ನರಭಕ್ಷಕ ಸಾಜೀದ್‌ ಹಾಗೂ ಜಾವೇದ್‌ !

(ಎಡದಿಂದ) ಸಾಜೀದ್‌ ಮತ್ತು ಜಾವೇದ್‌

ಉತ್ತರಪ್ರದೇಶದ ಬದಾಯೂಂನಲ್ಲಿನ ಘಟನೆಯಲ್ಲಿ ಸಾಜೀದ್‌ನು ಇಬ್ಬರು ಚಿಕ್ಕ ಹಿಂದೂ ಮಕ್ಕಳ ಕತ್ತು ಸೀಳಿ ಅವರ ರಕ್ತವನ್ನು ಕುಡಿದನು. ಪೊಲೀಸರು ಸಾಜೀದ್‌ನನ್ನು ಚಕಮಕಿಯಲ್ಲಿ ಕೊಂದಿದ್ದಾರೆ ಮತ್ತು ತಪ್ಪಿಸಿಕೊಂಡಿದ್ದ ಆತನ ಸಹೋದರ ಜಾವೇದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಮನುಕುಲಕ್ಕೇ ಕಳಂಕ ತರುವ ಘಟನೆಯಾಗಿದೆ. ಈ ಘಟನೆಯ ನಂತರ ಸ್ಥಳೀಯರು ಸಾಜೀದ್‌ನ ಕ್ಷೌರದಂಗಡಿಯನ್ನು ಸುಟ್ಟು ಹಾಕಿದರು. ನಾಗರಿಕರು ‘ಸಾಜೀದ್‌ ಮತ್ತು ಜಾವೇದ್‌ನನ್ನೂ ಸುಟ್ಟು ಹಾಕಿ’ ಎಂದು ಹೇಳುತ್ತಿದ್ದರು. ಇಂತಹ ಬರ್ಬರ ಹತ್ಯೆಯ ಬಗ್ಗೆ ಜನರ ಪ್ರತಿಕ್ರಿಯೆ ಇಷ್ಟು ತೀವ್ರವಾಗಿರುವುದು ಸ್ವಾಭಾವಿಕವೇ ಆಗಿದೆ. ಬಲಾತ್ಕಾರ ಮಾಡಿ ನಂತರ ಹತ್ಯೆ ಮಾಡುವ ಅನೇಕ ಘಟನೆಗಳಲ್ಲಿ ನಾಗರಿಕರು ಆರೋಪಿಗಳನ್ನು ತಕ್ಷಣ ಗಲ್ಲಿಗೇರಿಸುವಂತೆ ಆಗ್ರಹಿಸುವ ಅನೇಕ ಘಟನೆಗಳು ಈ ಹಿಂದೆಯೂ ಘಟಿಸಿವೆ. ಇದರಿಂದ ‘ನಾಗರಿಕರಲ್ಲಿ ಇಂತಹ ಘಟನೆಗಳ ಬಗ್ಗೆ ಎಷ್ಟು ಆಕ್ರೋಶವಿರುತ್ತದೆ’, ಎಂಬುದು ತಿಳಿಯುತ್ತದೆ. ಉತ್ತರಪ್ರದೇಶದ ಪೊಲೀಸರು ಈ ಮೇಲಿನ ಘಟನೆಯಲ್ಲಿ ಸಾಜೀದ್‌ನನ್ನು ಚಕಮಕಿಯಲ್ಲಿ ಹತ್ಯೆಗೈಯ್ದಿದ್ದರಿಂದ ಜನರ ಸಿಟ್ಟು ಸ್ವಲ್ಪ ಮಟ್ಟಿಗೆ ಶಮನವಾದರೂ, ಸಾಜೀದ್‌ನ ಸಹೋದರ ಜಾವೇದ್‌ನನ್ನು ಕೂಡ ಹತ್ಯೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಹತ್ಯೆಯ ಹಿಂದೆ ಯಾವ ಉದ್ದೇಶವಿತ್ತು ?

