ಪ್ರಾಣಿಗಳ ಹರಾಜಿನಲ್ಲಿ ಹೊಸ ದಾಖಲೆ !
ಬ್ರೆಸಿಲಿಯಾ (ಬ್ರೆಜಿಲ್) – ಭಾರತದಲ್ಲಿ ಹಸುಗಳ ಸರಾಸರಿ ಬೆಲೆ 2,500 ರಿಂದ 11,000 ರೂಪಾಯಿ ಇದೆ, ಆದರೆ ದಕ್ಷಿಣ ಅಮೇರಿಕಾದ ದೇಶವಾದ ಬ್ರೆಜಿ಼ಲ್‌ನಲ್ಲಿ ಭಾರತೀಯ ತಳಿಯ ಅಂಗೋಲಾ ಹಸು ಬರೋಬ್ಬರಿ 40 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಇತ್ತೀಚಿನ ಜಾನುವಾರು ಹರಾಜಿನಲ್ಲಿ ಇದು ಹೊಸ ದಾಖಲೆಯಾಗಿದೆ. ಈ ಹಸು ಆಂಧ್ರಪ್ರದೇಶದ ನೆಲ್ಲೂರು ಮೂಲದ ‘ವಿಯಾಟಿನಾ-19 ಎಫ್.ಐ.ವಿ. ಇದು ಮಾರಾ ಎಮೋವಿಸ್’ ತಳಿಗೆ ಸೇರಿದೆ. ಬ್ರೆಜಿ಼ಲ್‌ನಲ್ಲಿ ನಡೆದ ಹರಾಜಿನಲ್ಲಿ ಈ ಹಸುವನ್ನು 48 ಲಕ್ಷ ಡಾಲರ್ ಅಂದರೆ 40 ಕೋಟಿ ರೂಪಾಯಿಗೆ ಖರೀದಿಸಲಾಗಿದೆ.
(ಸೌಜನ್ಯ – Kisan Tak)
ಬಿಳಿ ಬಣ್ಣ ಮತ್ತು ವಿಶಿಷ್ಟವಾದ ಗೂನು ಭುಜ ಹೊಂದಿರುವ ಭಾರತೀಯ ಮೂಲದ ಹಸುವಿನ ಈ ತಳಿಗೆ ಬ್ರೆಜಿ಼ಲ್‌ನಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ತಳಿಯ ಶಾಸ್ತ್ರೀಯ ಹೆಸರು ‘ಬಾಸ್ ಇಂಡಿಕಸ್’ ಆಗಿದೆ. ವಿಜ್ಞಾನಿಗಳ ಪ್ರಕಾರ, ಹಸುವಿನ ಈ ತಳಿಯು ಅದರ ಶಕ್ತಿಗೆ ಹೆಸರುವಾಸಿಯಾಗಿದೆ, ಜೊತೆಗೆ ಇದು ತಾನಿರುವ ಪರಿಸರಕ್ಕೆ ಹೊಂದಿಕೊಳ್ಳುತ್ತದೆ. ಈ ತಳಿಯನ್ನು ಮೊದಲು ಬ್ರೆಜಿ಼ಲ್‌ಗೆ 1868 ರಲ್ಲಿ ಹಡಗಿನ ಮೂಲಕ ಸಾಗಿಸಲಾಗಿತ್ತು. 1960ರ ದಶಕದಲ್ಲಿ ಇನ್ನೂ ಹಲವು ಹಸುಗಳನ್ನು ಅಲ್ಲಿಗೆ ಸಾಗಿಸಲಾಗಿತ್ತು. ಅದರ ಬಲವಾದ ಜೀರ್ಣಕ್ರಿಯೆ ವ್ಯವಸ್ಥೆಯಿಂದಾಗಿ, ಅದಕ್ಕೆ ಯಾವುದೇ ರೀತಿಯ ಸೋಂಕುಗಳು ಆಗುವುದಿಲ್ಲ. ಬ್ರೆಜಿ಼ಲ್‌ನಲ್ಲಿನ ಬಿಸಿ ವಾತಾವರಣವನ್ನು ಗಮನಿಸಿದರೆ, ಈ ಹಸು ಅಲ್ಲಿರಲು ಒಲವು ಹೊಂದಿದೆ. ಅದಕ್ಕಾಗಿಯೇ ಬ್ರೆಜಿಲ್‌ನಲ್ಲಿ ಒಟ್ಟು 80 % ಈ ತಳಿಯ ಹಸುಗಳು ಇವೆ.