|
ನವ ದೆಹಲಿ – ಭಾರತದ ಮಾಜಿ ಆಡ್ವೋಕೆಟ್ ಜನರಲ್ ಮುಕುಲ ರೋಹತಗಿ ಕಚ್ಚಾಥಿಯು ದ್ವೀಪ ಕಾಂಗ್ರೆಸ್ ಸರಕಾರವು ಏನನ್ನು ಪಡೆಯದೆ ಶ್ರೀಲಂಕಾಗೆ ಉಡುಗೊರೆ ಎಂದು ನೀಡಿರುವ ಗಂಭೀರ ಆರೋಪ ಮಾಡಿದ್ದಾರೆ. ಅವರು ಒಂದು ಆಂಗ್ಲ ವಾರ್ತಾ ವಾಹಿನಿಯಲ್ಲಿ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ನಮಗೆ ಆ ದ್ವೀಪ ಹಿಂಪಡೆಯಬೇಕಿದ್ದರೆ ಶ್ರೀಲಂಕಾದ ಜೊತೆಗೆ ಯುದ್ಧ ಮಾಡಬೇಕಾಗಬಹುದು, ಎಂದು ಕೂಡ ಅವರು ಈ ಸಮಯದಲ್ಲಿ ಹೇಳಿದರು.
ತಾತ್ಕಾಲಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಇವರು ಭಾರತದ ಕಚ್ಚಾಥಿವು ಹೆಸರಿನ ದ್ವೀಪ ಶ್ರೀಲಂಕಾಗೆ ನೀಡಿದ್ದರು. ಈ ಮಾಹಿತಿ ಮಾಹಿತಿ ಹಕ್ಕುಗಳ ಕಾನೂನಿನ ಅಡಿಯಲ್ಲಿ ನೀಡಿರುವ ಅರ್ಜಿಯಿಂದ ಬೆಳಕಿಗೆ ಬಂದಿದೆ. ಇದರ ಕುರಿತು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕೆಲವು ದಿನಗಳ ಹಿಂದೆ ಕಾಂಗ್ರೆಸ್ಸನ್ನು ಗುರಿ ಮಾಡಿದ್ದರು. ೨೦೧೪ ಮುಕುಲ ರೋಹತಗಿ ಇವರು ಆಡ್ವೋಕೆಟ್ ಜನರಲ್ ಆಗಿದ್ದರು. ಆ ಸಮಯದಲ್ಲಿ ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಕಚ್ಚಾಥಿಯು ದ್ವಿಪದ ಸಂದರ್ಭದಲ್ಲಿ ನಡೆಸಿರುವ ಹೇಳಿಕೆ ಚರ್ಚೆಗೆ ಬಂದಿತ್ತು. ತಮಿಳುನಾಡಿನ ರಾಮೇಶ್ವರಂಯಿಂದ ಕೇವಲ ೧೬ ಕಿಲೋಮೀಟರ್ ಅಂತರದಲ್ಲಿ ಈ ದ್ವೀಪ ಇದೆ.
ಭೂಭಾಗದ ಕೊಡುವ-ತೆಗೆದುಕೊಳ್ಳುವ ಪರಂಪರೆ !
ಸಾಮಾನ್ಯವಾಗಿ ಎರಡು ನೆರೆಯ ದೇಶಗಳಲ್ಲಿ ಭೂಭಾಗದ ಕೊಡುವ ತೆಗೆದುಕೊಳ್ಳುವುದು ನಡೆಯುತ್ತಿರುತ್ತದೆ. ಇದರಲ್ಲಿ ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ಯಾವುದಾದರೂ ಭೂಭಾಗ ನೀಡಿ ಇನ್ನೊಂದು ಭೂಭಾಗ ಪಡೆಯಲಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಈ ರೀತಿ ೧೯೫೮ ರಿಂದ ೧೯೬೦ ರ ವರೆಗೆ ಕೊಡುವ ತೆಗೆದುಕೊಳ್ಳುವುದು ನಡೆದಿತ್ತು, ಎಂದು ರೋಹತಗಿ ಹೇಳಿದರು. ಕೆಲವು ವರ್ಷಗಳ ಹಿಂದೆ ಮೋದಿ ಸರಕಾರವು ಬಾಂಗ್ಲಾದೇಶದ ಜೊತೆಗೆ ಈ ರೀತಿಯ ಕೆಲವು ಭೂಭಾಗದ ಕೊಡುವ ತೆಗೆದುಕೊಳ್ಳುವುದು ನಡೆಸಿದ್ದರು. ಹೀಗೆ ಇದ್ದರೂ ಅವರು ಯಾವುದೇ ಭೂಭಾಗ ಪಡೆಯದೆ ಕಾಂಗ್ರೆಸ್ಸಿನವರು ಕಚ್ಚಾಥಿಯು ದ್ವೀಪ ಶ್ರೀಲಂಕಾಗೆ ಏಕೆ ನೀಡಿದರು ? ಅದರ ಬದಲು ಭಾರತಕ್ಕೆ ಏನು ಸಿಕ್ಕಿದೆ, ಈ ಪ್ರಶ್ನೆಗಳ ಉತ್ತರ ಕಾಂಗ್ರೆಸ್ಸಿನವರೆ ನೀಡಬೇಕಾಗುವುದು, ಎಂದು ಕೂಡ ರೋಹತಗಿ ಈ ಸಮಯದಲ್ಲಿ ಹೇಳಿದರು.
We have to wage a war against Sri Lanka to get back the Kachchatheevu Island. – Mukul Rohatgi, former Advocate General of India
👉 In the year 1974, the then PM Indira Gandhi gave away the island as a gift to Sri Lanka.
👉 Congress has a tradition of undermining the integrity… pic.twitter.com/DlQ5BTDHWE
— Sanatan Prabhat (@SanatanPrabhat) April 2, 2024
ಸಂಪಾದಕೀಯ ನಿಲುವುಭಾರತದ ಅಖಂಡತ್ವಕ್ಕೆ ಬೆಂಕಿ ಹಚ್ಚುವುದು ಕಾಂಗ್ರೆಸ್ಸಿನ ಪರಂಪರೆಗೆ ಆಗಿದೆ. ಈಗ ಮತದಾರರ ಮೂಲಕ ಅದನ್ನು ಶಾಶ್ವತವಾಗಿ ಮನೆಯಲ್ಲಿ ಕೂಡಿಸಲು ಹಿಂದುಗಳು ಸಂಘಟಿತರಾಗಬೇಕು ! |