Kota Ram Barat Attacked : ಕೈಥುನ (ರಾಜಸ್ಥಾನ)ದಲ್ಲಿ ಮಸೀದಿಯ ಹತ್ತಿರ ಹಿಂದುಗಳ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

  • ಡಿಜೆ ಧ್ವಂಸ

  • ಕೆಲವು ಹಿಂದೂಗಳಿಗೆ ಗಾಯ

  • ಪೊಲೀಸ ಠಾಣೆಯ ಹೊರಗೆ ಪ್ರತಿಭಟನೆ ನಡೆಸುವ ಹಿಂದೂಗಳ ಮೇಲೆ ಲಾಠಿಚಾರ್ಜ್

ಕೋಟಾ (ರಾಜಸ್ಥಾನ) – ಕೋಟಾ ಜಿಲ್ಲೆಯಲ್ಲಿ ಕೈಥುನ ನಗರದಲ್ಲಿ ಮಾರ್ಚ್ ೨೯ ರಂದು ಸ್ಥಳಿಯ ಜಾತ್ರೆಯಲ್ಲಿ ರಾಮಲೀಲಾದ ಕಾರ್ಯಕ್ರಮದ ಆಯೋಜನೆ ಮಾಡಿದ್ದರು. ‘ರಾಮಲೀಲಾ’ ಮುಗಿದ ನಂತರ ‘ರಾಮ ಬಾರಾತ’ ಮೆರವಣಿಗೆ ನಡೆಸಿದ್ದರು. ಉತ್ತರ ಭಾರತದಲ್ಲಿನ ಅನೇಕ ಪ್ರದೇಶಗಳಲ್ಲಿ ‘ರಾಮಲೀಲಾ’ ಆದ ನಂತರ ಶ್ರೀರಾಮ ಮತ್ತು ಸೀತಾಮಾತೆಯ ವಿವಾಹ ನಡೆಸಿ ನಂತರ ಮೆರವಣಿಗೆ ನಡೆಸುತ್ತಾರೆ.

ಅದನ್ನು ‘ರಾಮ ಬಾರಾತ’ ಎನ್ನುತ್ತಾರೆ. ಈ ‘ರಾಮ ಬಾರಾತ’ ಮಸೀದಿಯ ಹತ್ತಿರ ತಲುಪಿದ ನಂತರ ಮುಸಲ್ಮಾನರು ದಾಳಿ ಮಾಡಿದರು ಹಾಗೂ ಡಿಜೆ ಧ್ವಂಸ ಮಾಡಿದರು. ಇದರಲ್ಲಿ ಹಿಂದೂ ಮಹಿಳೆಯರು ಮತ್ತು ಪುರುಷರು ಗಾಯಗೊಂಡರು. ಅದರ ನಂತರ ಆಕ್ರೋಶಗೊಂಡಿರುವ ಜನರು ಪೊಲೀಸ ಠಾಣೆಯ ಹೊರಗೆ ಸೇರಿ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅವರು ಘೋಷಣೆಗಳನ್ನು ನೀಡಲು ಆರಂಭಿಸಿದಾಗ ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಈ ಹಿಂಸಾಚಾರದ ಪ್ರಕರಣದಲ್ಲಿ ಕೆಲವು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

೧. ಈ ಪ್ರಕರಣದಲ್ಲಿ ಗ್ರಾಮೀಣ ಪೊಲೀಸ ಅಧಿಕಾರಿ ಕರಣ ಶರ್ಮಾ ಇವರು, ರಾಮ ಬಾರಾತ ಮೆರವಣಿಗೆ ಮಸೀದಿ ಎದುರು ಹೋಗುತ್ತಿತ್ತು, ಆ ಸಮಯದಲ್ಲಿ ನಮಾಜ ಪಠಣ ನಡೆಯುತ್ತಿತ್ತು. ಮೆರವಣಿಗೆಯಲ್ಲಿನ ಡಿಜೆ ಇಂದ ವಿವಾದ ನಡೆದಿದೆ. ಯಾರೋ ಡಿಜೆಯ ವಾಯರ್ಸ್ ತೆಗೆದರು. ಇದರಿಂದ ವಿವಾದ ಆಗಿ ಹಿಂಸಾಚಾರ ನಡೆದಿದೆ ಎಂದು ಹೇಳಿದರು.

೨. ವಿಶ್ವ ಹಿಂದೂ ಪರಿಷತ್ತಿನ ಸಹ ಪ್ರಾಂತೀಯ ಸಚಿವ ಯೋಗೇಶ ರೇಣವಾಲ ಇವರು, ರಾಮ ಬಾರಾತ ಮೆರವಣಿಗೆಯಲ್ಲಿ ಸಹಭಾಗಿ ಆಗಿರುವವರ ಮೇಲೆ ನಡೆದ ದಾಳಿಯ ನಂತರ ಸಂತ್ರಸ್ತರಿಂದ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿರುವ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಪೊಲೀಸರು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳದೆ ಇದ್ದರೆ ಕೈಥುನ ನಗರ ಬಂದ್ ಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ !

ಪೊಲೀಸರಿಂದ ಹಿಂದೂಗಳಿಗೆ ನ್ಯಾಯ ನೀಡುವ ಬದಲು ಅವರ ಮೇಲೆ ಲಾಠಿಚಾರ್ಜ್ ಮಾಡುತ್ತಾರೆ, ಇದು ಅಸಮಾಧಾನ ಕಾರಕವಾಗಿದೆ ! ಭಾಜಪ ಸರಕಾರವು ಇದರ ಕಡೆಗೆ ಗಮನ ಹರಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !