ಧಾರ್ಮಿಕ ದ್ವೇಷವನ್ನು ನಿರ್ಮಾಣ ಮಾಡಿರುವ ಪ್ರಕರಣದಲ್ಲಿ ಹಿಂದುತ್ವನಿಷ್ಠ ಶಾಸಕರ ವಿರುದ್ಧ ದೂರು ದಾಖಲಿಸಲು ಆಗ್ರಹ !

ಮುಸಲ್ಮಾನ ಮಹಿಳೆಯರಿಂದ ನ್ಯಾಯಾಲಯದಲ್ಲಿ ಮನವಿ

ಎಡದಿಂದ ಶಾಸಕರಾದ ಟಿ. ರಾಜಾ ಸಿಂಹ, ಶಾಸಕ ನಿತೇಶ ಮತ್ತು ಶಾಸಕಿ ಗೀತಾ ಜೈನ

ಮುಂಬಯಿ : ಧಾರ್ಮಿಕ ದ್ವೇಷ ನಿರ್ಮಾಣ ಮಾಡುವ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಭಾಜಪ ಶಾಸಕ ಟಿ. ರಾಜಾ ಸಿಂಹ, ಶಾಸಕ ನಿತೀಶ ರಾಣೆ ಮತ್ತು ಶಾಸಕಿ ಗೀತಾ ಜೈನ್ ವಿರುದ್ಧ ದೂರು ದಾಖಲಿಸಬೇಕು ಎಂದು ಖಾರನ ಅಫ್ತಾಬ ಸಿದ್ಧಿಕಿ ಈ ಮಹಿಳೆಯೊಂದಿಗೆ ಇತರ ಕೆಲವು ನಾಗರಿಕರು ಮುಂಬಯಿಯ ಉಚ್ಚನ್ಯಾಯಾಲಯದಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ರೇವತಿ ಮೋಹಿತೆ-ಡೇರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರ ವಿಭಾಗೀಯಪೀಠದಲ್ಲಿ ಏಪ್ರಿಲ್ 8 ರಂದು ತಕ್ಷಣವೇ ವಿಚಾರಣೆ ನಡೆಯಲಿದೆ. ಅರ್ಜಿದಾರರ ಪರವಾಗಿ ನ್ಯಾಯವಾದಿ ವಿಜಯ ಹಿರೇಮಠ ಅವರು ಏಪ್ರಿಲ್ 1 ರಂದು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ,

1. ಚುನಾವಣೆ ಮುಂದಿರುವಾಗ ಧಾರ್ಮಿಕ ಗಲಭೆ ಭುಗಿಲೇಳಿಸುವುದು ಭಾಜಪದ ಸಂಚಾಗಿದೆ. ಭಾಜಪದ ಶಾಸಕರು ಮೀರಾರೋಡ್, ಮಾಲವಣಿ, ಗೊವಂಡಿ, ಘಾಟಕೊಪರ್ ಈ ಸ್ಥಳಗಳಲ್ಲಿ ಧಾರ್ಮಿಕ ವಾತಾವರಣ ಹಾಳು ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ.

2. ಲೋಕಸಭಾ ಚಿನಾವಣೆಯ ಸಮಯದಲ್ಲಿ ಹೆಚ್ಚಿನ ಪರಿಣಾಮ ಆಗಬಹುದು, ಆದ್ದರಿಂದ ಧಾರ್ಮಿಕ ಗಲಭೆಗಳು ನಿರ್ಮಾಣವಾಗಬಹುದು. ಸರ್ವೋಚ್ಚ ನ್ಯಾಯಾಲಯವು ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಯಾರದೇ ದೂರಿನ ದಾರಿಯನ್ನು ಕಾಯದೇ ಪೊಲೀಸರು ತಾವಾಗಿಯೇ ಮುಂದುವರಿದು ದೂರು ದಾಖಲಿಸಬೇಕು’, ಎನ್ನುವ ಆದೇಶವನ್ನು ನೀಡಿದೆ; ಆದರೆ ಮುಂಬಯಿ ಪೊಲೀಸರು ಶಾಸಕರ ವಿರುದ್ಧ ದೂರು ದಾಖಲಿಸಿರುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಮುಸ್ಲಿಂ ನಾಯಕರಿಂದ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಲಾಗುತ್ತದೆ. ಇದರ ವಿರುದ್ಧ ದೂರು ದಾಖಲಿಸುವ ಬೇಡಿಕೆ ಅಲ್ಪಸಂಖ್ಯಾತ ಸಮುದಾಯದಿಂದ ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸಿ !
  • ಹಿಂದುತ್ವನಿಷ್ಠ ಶಾಸಕರು ಲವ್ ಜಿಹಾದ್, ಮತಾಂತರ ಮುಂತಾದ ಹಿಂದೂ ಧರ್ಮದ ಮೇಲಿನ ದಾಳಿಗಳ ಬಗ್ಗೆ ಹೇಳಿಕೆ ಮಾಡಿದ್ದರೆ, ಅದರ ಹಿಂದಿನ ಸತ್ಯವನ್ನು ತನಿಖೆ ಮಾಡುವ ಆದೇಶವನ್ನು ನ್ಯಾಯಾಲಯ ನೀಡಿದರೆ ಅದರಿಂದ ಸತ್ಯ ಸಮಾಜದ ಎದುರಿಗೆ ಬರುವುದು ಎಂದು ಹಿಂದೂಗಳಿಗೆ ಅನಿಸುತ್ತದೆ !