ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಡೇರಾ ಮುರಾದ್ ಜಮಾಲಿ ನಗರದಲ್ಲಿ ಕೆಲವು ದಿನಗಳ ಹಿಂದೆ ಸುಕ್ಕೂರ್‌ನಿಂದ ಹಿಂದೂ ಹುಡುಗಿ ಪ್ರಿಯಾ ಕುಮಾರಿಯನ್ನು ಅಪಹರಿಸಲಾಯಿತು; ಆದರೆ ಆಕೆಯ ಬಗ್ಗೆ ಪೊಲೀಸರಿಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಲ್ಲಿನ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮೆರವಣಿಗೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ.
1. ಅಪಹರಣವನ್ನು ವಿರೋಧಿಸಿ ಡೇರಾ ಮುರಾದ್ ಜಮಾಲಿಯಾದಲ್ಲಿ ಹಿಂದೂಗಳು ಹಿಂಸಾತ್ಮಕ ಆಂದೋಲನ ಮಾಡಿದರು. ಕುಮಾರಿಯನ್ನು ಪತ್ತೆ ಮಾಡಲು ಮತ್ತು ಬಿಡುಗಡೆ ಮಾಡಲು ವಿಫಲವಾದ ಬಗ್ಗೆ ಪ್ರತಿಭಟನಾಕಾರರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ ಎಂದು’ ಡಾನ್’ ಪಾಕ್ ದೈನಿಕ ವಾರ್ತಾಪತ್ರಿಕೆ ವರದಿ ಮಾಡಿದೆ. ಮುಖಿ ಮಾನಕ ಲಾಲ್ ಮತ್ತು ಸೇಠ್ ತಾರಾ ಚಂದ್ ನೇತೃತ್ವದಲ್ಲಿ ಹಿಂದೂ ಸಮಾಜದ ಹಿರಿಯ ಮುಖಂಡರು ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಸಮಾಜದ ನಾನಾ ಕ್ಷೇತ್ರಗಳ ಜನರು ಪಾಲ್ಗೊಂಡಿದ್ದರು.
2. ಈ ಪ್ರಕರಣದ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸಲಾಗುವುದೆಂದು ಹಿಂದೂಗಳು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಧಾರ್ಮಿಕ ಕಿರುಕುಳವನ್ನು ‘ಹ್ಯೂಮನ್ ರೈಟ್ಸ್ ಫೋಕಸ್ ಪಾಕಿಸ್ತಾನ್’ ಎಂಬ ಸಂಘಟನೆಯು ತೀವ್ರವಾಗಿ ಖಂಡಿಸಿದೆ. ಈ ಕಾರಣದಿಂದಾಗಿ, ಕೋಪಗೊಂಡ ಜನರು ದೊಡ್ಡ ಪ್ರಮಾಣದಲ್ಲಿ ಆಂದೋಲನೆಯ ಸಿದ್ದತೆ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಕ್ರಿಶ್ಚಿಯನ್, ಹಿಂದೂ, ಅಹ್ಮದೀಯ, ಸಿಖ್ ಮತ್ತು ಇತರ ಧರ್ಮಗಳಿಗೆ ಸೇರಿದ ಅನೇಕ ಜನರು ವಿವಿಧ ಆಕ್ರಮಣಗಳಿಗೆ ಬಲಿಯಾಗಿದ್ದಾರೆ ಎಂದು ಈ ಸಂಘಟನೆಯು ಹೇಳಿದೆ.
ಸಂಪಾದಕೀಯ ನಿಲುವುಹಿಂದೂಗಳು ಇಂತಹ ಎಷ್ಟೇ ಪ್ರತಿಭಟನೆಗಳನ್ನು ಮಾಡಿದರೂ ಅಲ್ಲಿನ ಸರ್ಕಾರಕ್ಕಾಗಲೀ, ಮತಾಂಧ ಮುಸಲ್ಮಾನರ ಮೇಲಾಗಲೀ ಪರಿಣಾಮ ಬೀರುವುದಿಲ್ಲ! ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆ ಮಾಡಲು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು, ಇದೊಂದೇ ಪರಿಹಾರ! |