‘ಒಂದು ದಿನ ಬೆಳಗ್ಗೆ ನನಗೆ ಅಲ್ಪಾಹಾರ ಮಾಡುವ ಸೇವೆಯಿತ್ತು. ಅದಕ್ಕಾಗಿ ನಾನು ಬೆಳಗ್ಗೆ ಬೇಗನೆ ಎದ್ದೆನು. ರಾತ್ರಿ ಮಲಗುವಾಗ ತಡವಾಗಿತ್ತು. ಆ ದಿನ ಅಲ್ಪಾಹಾರದ ಸೇವೆಯನ್ನು ಬೇಗನೆ ಮುಗಿಸಿ ನಾನು ೯.೩೦ ಕ್ಕೆ ನಾಮಜಪ ಮಾಡಲು ಹೋದೆನು. ರಾತ್ರಿ ನನಗೆ ನಿದ್ರೆ ಕಡಿಮೆಯಾಗಿದ್ದ ಕಾರಣ ನಾನು ನಾಮಜಪ ಪ್ರಾರಂಭಿಸಿದ ೧೦ ನಿಮಿಷದಲ್ಲಿಯೆ ನನಗೆ ನಿದ್ರೆ ಬರಲು ಆರಂಭವಾಯಿತು. ‘ನನಗೆ ನಾಮಜಪ ಮಾಡಲು ಸಾಧ್ಯವಿಲ್ಲ’, ಎಂದು ಅನಿಸಿ ನಾನು ತಕ್ಷಣ ನಿಂತುಕೊಂಡು ನಾಮಜಪ ಮಾಡಲು ಆರಂಭಿಸಿದೆನು. ಪೂ. ರಾಧಾ ಪಚ್ಚಿ ಇವರು ನನ್ನನ್ನು ಕರೆದು ಹೇಳಿದರು, ”ಈ ತೀರ್ಥವನ್ನು ಪ್ರಾಶನ ಮಾಡು, ಇದರಿಂದ ನಿನ್ನ ನಿದ್ರೆ ಹೋಗುವುದು.’’ (ಪೂ. ರಾಧಾ ಪಚ್ಚಿ ನಾಮಜಪ ಮಾಡುವಾಗ ಅವರಿಗೆ ಕುಡಿಯಲು ನೀರನ್ನು ಇಡಲಾಗುತ್ತದೆ. ಅವರಲ್ಲಿ ಅದು ‘ತೀರ್ಥ’ವೆನ್ನುವ ಭಾವವಿದೆ.) ನಾನು ತೀರ್ಥಪ್ರಾಶನ ಮಾಡಿ ಕುಳಿತುಕೊಂಡು ಜಪ ಮಾಡಿದೆ. ಅನಂತರ ನಾಮಜಪ ಪೂರ್ಣವಾಗುವ ವರೆಗೆ ನನಗೆ ನಿದ್ರೆ ಬರಲಿಲ್ಲ ಮತ್ತು ಪ್ರತಿದಿನಕ್ಕಿಂತ ಈ ದಿನ ಹೆಚ್ಚು ಏಕಾಗ್ರತೆಯಿಂದ ನಾಮಜಪವಾಯಿತು. ಇದರಿಂದ ‘ಸಂತರ ಚೈತನ್ಯ ಹೇಗೆ ಕಾರ್ಯ ಮಾಡುತ್ತದೆ’, ಎಂಬುದು ಅರಿವಾಗಿ ಕೃತಜ್ಞತೆ ಅನಿಸಿತು.
– ಕು. ಮಂಗಲಾ ಗೌಡ, ಮಂಗಳೂರು.