿ ಶಾಹಬಾಜ ಶರೀಫ ಸೌದಿ ಅರೇಬಿಯಾಕ್ಕೆ ಹೋಗಿದ್ದರೂ ಸಹ ಜಗತ್ತಿನ ರಾಷ್ಟ್ರಗಳು ನಮ್ಮೊಂದಿಗೆ ಸಂಬಂಧ ಇಟ್ಟುಕೊಳ್ಳಲು ಬಯಸುತ್ತಿಲ್ಲ.
2. ಸೌದಿ ಅರೇಬಿಯಾ ಭಾರತವನ್ನು ಉದಯೋನ್ಮುಖ ಶಕ್ತಿಯಾಗಿ ನೋಡುತ್ತದೆ!
ಪಾಕಿಸ್ತಾನದ ಪ್ರಧಾನಮಂತ್ರಿ ಅಥವಾ ಸೇನಾ ಮುಖ್ಯಸ್ಥರು ತಮ್ಮ ಹುದ್ದೆಯನ್ನು ವಹಿಸಿಕೊಂಡ ಬಳಿಕ ಅವರ ಮೊದಲ ಭೇಟಿ ಸೌದಿ ಅರೇಬಿಯಾಕ್ಕೆ ಆಗಿರುತ್ತದೆ. ಇದು ಇಲ್ಲಿನ ಸಂಪ್ರದಾಯವಾಗಿದೆ. ಆದರೆ ಈಗ ಕಾಲ ಬದಲಾಗಿದೆ. ಸೌದಿ ಅರೇಬಿಯಾ ಈಗ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ; ಕಾರಣ ಅದು ಭಾರತವನ್ನು ಉದಯೋನ್ಮುಖ ಶಕ್ತಿಯಾಗಿ ನೋಡುತ್ತದೆ.
3. ಅಂತಾರಾಷ್ಟ್ರೀಯ ವಿವಾದದಲ್ಲಿ ಸಿಲುಕದೇ ಇರುವ ಕಾರಣದಿಂದಲೇ ಚೀನಾದ ಅಭಿವೃದ್ಧಿ
ಚುನಾವಣಾ ಸಮಯವಾಗಿರುವುದರಿಂದ ಭಾರತ ಇಂತಹ ಹೇಳಿಕೆಗಳನ್ನು ನೀಡಿದ್ದರೂ ಇದರಿಂದ ಭಾರತಕ್ಕೇ ಹಾನಿಯಾಗಲಿದೆ. ಇದಕ್ಕೆ ಕಾರಣವೆಂದರೆ, ‘ಟೆಸ್ಲಾ’ ನಂತಹ ಸಂಸ್ಥೆಗಳು ಭಾರತಕ್ಕೆ ಬರುತ್ತಿವೆ. ಜಗತ್ತಿನ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿವೆ. ಈ ಪರಿಸ್ಥಿತಿಯಲ್ಲಿ ಇಂತಹ ಹೇಳಿಕೆಗಳಿಂದ ಭಾರತಕ್ಕೇ ಹಾನಿ. ಸಂಘರ್ಷ ನಡೆದರೆ, ಜನರು ಹೂಡಿಕೆ ಮಾಡಿರುವ ತಮ್ಮ ಹಣವನ್ನು ಹಿಂತೆಗೆದುಕೊಳ್ಳಬಹುದು. ಭಾರತದ ನೆರೆಹೊರೆಯವರು ಚೀನಾಕ್ಕೆ ಹತ್ತಿರವಾಗುತ್ತಿದ್ದಾರೆ ಮತ್ತು ಪಾಶ್ಚಿಮಾತ್ಯ ದೇಶಗಳು ಚೀನಾದಿಂದ ದೂರ ಸರಿಯುತ್ತಿವೆ. ನಿಮ್ಮ (ಭಾರತದ) ನಿಜವಾದ ಶತ್ರು ಚೀನಾ ಆಗಿದೆ. ಅಂತರರಾಷ್ಟ್ರೀಯ ವಿವಾದಗಳಲ್ಲಿ ಸಿಲುಕಿಕೊಳ್ಳದ ಕಾರಣ ಚೀನಾ ಪ್ರಗತಿ ಸಾಧಿಸಿದೆ.