ಎಂಬುದು ಇದುವರೆಗೆ ಬೆಳಕಿಗೆ ಬಂದಿಲ್ಲ. ಕೊಲೆಯಾದ ಮಕ್ಕಳ ತಂದೆಯವರು ‘ನಮಗೆ ಸಾಜೀದ್‌ ಜೊತೆಗೆ ಯಾವುದೇ ಶತ್ರುತ್ವವಿರಲಿಲ್ಲ’, ಎಂದು ಹೇಳಿದ್ದಾರೆ. ಸಾಜೀದ್‌ನು ಈ ಕುಟುಂಬದಿಂದ ೫ ಸಾವಿರ ರೂಪಾಯಿ ಸಾಲ ಕೇಳಿದ್ದನು ಹಾಗೂ ಅದನ್ನು ಕೊಡಲು ಒಪ್ಪಿಕೊಂಡಿದ್ದರು ಕೂಡ. ಆದರೂ ಸಾಜೀದ್‌ ಈ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವುದರಿಂದ ‘ಈ ಹತ್ಯೆಯ ಕಾರಣವೇನು ?’ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಪೊಲೀಸರು ಜಾವೇದ್‌ನ ವಿಚಾರಣೆ ನಡೆಸಿದಾಗ ಹತ್ಯೆಯ ಹಿಂದಿನ ಕಾರಣ ತಿಳಿಯುವುದು. ಆದರೂ ಯಾರೊಬ್ಬರ ವಿಷಯದಲ್ಲಿ ಮನಸ್ಸಿನಲ್ಲಿ ಶತ್ರುತ್ವವಿದ್ದರೂ, ಇಷ್ಟು ಕ್ರೂರವಾಗಿ ಯಾರೊಂದಿಗೂ ವರ್ತಿಸಲಿಕ್ಕಿಲ್ಲ. ಆದ್ದರಿಂದ ‘ಈ ಹತ್ಯೆ ಕೋಮುಭಾವನೆಯಿಂದ ಆಗಿದೆಯೇ ?’, ಎಂಬ ಸಂದೇಹ ವ್ಯಕ್ತವಾಗುತ್ತಿದೆ. ಅದನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಅದೇ ಕಾರಣವಾಗಿದ್ದರೆ, ಇದು ತುಂಬಾ ಗಂಭೀರ ವಿಷಯವಾಗುತ್ತದೆ.

ಮನೋವೃತ್ತಿಯನ್ನು ಬದಲಾಯಿಸಿರಿ !

ಈ ರೀತಿ ಧರ್ಮದ ಆಧಾರದಲ್ಲಿ ಹತ್ಯೆಗಳಾಗಲು ಆರಂಭವಾದರೆ, ಹಿಂದೂಗಳು ಭಯದ ಕರಿನೆರಳಲ್ಲಿಯೇ ಇರ ಬೇಕಾಗುವುದು. ಯಾವ ಮುಸಲ್ಮಾನನ ಮೇಲೆಯೂ ವಿಶ್ವಾಸ ವಿಡಲು ಸಾಧ್ಯವಿಲ್ಲ. ಇದುವರೆಗೆ ಅಂತಹ ಸ್ಥಿತಿಯಂತೂ ಉದ್ಭವಿಸಿಲ್ಲ. ಆದರೂ ಆಗಾಗ ಇಂತಹ ಘಟನೆಗಳಾಗುತ್ತವೆ, ಎಂಬುದನ್ನೂ ಅಲ್ಲಗಳೆಯಲೂ ಸಾಧ್ಯವಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿದ್ದ ಹಿಂದೂವಿನ ಅಂಗಡಿಯಲ್ಲಿ ಹನುಮಾನ ಚಾಲೀಸಾ ಹಾಕಿದ್ದಕ್ಕಾಗಿ ಮುಸಲ್ಮಾನರು ಅಂಗಡಿಯಲ್ಲಿದ್ದ ಹಿಂದೂ ಯುವಕನಿಗೆ ಹೊಡೆದಿದ್ದರು. ಯಾರೇ ಒಬ್ಬ ಅಪರಾಧಿಯನ್ನು ಹತ್ಯೆ ಮಾಡುವುದು ಅಥವಾ ದಂಡಿಸುವುದು ಸುಲಭವಿರುತ್ತದೆ; ಆದರೆ ಆ ವ್ಯಕ್ತಿಯ ಮನೋವೃತ್ತಿಯನ್ನು ಬದಲಾಯಿಸುವುದು ಕಷ್ಟವಿರುತ್ತದೆ. ಅಧ್ಯಾತ್ಮ ಶಾಸ್ತ್ರಕ್ಕನುಸಾರ ಇಂತಹ ವ್ಯಕ್ತಿ ಪುನಃ ಜನ್ಮ ಪಡೆಯುವಾಗ ತನ್ನ ಅದೇ ಮಾನಸಿಕತೆಯೊಂದಿಗೆ ಜನಿಸುತ್ತಾನೆ. ಅವನ ಮೇಲೆ ಒಳ್ಳೆಯ ಸಂಸ್ಕಾರವಾಗದಿದ್ದರೆ, ಪುನಃ ಅವನು ಇಂತಹ ಕೃತ್ಯಗಳನ್ನೇ ಮಾಡಬಹುದು. ಇದರ ಬಗ್ಗೆ ವಿಚಾರ ಮಾಡಿದಾಗ ಅಪರಾಧಿಗಳ ಮನೋವೃತ್ತಿಯನ್ನು ಬದಲಾಯಿಸಲು ಪ್ರಯತ್ನಿಸಬೇಕಾಗಿದೆ, ಎನಿಸುತ್ತದೆ. ಸದ್ಯ ಅಪರಾಧಿಗಳಿಗೆ ಶಿಕ್ಷೆಯಾಗಿ ಅವರು ಅನೇಕ ವರ್ಷ ಸೆರೆಮನೆಯಲ್ಲಿದ್ದರೂ, ಅವರ ಮನೋವೃತ್ತಿಯಲ್ಲಿ ಬದಲಾವಣೆಯಾಗಿರುವುದು ಎಲ್ಲಿಯೂ ಕಾಣಿಸುವುದಿಲ್ಲ. ಅನೇಕ ಬಾರಿ ವಯಸ್ಸಾದ ನಂತರ ಇಂತಹ ಅಪರಾಧಿಗಳು ಪುನಃ ಅಪರಾಧ ಮಾಡುವುದಿಲ್ಲ ಹಾಗೂ ಯಾರಿಂದ ಅಪ್ಪಿತಪ್ಪಿ ಅಪರಾಧ ವಾಗಿದೆಯೋ, ಅವರು ಪುನಃ ಇಂತಹ ಅಪರಾಧ ಮಾಡುವುದಿಲ್ಲ.

ಇಚ್ಛಾಶಕ್ತಿ ಬೇಕು !

ಹಿಂದೂಗಳು ಮೂಲತಃ ಸಹಿಷ್ಣು ಮನೋವೃತ್ತಿಯವರಾಗಿರುತ್ತಾರೆ. ಆದರೂ ಅವರಿಂದ ಅಪರಾಧವಾಗುತ್ತದೆ. ಅನೇಕ ಕ್ರೂರ ಹಾಗೂ ಕುಖ್ಯಾತ ಅಪರಾಧಿಗಳೂ ಇದ್ದಾರೆ; ಆದರೆ ಸಾಜೀದ್‌ ಹಾಗೂ ಜಾವೇದ್‌ನಂತೆ ಜನರ ಹತ್ಯೆ ಮಾಡಿ ರಕ್ತ ಕುಡಿಯುವಂತಹ ಮಾನಸಿಕತೆ ಅವರಲ್ಲಿ ಕಾಣಿಸುವುದಿಲ್ಲ. ಸಾಜೀದ್‌ನಂತಹ ಮನೋವೃತ್ತಿಯ ಜನರ ಜಿಹಾದಿ ಭಯೋತ್ಪಾದನೆಯು ಇಡೀ ಜಗತ್ತಿನಾದ್ಯಂತ ಕಂಡು ಬರುತ್ತದೆ. ಬದಾಯೂಂ ಘಟನೆಯನ್ನು ಈಗ ಇದನ್ನು ಗಂಭೀರವಾಗಿ ಪರಿಗಣಿಸಿ ದೇಶದಲ್ಲಿ ಇದರ ಬಗ್ಗೆ ಚರ್ಚೆ ನಡೆಯಬೇಕು. ಇಂತಹ ಮಾನಸಿಕತೆಯನ್ನು ಬದಲಾಯಿಸಲು ಚೀನಾದ ಹಾಗೆ ಪ್ರಯತ್ನಿಸಲು ಯಾರಾದರೂ ಹೇಳಿದರೆ, ಅದು ತಪ್ಪಾಗದು. ಚೀನಾದಲ್ಲಿ ಉಘೂರ ಮುಸಲ್ಮಾನರನ್ನು ಅವರಲ್ಲಿನ ಮೂಲಭೂತವಾದವನ್ನು ನಷ್ಟಗೊಳಿಸುವುದರೊಂದಿಗೆ ಇಸ್ಲಾಮೀ ಮಾನಸಿಕತೆಯಿಂದ ಹೊರಗೆ ತೆಗೆದು ಮುಖ್ಯಪ್ರವಾಹದಲ್ಲಿ ತರಲು ಪ್ರಯತ್ನಿಸÀಲಾಗುತ್ತಿದೆ. ೧೦ ಲಕ್ಷ ಮುಸಲ್ಮಾನರನ್ನು ಸುಧಾರಣಾಗೃಹದಲ್ಲಿಡಲಾಗಿದ್ದು ಅವರ ಎಲ್ಲ ಧಾರ್ಮಿಕ ಕೃತಿಗಳ ಮೇಲೆ, ಧಾರ್ಮಿಕ ಸ್ಥಳಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗೆ ಚೀನಾದಲ್ಲಿ ನಡೆಯುತ್ತದೆ ಹಾಗೂ ಇಸ್ಲಾಮೀ ದೇಶಗಳೂ ಇದರ ಬಗ್ಗೆ ಮೌನವಾಗಿವೆ, ಎಂಬುದನ್ನು ಗಮನಿಸಬೇಕು. ಭಾರತದಲ್ಲಿ ಹೀಗೆ ಏನಾದರೂ ಮಾಡುವುದು ಅಸಾಧ್ಯವೆನಿಸುತ್ತದೆ, ಆದರೂ ಮಾನಸಿಕತೆಯನ್ನು ಬದಲಾಯಿಸಲು ಪ್ರಯತ್ನಿಸಬಹುದು. ಅಂತಹ ಇಚ್ಛಾಶಕ್ತಿಯನ್ನು ಸರಕಾರ ತೋರಿಸುವ ಅವಶ್ಯಕತೆಯಿದೆ. ಮುಸಲ್ಮಾನರ ಮತಕ್ಕಾಗಿ ಅವರನ್ನು ಓಲೈಸುವವರು ಹಾಗೆ ಮಾಡಲು ಬಿಡಲಿಕ್ಕಿಲ್ಲ, ಎಂಬುದೂ ಅಷ್ಟೇ ಸತ್ಯವಾಗಿದೆ. ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿದ್ದು ಕಠೋರ ನಿರ್ಣಯ ತೆಗೆದುಕೊಂಡು ಅದನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಆದರೆ ಅದನ್ನು ೨೦ ಕೋಟಿ ಮುಸಲ್ಮಾನರ ವಿಷಯದಲ್ಲಿ ಮಾಡಬೇಕಾಗುವುದು ಅಸಾಧ್ಯವೆನಿಸುತ್ತದೆ. ಸಿ.ಎ.