ಪ್ರೀತಿಸ್ವರೂಪ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಮತ್ತು ಅವರ ಚೈತನ್ಯಮಯ ನಿವಾಸಸ್ಥಾನ !

ಪೂ. (ಶ್ರೀಮತಿ) ರಾಧಾ ಪ್ರಭು

ಫಾಲ್ಗುಣ ಕೃಷ್ಣ ತೃತೀಯ (೨೮.೩.೨೦೨೪)ದಂದು ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು (ಪಚ್ಚಿ) ಇವರ ೮೭ ನೇ ಹುಟ್ಟುಹಬ್ಬವಿದೆ. ಆ ನಿಮಿತ್ತ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರ !

ಸೌ. ರಾಧಾ ಮಂಜುನಾಥ

ಶೇ. ೬೫ ಆಧ್ಯಾತ್ಮಿಕ ಮಟ್ಟದ ಸೌ. ರಾಧಾ ಮಂಜುನಾಥ ಇವರಿಗೆ ಪೂ. ರಾಧಾ ಪ್ರಭು ಇವರ ನಿವಾಸಸ್ಥಾನದಲ್ಲಿ ಬಂದಿರುವ ಅನುಭೂತಿಯನ್ನು ಮುಂದೆ ಕೊಡಲಾಗಿದೆ.

೧. ಪೂ. ರಾಧಾ ಪ್ರಭು ಇವರ ಮನೆಯಲ್ಲಿನ ಚೈತನ್ಯ

‘ನಾನು ಪೂ. ರಾಧಾ ಪ್ರಭು ಅಜ್ಜಿಯವರ ಮನೆಯೊಳಗೆ ಪ್ರವೇಶಿಸುತ್ತಲೆ ನನಗೆ ಶಾಂತವೆನಿಸಿ ತಂಪು ವಾತಾವರಣದ ಅನುಭವವಾಯಿತು. ಅಲ್ಲಿದ್ದ ಸುಖಾಸನದ ಮೇಲೆ ಕುಳಿತಾಗ ‘ನಾನು ಸಂಪೂರ್ಣ ಭಾವದ ಸ್ಥಿತಿಯ ಲ್ಲಿದ್ದು ನನಗೆ ಚೈತನ್ಯ ಸಿಗುತ್ತಿದೆ’, ಎಂದು ಅರಿವಾಯಿತು.

೨. ಪೂ. ರಾಧಾ ಪ್ರಭು ಇವರ ದೇವರ ಕೋಣೆಯನ್ನು ನೋಡುವಾಗ ಬಂದ ಅನುಭೂತಿ

೨ ಅ. ಪೂ. ರಾಧಾ ಪ್ರಭು ಇವರ ದೇವರ ಕೋಣೆ ಯಲ್ಲಿನ ಪ.ಪೂ. ಭಕ್ತರಾಜ ಮಹಾರಾಜ, ಪ.ಪೂ. ಗುರುದೇವರ ಛಾಯಾಚಿತ್ರ ಗಳು ಹಾಗೂ ಶ್ರೀಕೃಷ್ಣನ ಚಿತ್ರ ಸಜೀವವಾಗಿ ಕಾಣಿಸುವುದು : ಪೂ. ರಾಧಾ ಪ್ರಭು ಇವರು ನನಗೆ ಅವರ ದೇವರಕೋಣೆಯನ್ನು ತೋರಿಸಿದರು. ಆಗ ನನಗೆ ದೇವರ ಕೋಣೆಯಲ್ಲಿನ ಪ.ಪೂ. ಭಕ್ತರಾಜ ಮಹಾರಾಜರು, ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಛಾಯಾಚಿತ್ರಗಳು ಮತ್ತು ಶ್ರೀಕೃಷ್ಣನ ಚಿತ್ರ ಸಜೀವವಾಗಿರುವುದು ಅರಿವಾಯಿತು.

೨ ಆ. ದೇವರಕೋಣೆಯಲ್ಲಿನ ಪ.ಪೂ.ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಚರಣಗಳನ್ನು ನೋಡುವಾಗ ನನಗೆ ಅದರಲ್ಲಿ ಅವರ ಅಸ್ತಿತ್ವದ ಅರಿವಾಗುತ್ತಿತ್ತು.

೨ ಇ. ಪೂ. ರಾಧಾ ಪ್ರಭು ಇವರ ದೇವರಕೋಣೆಯಲ್ಲಿನ ‘ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿಂದ ಪ್ರಕ್ಷೇಪಿಸುತ್ತಿದ್ದ ಚೈತನ್ಯದಿಂದ ನಾನು ತುಂಬಿ ಹೋದೆ : ಪೂ. ರಾಧಾ ಪ್ರಭು ಇವರ ದೇವರಕೋಣೆಯಲ್ಲಿ ‘ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿವೆ. ‘ಈ ಮೂರ್ತಿಗಳು ಅವರ ಮನೆಯಲ್ಲಿ ಕಳೆದ ೫೦ ವರ್ಷಗಳಿಂದ ಇವೆ’, ಎಂದು ಅವರು ಹೇಳಿದರು. ಆ ಮೂರ್ತಿಗಳಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯವು ನನ್ನ ಶರೀರದೊಳಗೆ ಪ್ರವೇಶಿಸುತ್ತಿದ್ದಂತೆ ‘ನಾವು ಮಳೆಯಲ್ಲಿ ಹೋದಾಗ ಹೇಗೆ ಒದ್ದೆಯಾಗುತ್ತೇವೆಯೊ’, ಹಾಗೆಯೆ ಚೈತನ್ಯದಿಂದ ನಾನು ತೊಯ್ದುಹೋಗಿದ್ದೆ. ಆ ಮೂರ್ತಿಗಳು ಇದೀಗ ಹೊಸತಾಗಿ ತಂದಿರುವ ಹಾಗೆ ಹೊಳೆಯುತ್ತಿದ್ದವು.

೨ ಈ. ಮೂರ್ತಿಯಿಂದ ಪ್ರಕ್ಷೇಪಣೆಯಾಗುವ ಚೈತನ್ಯದಿಂದ ಹಗುರವೆನಿಸುವುದು : ಆ ಮೂರ್ತಿಗಳನ್ನು ನೋಡಿದಾಗ ನನ್ನ ಭಾವಜಾಗೃತಿಯಾಯಿತು. ‘ನನ್ನ ಸಹಸ್ರಾರಚಕ್ರದಿಂದ ಸೆಳೆಯ ಲ್ಪಡುವ ಚೈತನ್ಯದಲ್ಲಿ ನಾನು ಸಂಪೂರ್ಣ ಮುಳುಗಿಹೋದೆ. ನನ್ನ ಶರೀರದಲ್ಲಿನ ತೊಂದರೆದಾಯಕ ಆವರಣ ದೂರವಾಗಿ ನನಗೆ ಹಗುರವೆನಿಸಿತು. ಇವೆಲ್ಲವನ್ನೂ ಅನುಭವಿಸುತ್ತಿರುವಾಗ ನನಗೆ ‘ಈ ಸ್ಥಿತಿಯಿಂದ ಹೊರಗೆ ಬರಲೇಬಾರದು’, ಎಂದು ಅನಿಸುತ್ತಿತ್ತು.

೩. ಪೂ. ರಾಧಾ ಪ್ರಭು ಇವರ ಮನೆಯಲ್ಲಿನ ಪ್ರತಿಯೊಂದು ಕೋಣೆಯಲ್ಲಿ ದೇವತೆಗಳ ಅಸ್ತಿತ್ವದ ಅನುಭವವಾಗುವುದು

೩ ಅ. ಅಡುಗೆಮನೆಗೆ ಹೋದಾಗ ನನಗೆ ‘ಅಲ್ಲಿ ಸಾಕ್ಷಾತ್‌ ಶ್ರೀ ಅನ್ನಪೂರ್ಣಾದೇವಿಯೆ ವಾಸವಾಗಿದ್ದಾಳೆ’, ಎಂದು ಅನಿಸಿತು.

೩ ಆ. ಪೂ. ಭಾರ್ಗವರಾಮ ಇವರಲ್ಲಿ ಅನುಭವಿಸಿದ ಕೃಷ್ಣತತ್ತ್ವ ! : ಪೂ. ರಾಧಾ ಪ್ರಭು ಮತ್ತು ಭಾರ್ಗವರಾಮರ ಕೋಣೆಯನ್ನು ಪ್ರವೇಶಿಸಿದ ತಕ್ಷಣ ನನಗೆ ಅಲ್ಲಿ ಶ್ರೀಷ್ಣನ ಅಸ್ತಿತ್ವದ ಅರಿವಾಯಿತು ಹಾಗೂ ನನ್ನ ಭಾವಜಾಗೃತಿಯಾಯಿತು. ಪೂ. ಭಾರ್ಗವರಾಮರು ನನಗೆ ”ನನ್ನ ಕಾಲಿಗೆ ಗಾಯವಾಗಿದೆ,’’ ಎಂದು ಹೇಳಿದರು. ಆಗ ನನಗೆ ಅವರಲ್ಲಿನ ವಿರಕ್ತ ಭಾವದ ದರ್ಶನವಾಯಿತು. ನನಗೆ ‘ತುಂಟ ಶ್ರೀಕೃಷ್ಣ ಯಶೋದೆಗೆ ಹೇಳುತ್ತಿದ್ದಾನೆ’, ಎಂದು ಅನಿಸಿತು. ಈ ಪ್ರಸಂಗವನ್ನು ಅನುಭವಿಸುವಾಗ ನನ್ನ ಭಾವಜಾಗೃತಿಯಾಯಿತು.

