ಕೆನಡಾವೇ ನಮ್ಮ ಆಡಳಿತದಲ್ಲಿ ಕೈಯಾಡಿಸುತ್ತಿದೆ !

ಕೆನಡಾದ ಚುನಾವಣೆಗಳಲ್ಲಿ ಭಾರತದ ಹಸ್ತಕ್ಷೇಪದ ಆರೋಪವನ್ನು ತಳ್ಳಿಹಾಕಿದ ಭಾರತ

ನವದೆಹಲಿ – ಕೆನಡಾದ ಗುಪ್ತಚರ ಸಂಸ್ಥೆ ಸಿ.ಎಸ್.ಐ (ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್) ‘ಕೆನಡಾದ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದೆ’ ಎಂದು ದಾವೆ ಮಾಡಿದೆ. ಇದಕ್ಕೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ. ಭಾರತವು ಈ ಆರೋಪವನ್ನು ‘ಆಧಾರ ರಹಿತ’ ಎಂದು ಹೇಳಿ ತಿರಸ್ಕರಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ ಇವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಭಾರತದ ಆಡಳಿತದಲ್ಲಿ ಕೆನಡಾ ಮಾಡಿರುವ ಹಸ್ತಕ್ಷೇಪ ಮುಖ್ಯ ವಿಷಯವಾಗಿದೆ. ನಾವು ಕೆನಡಾ ಆಯೋಗದ ತನಿಖೆಯಲ್ಲಿ ಪ್ರಸಾರ ಮಾಧ್ಯಮಗಳ ಸುದ್ದಿಯನ್ನು ನೋಡಿದ್ದೇವೆ. ಕೆನಡಾದ ಚುನಾವಣೆಗಳಲ್ಲಿ ಭಾರತದ ಹಸ್ತಕ್ಷೇಪದ ಎಲ್ಲಾ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಇತರ ದೇಶಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು ಭಾರತ ಸರಕಾರದ ನೀತಿಯಲ್ಲ. ತದ್ವಿರುದ್ಧ ಕೆನಡಾನೇ ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಹೇಳಿದರು.

ಕೆನಡಾದ ಆರೋಪಗಳೇನು ?

ಕೆನಡಿಯನ್ ಸೆಕ್ಯುರಿಟಿ ಇಂಟಲಿಜೆನ್ಸ ಸರ್ವೀಸನ ವರದಿಯಲ್ಲಿ ಫೆಡರಲ್ ಇನ್ವೆಸ್ಟಿಗೇಶನ್ ಕಮಿಷನ 2019 ಮತ್ತು 2021 ರಲ್ಲಿ ದೇಶದ ಚುನಾವಣೆಗಳಲ್ಲಿ ಭಾರತ, ಪಾಕಿಸ್ತಾನ, ಚೀನಾ ಮತ್ತು ರಷ್ಯಾದಂತಹ ವಿದೇಶಿ ರಾಷ್ಟ್ರಗಳ ಸಂಭಾವ್ಯ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿದೆ ಎಂದು ತಿಳಿಸಿದೆ. 2021 ರಲ್ಲಿ, ಭಾರತ ಸರಕಾರದಿಂದ ಕೆನಡಾದಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಬಹುಶಃ ರಹಸ್ಯವಾಗಿ ಕ್ರಮ ಕೈಗೊಳ್ಳುವ ವಿಚಾರವಿತ್ತು. ಹೀಗೆ ಮಾಡಲು, ಭಾರತ ಸರಕಾರವು ಗುಪ್ತಚರರನ್ನು ಉಪಯೋಗಿಸಿಕೊಂಡಿದೆ. ಭಾರತ ಸರಕಾರ 2021 ರಲ್ಲಿ ಕೆನಡಾದಲ್ಲಿ ಅಲ್ಪಸಂಖ್ಯಾತರು ಇರುವ ಚುನಾವಣಾ ಜಿಲ್ಲೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿತ್ತು. ಕೆನಡಾದಲ್ಲಿರುವ ಭಾರತೀಯ ಸಮುದಾಯದ ಮತದಾರರ ಒಂದು ಗುಂಪು ಖಲಿಸ್ತಾನಿ ಚಳುವಳಿ ಅಥವಾ ಪಾಕಿಸ್ತಾನಿ ರಾಜಕೀಯ ನಿಲುವಿನ ವಿಷಯದಲ್ಲಿ ಸಹಾನುಭೂತಿಯನ್ನು ಹೊಂದಿದೆ’ ಎಂದು ಭಾರತ ತಿಳಿದಿರುವುದರಿಂದ ಭಾರತ ಸರಕಾರವು ಆ ಜಿಲ್ಲೆಗಳನ್ನು ಗುರಿ ಮಾಡಿತು. ಆ ಕಾಲದಲ್ಲಿ ಭಾರತ ಸರಕಾರದ ಗುಪ್ತಚರರು ಭಾರತ ಬೆಂಬಲಿತ ಉಮೇದುವಾರರಿಗೆ ಕಾನೂನುಬಾಹಿರ ಆರ್ಥಿಕ ಸಹಾಯವನ್ನು ನೀಡಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಿರಬೇಕು ಎಂದು ಗುಪ್ತ ಮಾಹಿತಿ ತೋರಿಸುತ್ತದೆ.

ಸಿ.ಎಸ್.ಐ.ಎಸ್. ವರದಿಯಲ್ಲಿನ ಮಾಹಿತಿ ಅಪೂರ್ಣ ! – ಸಿ.ಎಸ್.ಐ.ಎಸ್. ನಿರ್ದೇಶಕರು

ಮತ್ತೊಂದೆಡೆ, ಸಿ.ಎಸ್.ಐ.ಎಸ್. ನಿರ್ದೇಶಕ ಡೇವಿಡ ವಿಗ್ನಾಲ್ಟ್ ಅವರು ಮಾತನಾಡಿ, ಸಿ.ಎಸ್.ಐ ಎಸ್. ವರದಿಯಲ್ಲಿ ಉಲ್ಲೇಖಿಸಿರುವ ಆರೋಪಗಳಲ್ಲಿ ಸತ್ಯವಿದೆಯೆಂದು ಒಪ್ಪಿಕೊಳ್ಳಬಾರದು ಮತ್ತು ಈ ಪ್ರಕರಣದಲ್ಲಿ ಆಳವಾಗಿ ವಿಚಾರಣೆ ಮಾಡುವುದು ಆವಶ್ಯಕವಾಗಿದೆ; ಕಾರಣ ವರದಿಯಲ್ಲಿ ನಮೂದಿಸಿರುವ ಮಾಹಿತಿ ಅಸ್ಪಷ್ಟ ಅಥವಾ ಅಪೂರ್ಣವಾಗಿರುವಂತೆ ತೋರುತ್ತಿದೆಯೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತ ಇತರ ದೇಶಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಅಂತಹ ಇತಿಹಾಸವೂ ಇಲ್ಲದಿರುವಾಗ ಅಮೇರಿಕಾ, ಕೆನಡಾ, ಬ್ರಿಟನ್‌ನಂತಹ ದೇಶಗಳು ಉದ್ದೇಶಪೂರ್ವಕವಾಗಿ ವಿವಿಧ ಪದ್ಧತಿಯಿಂದ ಭಾರತದ ಮೇಲೆ ಆರೋಪಗಳನ್ನು ಮಾಡಿ ಒತ್ತಡವನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತವೆ. ಇದಕ್ಕೆ ಭಾರತವು ಈ ರೀತಿ ಕಠಿಣವಾಗಿರುವುದು ಆವಶ್ಯಕವಾಗಿದೆ.