ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯಿಂದಾಗಿ ಪಾಕಿಸ್ತಾನ ಕೆಂಡಾಮಂಡಲ
ಇಸ್ಲಾಮಾಬಾದ (ಪಾಕಿಸ್ತಾನ) – ಬ್ರಿಟಿಶ ಸುದ್ದಿ ಪತ್ರಿಕೆ ‘ದಿ ಗಾರ್ಡಿಯನ’ ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕರ ಹತ್ಯೆಯಲ್ಲಿ ಭಾರತೀಯ ಗುಪ್ತಚರ ಸಂಸ್ಥೆ `ರಾ’ನ ಕೈವಾಡವಿದೆ ಎಂದು ಹೇಳಿರುವ ಲೇಖನವನ್ನು ಪ್ರಕಟಿಸಿದೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಹ ಅವರನ್ನು ಕೇಳಿದಾಗ ಅವರು, ‘ಭಾರತದಿಂದ ಪಾಕಿಸ್ತಾನಕ್ಕೆ ಓಡಿ ಹೋಗುವ ಭಯೋತ್ಪಾದಕರನ್ನು ಪಾಕಿಸ್ತಾನದ ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದು ಹೇಳಿದ್ದರು, ರಾಜನಾಥ ಸಿಂಹ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ. ರಾಜನಾಥ ಸಿಂಹ ಅವರ ಹೇಳಿಕೆಯನ್ನು ಪಾಕಿಸ್ತಾನ ಖಂಡಿಸಿದ್ದು, ಇದನ್ನು ‘ಪ್ರಚೋದನಕಾರಿ’ ಎಂದು ಕರೆದಿದೆ. ‘ಭಾರತೀಯ ಗುಪ್ತಚರರು ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಕೊಂದಿರುವ ಬಗ್ಗೆ ಪುರಾವೆಗಳು ನಮ್ಮ ಬಳಿಯಿದೆ ಎಂದು ಹೇಳಿದೆ.
🔊: PR NO. 5️⃣9️⃣/2️⃣0️⃣2️⃣4️⃣
Pakistan Denounces the Provocative Remarks Made by the Indian Defence Minister
🔗⬇️https://t.co/7oo9v6ya9w pic.twitter.com/aVsOZLdE8v
— Ministry of Foreign Affairs – Pakistan (@ForeignOfficePk) April 6, 2024
‘ಅಂತಾರಾಷ್ಟ್ರೀಯ ಸಮುದಾಯವು ಭಾರತವನ್ನು ಹೊಣೆಗಾರರನ್ನಾಗಿ ಮಾಡಬೇಕಂತೆ !’
ಭಾರತದ ವಿದೇಶಾಂಗ ಸಚಿವಾಲಯವು ಒಂದು ಮನವಿಯಲ್ಲಿ, ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆಯನ್ನು ಪಾಕಿಸ್ತಾನ ಖಂಡಿಸುತ್ತದೆ ಎಂದು ತಿಳಿಸಿದೆ. ಜನವರಿ 25, 2024 ರಂದು ಪಾಕಿಸ್ತಾನವು ಪಾಕಿಸ್ತಾನದಲ್ಲಿ ಕಾನೂನುಬಾಹಿರ ಮತ್ತು ಅಂತರರಾಷ್ಟ್ರೀಯ ಹತ್ಯೆಗಳ ಭಾರತದ ಅಭಿಯಾನವನ್ನು ವಿವರಿಸುವ ಸಾಕ್ಷ್ಯವನ್ನು ಪಾಕಿಸ್ತಾನ ಒದಗಿಸಿದೆ. ಮನಬಂದಂತೆ ಭಯೋತ್ಪಾದಕರೆಂದು ಘೋಷಿಸಿದ ನಾಗರಿಕರನ್ನು ಪಾಕಿಸ್ತಾನದಲ್ಲಿ ಕೊಲ್ಲುವ ಭಾರತದ ಸಿದ್ಧತೆಯು ಭಾರತವು ತಪ್ಪಿತಸ್ಥ ಎಂದು ತೋರಿಸುತ್ತದೆ ಮತ್ತು ಅದು ಅದನ್ನು ಒಪ್ಪಿಕೊಳ್ಳುತ್ತದೆ. ಅಂತರರಾಷ್ಟ್ರೀಯ ಸಮುದಾಯವು ಭಾರತಕ್ಕೆ ತನ್ನ ಹೇಯ ಮತ್ತು ಕಾನೂನುಬಾಹಿರ ಕ್ರಮಗಳಿಗೆ ಹೊಣೆಗಾರರನ್ನಾಗಿ ಮಾಡುವುದು ಮಹತ್ವದ್ದಾಗಿದೆ. ಪಾಕಿಸ್ತಾನ ಯಾವುದೇ ಆಕ್ರಮಣದ ವಿರುದ್ಧ ತನ್ನ ಸಾರ್ವಭೌಮತ್ವದ ರಕ್ಷಣೆ ಮಾಡಲು ಸಿದ್ಧವಾಗಿದೆ ಎಂದು ಹೇಳಿದೆ.
‘We have evidence that Indian intelligence has covertly killed Pakistani citizens. – Pakistan’s outcry after Defense Minister Rajnath Singh’s statement that, ‘India will breach into #Pakistan and eliminate the terrorists.’
👉 India has provided numerous proofs to Pakistan… pic.twitter.com/7wUApLHhKr
— Sanatan Prabhat (@SanatanPrabhat) April 6, 2024
ಸಂಪಾದಕೀಯ ನಿಲುವುಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಭಾರದಲ್ಲಿ ಕಳೆದ ಮೂರು ದಶಕಗಳಲ್ಲಿ ನಡೆಸಿದ ದಾಳಿಗಳಿಗೆ ಸಂಬಂಧಿಸಿದಂತೆ ಭಾರತವು ಪಾಕಿಸ್ತಾನಕ್ಕೆ ನೂರಾರು ಪುರಾವೆಗಳನ್ನು ನೀಡಿದೆ, ಆದರೆ ಪಾಕಿಸ್ತಾನ ಅವುಗಳನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಈ ವಿಷಯದಲ್ಲಿ ಪಾಕಿಸ್ತಾನ ಏಕೆ ಬಾಯಿ ಬಿಡುತ್ತಿಲ್ಲ ? |