Katchatheevu Issue Resolved says Sri Lanka: ಕಚ್ಚಾತಿವು ಬಗ್ಗೆ ೫೦ ವರ್ಷಗಳ ಹಿಂದೆಯೇ ಪರಿಹಾರ ಸಿಕ್ಕಿದ್ದರಿಂದ ಮತ್ತೆ ಕೆದಕುವ ಅವಶ್ಯಕತೆ ಇಲ್ಲ !

ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ ಇವರ ಹೇಳಿಕೆ

ಕೊಲಂಬೊ (ಶ್ರೀಲಂಕಾ) – ಕಚ್ಚಾತಿವು ಬಗ್ಗೆ ೫೦ ವರ್ಷಗಳ ಹಿಂದೆಯೇ ಪರಿಹಾರ ಸಿಕ್ಕಿದ್ದರಿಂದ ಮತ್ತೆ ಕೆದಕುವ ಅವಶ್ಯಕತೆ ಇಲ್ಲ, ಈ ಸಂದರ್ಭದಲ್ಲಿ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ ಇವರು ಅಧಿಕೃತ ಹೇಳಿಕೆ ನೀಡಿದರು. ಇಫ್ತಾರ ಪಾರ್ಟಿಯಲ್ಲಿ ಅವರಿಗೆ ಕೇಳಿರುವ ಪ್ರಶ್ನೆಯ ಬಗ್ಗೆ ಮಾತನಾಡುತ್ತಾ, ಕಚ್ಚಾತಿವು ಬಗ್ಗೆ ಯಾವುದೇ ವಿವಾದವಿಲ್ಲ. ಕಚ್ಚಾತಿವು ಬಗ್ಗೆ ಕೇವಲ ಭಾರತದಲ್ಲಿ ರಾಜಕೀಯ ಚರ್ಚೆ ನಡೆಯುತ್ತಿದೆ; ಆದರೆ ಇದರ ಕುರಿತಾದ ಅಧಿಕಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮಾರ್ಚ್ ೩೧ ರಂದು ಮಾಹಿತಿ ಅಧಿಕಾರದಲ್ಲಿ ದೊರೆತಿರುವ ಮಾಹಿತಿಯ ಆಧಾರ ನೀಡುತ್ತಾ, ಕಾಂಗ್ರೆಸ್ಸಿನಿಂದ ಭಾರತದಲ್ಲಿನ ತಮಿಳುನಾಡು ರಾಜ್ಯದಲ್ಲಿನ ರಾಮೇಶ್ವರಂ ಹತ್ತಿರದ ಕಚ್ಚಾತಿವು ದ್ವೀಪ ಶ್ರೀಲಂಕಾಗೆ ಒಪ್ಪಿಸಿತ್ತು. ಪ್ರತಿಯೊಂದು ಭಾರತೀಯರಿಗೆ ಇದರ ಸಿಟ್ಟು ಇದೆ.

ಕೇವಲ ಮತಕ್ಕಾಗಿ ಈ ಪ್ರಶ್ನೆ ! – ಶ್ರೀಲಂಕಾದ ಭಾರತದಲ್ಲಿನ ಮಾಜಿ ಉಚ್ಚಾಯುಕ್ತ ಫರ್ನಾಂಡೊ

೨೦೧೮-೨೦ ರಲ್ಲಿ ಭಾರತದಲ್ಲಿನ ಶ್ರೀಲಂಕಾದ ಉಚ್ಚಾಯುಕ್ತರಾಗಿದ್ದ ಆಸ್ಟೀನ್ ಫರ್ನಾಂಡೊ ಇವರು,

೧. ಕಚ್ಚಾತಿವುದ ಸೂತ್ರ ಭಾರತದಲ್ಲಿ ಕೇವಲ ಮತಕ್ಕಾಗಿ ಉಪಸ್ಥಿತಗೊಳಿಸುತ್ತಿದ್ದರೂ ಚುನಾವಣೆಯ ನಂತರ ಭಾರತ ಸರಕಾರಕ್ಕೆ ಈ ವಿಷಯದಿಂದ ಹಿಂದೆ ಸರಿಯುವುದು ಬಹಳ ಕಠಿಣವಾಗುವುದು, ಭಾಜಪ ಇದನ್ನು ಯೋಚಿಸಬೇಕು.

೨. ಭಾರತ ಸರಕಾರದಿಂದ ಶ್ರೀಲಂಕಾದ ಸಮುದ್ರ ಗಡಿ ದಾಟಿದರೆ, ಅದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆ ಎಂದು ತಿಳಿಯುವೆವು. ಪಾಕಿಸ್ತಾನದಿಂದ ಗೋವಾದ ಹತ್ತಿರದ ಸಮುದ್ರ ಮಾರ್ಗದಿಂದ ನುಸುಳಿದರೆ, ಭಾರತ ಅದು ಸಹಿಸುವುದೇ ? ಬಾಂಗ್ಲಾದೇಶದಿಂದ ಬಂಗಾಲದ ಉಪಸಾಗರದಲ್ಲಿ ಹೀಗೆ ಏನಾದರೂ ಮಾಡಿದರೆ ಆಗ ಭಾರತದ ಪ್ರತಿಕ್ರಿಯೆ ಏನು ಇರುವುದು ?

೩. ತಮಿಳುನಾಡಿನ ಮತದಾರರಿಗೆ ಸಂತೋಷಪಡಿಸುವುದಕ್ಕಾಗಿ ಭಾರತದ ವಿದೇಶಾಂಗ ಸಚಿವರು ‘ಕಚ್ಚಾತಿವು ಇಲ್ಲಿಯ ಭಾರತೀಯ ಮೀನುಗಾರರಿಗೆ ಮೀನುಗಾರಿಕೆಯ ಹಕ್ಕು ನೀಡುವೆವು’, ಎಂದು ಹೇಳಬಹುದು; ಆದರೆ ಪ್ರತ್ಯಕ್ಷದಲ್ಲಿ ಇದು ಎಷ್ಟರಮಟ್ಟಿಗೆ ಸಾಧ್ಯ. ಅದು ಬೇರೆ ಪ್ರಶ್ನೆ. ಈ ಸಮಯದಲ್ಲಿ ವಿವಾದ ನಡೆದರೆ ಆಗ ಅದನ್ನು ಯಾರು ನಿಭಾಯಿಸುವರು ? ಭಾರತದ ಗಡಿ ರಕ್ಷಕ ದಳಕ್ಕೆ ಈ ಜವಾಬ್ದಾರಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.