೩ ಇ. ‘ನಡುಮನೆಗೆ ಹೋದಾಗ ದೇವಸ್ಥಾನದ ಗರ್ಭಗುಡಿಯಲ್ಲಿದ್ದೇನೆ’, ಎಂದು ಅರಿವಾಗುವುದು : ನಡುಮನೆಗೆ ಹೋದಾಗ ‘ನಾನು ದೇವಸ್ಥಾನದ ಗರ್ಭಗುಡಿಯಲ್ಲಿಯೇ ಇದ್ದೇನೆ’, ಎಂದು ಅನಿಸಿತು. ಆಗ ‘ನಾನು ಎಲ್ಲ ದೇವತೆಗಳು ಮತ್ತು ಗುರುದೇವರಿಗೆ ಪ್ರದಕ್ಷಿಣೆ ಹಾಕುತ್ತಿದ್ದು ಅದರಿಂದ ನನಗೆ ಚೈತನ್ಯ ಸಿಗುತ್ತಿದೆ’, ಎಂದು ಅನಿಸುತ್ತಿತ್ತು. ಆಗ ನನ್ನಲ್ಲಿ ಗುರುದೇವರ ಬಗ್ಗೆ ಕೃತಜ್ಞತೆ ವ್ಯಕ್ತವಾಯಿತು.

೪. ಪೂ. ರಾಧಾ ಪ್ರಭು ಇವರ ಪ್ರೀತಿ

ಅ. ಪೂ. ರಾಧಾ ಪ್ರಭು ಇವರು ನನಗೆ ಕುಳಿತುಕೊಳ್ಳಲು ಕುರ್ಚಿ ತಂದು ಕೊಟ್ಟು ಹೇಳಿದರು, ”ನೀವು ಪ್ರತಿದಿನ ಇಲ್ಲಿ ನಾಮಜಪ ಮಾಡಲು ಬರಬಹುದು’’ ನನ್ನ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಆಗಿ ಒಂದು ವರ್ಷವಾಗಿದೆ. ಅವರು ಆ ವಿಷಯವನ್ನು ಆತ್ಮೀಯತೆಯಿಂದ ವಿಚಾರಿಸಿದರು. ಅವರು ಹೇಳಿದರು, ”ಪ್ರತಿದಿನ ವಾಯುವಿಹಾರಕ್ಕೆ ಹೋಗಿರಿ. ಅದರಿಂದ ನಿಮ್ಮ ಶಾರೀರಿಕ ತೊಂದರೆ ಕಡಿಮೆಯಾಗಬಹುದು ಹಾಗೂ ನಿಮ್ಮ ಸಾಧನೆಯೂ ಚೆನ್ನಾಗಿ ಆಗುವುದು.’’

ಆ. ಅವರು ಸಂತರಾಗಿದ್ದರೂ ಎಲ್ಲ ಸಾಧಕರೊಂದಿಗೆ ಆತ್ಮೀಯತೆಯಿಂದ ಮಾತನಾಡುತ್ತಾರೆ ಹಾಗೂ ಎಲ್ಲರಿಗೂ ನಿರಂತರ ಆನಂದ ಕೊಡುತ್ತಾರೆ. ಅವರ ಸಹವಾಸದಲ್ಲಿ ನನಗೂ ಆನಂದ ಸಿಗುತ್ತದೆ.

೫. ಪ್ರಾರ್ಥನೆ

‘ಗುರುದೇವರೇ, ಪೂ. ರಾಧಾ ಪ್ರಭು ಮತ್ತು ಅವರ ಕುಟುಂಬದವರ ಹಾಗೆ ನಮ್ಮೆಲ್ಲ ಸಾಧಕರಿಗೆ ನಿರಂತರ ಅಂತರ್ಮುಖವಾಗಿದ್ದು ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಸಾಧ್ಯವಾಗಲಿ’, ಇದೇ ನಿಮ್ಮ ಕೋಮಲ ಚರಣಗಳಲ್ಲಿ ಪ್ರಾರ್ಥನೆ

೬. ಕೃತಜ್ಞತೆ

‘ಕಮಲನಯನ, ಶ್ರೀಕೃಷ್ಣರೂಪಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರೆ, ತಮ್ಮ ಕೃಪೆಯಿಂದ ನನಗೆ ಪೂ. ರಾಧಾ ಪ್ರಭು ಇವರ ಸಹವಾಸದಲ್ಲಿರಲು ಅವಕಾಶ ಸಿಕ್ಕಿದೆ. ಅದಕ್ಕಾಗಿ ನಾನು ತಮ್ಮ ಕೋಮಲ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.’

– ಸೌ. ರಾಧಾ ಮಂಜುನಾಥ (ಆಧ್ಯಾತ್ಮಿಕ ಮಟ್ಟ ಶೇ. ೬೫), ಮಂಗಳೂರು.