ರಾಷ್ಟ್ರೀಯ ಸ್ವಯಂಸೇವಕ ಸಂಘದ ೩ ಕಾರ್ಯಕರ್ತರನ್ನು ೭ ವರ್ಷದ ನಂತರ ಖುಲಾಸೆ !

  • ೭ ವರ್ಷದ ಹಿಂದೆ ಕೇರಳದಲ್ಲಿ ನಡೆದಿದ್ದ ಕೊಲೆ ಪ್ರಕರಣ

  • ಈ ಕಾರ್ಯಕರ್ತರು ಜೈಲಿನಲ್ಲಿ ೭ ವರ್ಷ ಕಳೆಯಬೇಕಾಯಿತು !

ಕಾಸರಗೋಡು (ಕೇರಳ) – ಇಲ್ಲಿ ೨೦೧೭ ರಲ್ಲಿ ರಿಯಾಜ್ ಮೌಲ್ವಿ (ವಯಸ್ಸು ೨೭ ವರ್ಷ) ಇವನ ಕೊಲೆ ಪ್ರಕರಣದ ಆರೋಪಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ೩ ಕಾರ್ಯಕರ್ತರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಖಿಲೇಶ (ವಯಸ್ಸು ೩೪ ವರ್ಷ), ಜಿತಿನ್ (ವಯಸ್ಸು ೨೮ ವರ್ಷ) ಮತ್ತು ಅಜೇಶ್ (ವಯಸ್ಸು ೨೯ ವರ್ಷ) ಎಂದು ಅವರ ಹೆಸರುಗಳಾಗಿವೆ. ಅವರು ೭ ವರ್ಷ ಜೈಲಿನಲ್ಲಿ ಕಳೆದಿದ್ದಾರೆ.

೧. ಕಾಸರಗೋಡಿನ ಹಳೆಸುರ್ಲುದ ಮದರಸಾದಲ್ಲಿ ಶಿಕ್ಷಕನೆಂದು ಕೆಲಸ ಮಾಡುವ ಮಹಮ್ಮದ್ ರಿಯಾಜ್ ಮೌಲ್ವಿಯನ್ನು ಮಾರ್ಚ್ ೨೦, ೨೦೧೭ ರಂದು ಬೆಳಿಗ್ಗೆ ಮಸೀದಿಗೆ ನುಗ್ಗಿ ಮಾರಕಾಸ್ತ್ರದಿಂದ ಹತ್ಯೆ ಮಾಡಲಾಗಿತ್ತು. ಘಟನೆಯ ಮೂರು ದಿನಗಳ ನಂತರ ಮೇಲಿನ ಆರೋಪಿಗಳನ್ನು ಬಂಧಿಸಲಾಗಿತ್ತು.

೨. ನ್ಯಾಯಾಲಯದ ತೀರ್ಪಿನ ಬಗ್ಗೆ ರಿಯಾಜ್ ಮೌಲ್ವಿ ಇವನ ಪತ್ನಿ ಸಯಿದಾಳು, ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇತ್ತು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವುದು ಎಂದು ಅನಿಸಿತ್ತು; ಆದರೆ ನಮಗೆ ನ್ಯಾಯ ಸಿಗಲಿಲ್ಲ ಎಂದು ಹೇಳಿದಳು.

ಸಂಪಾದಕೀಯ ನಿಲುವು

ನಿರಪರಾಧಿ ಇರುವಾಗಲೂ ೭ ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು ಇದಕ್ಕೆ ಯಾರು ಹೊಣೆ, ಅವರಿಗೆ ಶಿಕ್ಷೆ ಏಕೆ ಆಗುತ್ತಿಲ್ಲ ? ಈ ನಿರಪರಾಧಿಗಳಿಗೆ ನಷ್ಟ ಪರಿಹಾರ ಏಕೆ ನೀಡುತ್ತಿಲ್ಲ ?