ಬೇಸಿಗೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಯಾವುದೇ ಪೂರ್ವನಿಯೋಜನೆಯಿಲ್ಲದ ವ್ಯವಸ್ಥೆ !
ತುಳಜಾಪುರ – ಏಪ್ರಿಲ್ ತಿಂಗಳು ಆರಂಭವಾಗಿದ್ದು, ಬಿಸಿಲಿನ ತಾಪಮಾನ 38 ಡಿಗ್ರಿ ತಲುಪಿದೆ. ಬಿಸಿಲಿನ ತಾಪದಿಂದ ಭಕ್ತರಿಗೆ ದೊಡ್ಡ ಪ್ರಮಾಣದಲ್ಲಿ ಅನಾನುಕೂಲವಾಗುತ್ತಿದ್ದು, ಶ್ರೀ ತುಳಜಾಪುರ ದೇವಸ್ಥಾನದ ಆಡಳಿತ ಮಂಡಳಿಯಿಂದ ಸೂಕ್ತ ನಿಯೋಜನಾಬದ್ಧ ಕಾರ್ಯನಿರ್ವಹಣೆಯಿಲ್ಲದ ಕಾರಣ ಶ್ರೀ ತುಳಜಾಪುರ ದೇವಸ್ಥಾನದ ಭಕ್ತರು ದೊಡ್ಡ ಪ್ರಮಾಣದಲ್ಲಿ ಅನಾನುಕೂಲವನ್ನು ಎದುರಿಸಬೇಕಾಗುತ್ತಿದೆ. ದೇವಸ್ಥಾನದ ಪರಿಸರದಲ್ಲಿ ಭಕ್ತರನ್ನು ಬಿಸಿಲಿನಿಂದ ರಕ್ಷಿಸಲು ಮಂಟಪ ನಿರ್ಮಿಸಲು ಕಳೆದ ವರ್ಷ ತಂದಿದ್ದ ಕಬ್ಬಿಣದ ಕಂಬಗಳು ಆಡಳಿತ ಭವನದ ಮುಂದೆ ಧೂಳು ತಿನ್ನುತ್ತ ಬಿದ್ದಿವೆ. ದೇವಸ್ಥಾನದ ಪರಿಸರದಲ್ಲಿ ಭಕ್ತರು ಕುಡಿಯುವ ನೀರಿನ ಕೊರತೆಯಿಂದ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಕಡೆಗೆ ಮಂದಿರದ ಆಡಳಿತ ಮಂಡಳಿ ಅಥವಾ ನಗರ ಪರಿಷತ್ತಿನ ಗಮನವಿಲ್ಲ !
ಸಂಪಾದಕೀಯ ನಿಲುವುಇದು ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮವೇ ಆಗಿದೆ ! ಇದನ್ನು ತಡೆಯಲು ದೇವಸ್ಥಾನಗಳ ಆಡಳಿತವನ್ನು ಭಕ್ತರ ವಶಕ್ಕೆ ನೀಡುವುದು ಆವಶ್ಯಕವಾಗಿದೆ ! |