ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಇಲಿನಾಯ್ಸ್ ರಾಜ್ಯದಲ್ಲಿ ಸಂಶೋಧಕರು ಮಾಡಿದ ದಾವೆಯಲ್ಲಿ, ಎಲ್ಲಕ್ಕಿಂತ ಅತಿದೊಡ್ಡ ಮಹಾ ಸಾಗರವು ಭೂಮಿಯ ಅಡಿಯ 700 ಕಿಲೋಮೀಟರ್ ಕೆಳಗೆ ಇದೆ. ಅದರಲ್ಲಿ ಎಲ್ಲಾ ಮಹಾಸಾಗರಗಳ ಒಟ್ಟು ನೀರಿಗಿಂತ ಮೂರು ಪಟ್ಟು ಹೆಚ್ಚು ನೀರು ಇದೆ. ಪೃಥ್ವಿಯ ಮೇಲೆ ನೀರು ಎಲ್ಲಿಂದ ಬಂತು, ಎಂದು ಹುಡುಕುತ್ತಿರುವಾಗ ವಿಜ್ಞಾನಿಗಳಿಗೆ ಈ ಮಹಾಸಾಗರದ ಬಗ್ಗೆ ಮಾಹಿತಿ ಸಿಕ್ಕಿತು.
1. ಈ ಸಂಶೋಧನೆ ತಂಡದ ವಿಜ್ಞಾನಿ ಸ್ಟಿವ ಜೆಕಬಸನ ಇವರು ಮಾತನಾಡಿ, ಈ ಮಹಾಸಾಗರವು ಪೃಥ್ವಿಯ ಅಡಿಯಲ್ಲಿ ನೀಲಿ ಬಂಡೆಯಲ್ಲಿ ಅಡಗಿದೆ. ಈ ಬಂಡೆಯು ಸ್ಪಂಜಿನಂತಿದ್ದು, ಅದು ನೀರನ್ನು ಹೀರಿಕೊಳ್ಳುತ್ತದೆ. 2 ಸಾವಿರ ‘ಸೀಸ್ಮೋಮೀಟರ್’ ಮೂಲಕ (ಭೂಕಂಪನ ಅಲೆಗಳಿಂದ ಉಂಟಾಗುವ ಭೂಮಿಯ ಚಲನೆಯನ್ನು ದಾಖಲಿಸುವ ಸಾಧನ) 500 ಭೂಕಂಪಗಳ ಅಧ್ಯಯನ ಮಾಡಿದ ನಂತರ ಈ ಮಹಾಸಾಗರವನ್ನು ಕಂಡುಹಿಡಿಯಲಾಯಿತು. ಪೃಥ್ವಿಯ ಕೆಳಗೆ ಎದ್ದೇಳುವ ಅಲೆಗಳು ತೇವಾಂಶವುಳ್ಳ ಬಂಡೆಯ ಮೂಲಕ ಹಾದುಹೋಗುವಾಗ ನಿಧಾನವಾಗುತ್ತವೆ. ಸೀಸ್ಮೋಮೀಟರ್ ನೂಂದಿಗೆ ಈ ಅಲೆಗಳನ್ನು ಅಧ್ಯಯನ ಮಾಡಿದ ನಂತರ, ಸಮುದ್ರವನ್ನು ಕಂಡುಹಿಡಿಯಲಾಯಿತು. ಈ ಮಹಾಸಾಗರ ಪೃಥ್ವಿಯ ಕೆಳಗೆ ಉಳಿಯಬೇಕು; ಏಕೆಂದರೆ ಅದು ಮೇಲ್ಮೈಯಿಂದ ಹೊರಬಂದರೆ, ಭೂಮಿಯ ಮೇಲೆ ನೀರು ಮಾತ್ರ ಇರುತ್ತಿತ್ತು. ಪರ್ವತಗಳ ಅತ್ಯುನ್ನತ ಶಿಖರಗಳು ಮಾತ್ರ ಭೂಮಿಯ ಹೆಸರಿನ ಮೇಲೆ ಉಳಿಯುತ್ತವೆ.
2. ಧೂಮಕೇತು ಭೂಮಿಗೆ ಅಪ್ಪಳಿಸಿದ ನಂತರ ಅದರ ಪ್ರಭಾವದಿಂದ ನೀರು ಸೃಷ್ಟಿಯಾಗಿದೆ ಎಂದು ಹಲವಾರು ವರದಿಗಳು ದಾವೆ ಮಾಡಿದೆ.
Scientists Found Ocean 700 Kms Beneath Earth’s Crust Containing More Water Than All Surface Oceans Combinedhttps://t.co/yi8clGqBq8
— News18 (@CNNnews18) April 3, 2024