ಎ ಕಾನೂನು ಮುಸಲ್ಮಾನರ ವಿರುದ್ಧ ಇಲ್ಲದಿದ್ದರೂ ಮುಸಲ್ಮಾನರನ್ನು ದಾರಿತಪ್ಪಿಸಲಾಯಿತು. ಆದ್ದರಿಂದ ಅವರಿಂದ ಆಂದೋಲನ ನಡೆಯಿತು. ಆದ್ದರಿಂದ ಇಂತಹ ವಿರೋಧಗಳಾಗುವುದು ನಿಜವೆಂದೇ ತಿಳಿಯಬೇಕು. ಆದರೂ ಯಾವುದು ಸಾಧ್ಯವಿದೆಯೋ, ಅಂತಹ ನಿರ್ಣಯಗಳನ್ನು ತೆಗೆದುಕೊಳ್ಳುವ ಧೈರ್ಯ ಮಾಡಬೇಕಾಗುತ್ತದೆ. ಇದರಲ್ಲಿ ಮೊಟ್ಟಮೊದಲು ಮದರಸಾಗಳನ್ನು ಮುಚ್ಚಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ, ಹಿಜಾಬ್‌ ಇತ್ಯಾದಿ ಉಡುಪುಗಳನ್ನು ಧರಿಸದಂತೆ ನಿರ್ಬಂಧ ಹೇರಬೇಕು. ರಸ್ತೆಯಲ್ಲಿ ನಮಾಜನ್ನು ನಿಲ್ಲಿಸಬೇಕಾಗಬಹುದು. ಅನಧಿಕೃತ ಮಸೀದಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಬಹುದು. ಎಲ್ಲೆಲ್ಲಿ ಹಿಂದೂಗಳ ಮಂದಿರಗಳನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆಯೊ, ಆ ಸ್ಥಳಗಳನ್ನು ಪುನಃ ಹಿಂದೂಗಳಿಗೆ ನೀಡುವ ಕಾನೂನು ಮಾಡಬೇಕು. ಅದರ ಜೊತೆಗೇ ಜಿಹಾದಿ ಮಾನಸಿಕತೆಯಿಂದ ನಡೆಯುವ ಅಪರಾಧಗಳಲ್ಲಿನ ಅಪರಾಧಿಗಳಿಗೆ ತ್ವರಿತಗತಿ ನ್ಯಾಯಾಲಯದಲ್ಲಿ ಖಟ್ಲೆ ನಡೆಸಿ ಕಠೋರ ಶಿಕ್ಷೆ ವಿಧಿಸಬೇಕು. ನಾಲ್ಕೂ ದಿಕ್ಕುಗಳಿಂದ ಒತ್ತಡ ನಿರ್ಮಾಣ ಆದಾಗ ಅದು ಸ್ಫೋಟವಾಗಬಹುದು, ಇದರ ವಿಚಾರ ಮಾಡಿ ಹಾಗೆ ಆಗುವ ಮೊದಲೆ ಅದನ್ನು ಹಿಸುಕಿ ಹಾಕುವ ನಿಯೋಜನೆ ಮಾಡಬೇಕಾಗುತ್ತದೆ. ಇಂತಹ ನಿರ್ಣಯದಿಂದ ‘ನಾವು ಈ ದೇಶದಲ್ಲಿ ಬೇರೆಯೆ ಆಗಿದ್ದೇವೆ ಹಾಗೂ ನಮಗೆ ಯಾರೂ ಏನೂ ಮಾಡುವ ಹಾಗಿಲ್ಲ’, ಎನ್ನುವ ಮಾನಸಿಕತೆ ಹಾಗೂ ಉದ್ಧಟತನವನ್ನು ಜಜ್ಜಿ ಹಾಕಿದರೆ, ಅದರಿಂದ ಯೋಗ್ಯ ಪರಿಣಾಮವಾಗಬಹುದು, ಎಂಬುದರಲ್ಲಿ ಸಂಶಯವಿಲ್ಲ. ಹಾಗೆ ಮಾಡುವ ಅವಶ್ಯಕತೆಯಿದೆ. ಇಂತಹ ಧೈರ್ಯ ತೋರಿಸಿದರೆ ಬದಾಯೂಂ ಮಾತ್ರವಲ್ಲ, ಜಿಹಾದಿ ಭಯೋತ್ಪಾದನೆಗೂ ಬಿಸಿತಟ್ಟುವುದು, ಎಂದು ಜನರಿಗೆ ಅನಿಸುತ್ತದೆ.