ಸ್ವಂತ ಮನಸ್ಸಿನ ಬದಲು ಸಂತರ ಮಾರ್ಗದರ್ಶನದಂತೆ ಕಾರ್ಯ ಮಾಡಿದರೆ, ಅದು ಹೆಚ್ಚು ಉತ್ತಮ ರೀತಿಯಲ್ಲಾಗಿ ಆಧ್ಯಾತ್ಮಿಕ ಉನ್ನತಿಯೂ ಆಗುವುದು !
ಉದ್ಯಮಿಯೊಬ್ಬರಿಗೆ ಭಾರತೀಯ ಭಾಷೆಯ ಮಹತ್ವವು ಗಮನಕ್ಕೆ ಬಂತು. ಅವರೊಂದಿಗೆ ಈ ವಿಷಯದಲ್ಲಿ ಮುಂದಿನ ಸಂಭಾಷಣೆ ನಡೆಯಿತು. – ಪರಾತ್ಪರ ಗುರು ಡಾ. ಆಠವಲೆ
ಉದ್ಯಮಿ : ಈಗ ಒಂದೇ ಒಂದು ಒಳ್ಳೆಯ ಕನ್ನಡ ಮಾಧ್ಯಮ ಶಾಲೆ ಇಲ್ಲ. ಆದ್ದರಿಂದ ನಾನು ಒಂದು ವಿದ್ಯಾಲಯವನ್ನು ತೆರೆಯುವೆನು. ಈಗ ನಗರದಲ್ಲಿ ಎಲ್ಲಾ ಇಂಗ್ಲಿಷ ಮಾಧ್ಯಮ ಶಾಲೆಗಳೇ ಇವೆ.
ಪರಾತ್ಪರ ಗುರು ಡಾ. ಅಠವಲೆ : ಮಾಧ್ಯಮಿಕ ಶಾಲೆ, ಆರಂಭಿಸಲು ಎಷ್ಟು ವರ್ಷ ಬೇಕಾಗುವುದು ?
ಉದ್ಯಮಿ : ಇದಕ್ಕಾಗಿ ಒಂದು ದೊಡ್ಡ ಜಾಗ ಬೇಕು. ಅಂತಹ ಜಾಗ ಹುಡುಕಲು ಒಂದು ವರ್ಷ ಬೇಕಾಗುವುದು. ಅದರ ನಂತರ ಈ ಜಾಗವನ್ನು ವಿಕಸಿತಗೊಳಿಸಬೇಕು; ಆದರೆ ಒಂದೇ ಸಮಯದಲ್ಲಿ ಸಂಪೂರ್ಣ ಕಟ್ಟಡ ನಿರ್ಮಿಸುವುದು ಲಾಭದಾಯಕವಲ್ಲ. ಏಕೆಂದರೆ ಶಿಶುವಿಹಾರಕ್ಕೆ ಸೇರಿದ ಮೊದಲ ವಿದ್ಯಾರ್ಥಿಗಳೇ ಕನ್ನಡ ಭಾಷೆಯಲ್ಲಿ ಕಲಿತು ಮುಂದಿನ ಮುಂದಿನ ತರಗತಿಗೆ ಹೋಗುವರು ಮತ್ತು ಈ ರೀತಿ ಹತ್ತನೆಯ ತರಗತಿ ಮತ್ತು ೧೨ ನೆಯ ತರಗತಿಯವರೆಗೆ ಬೆಳೆಯುತ್ತಾ ಹೋಗುವುದು.
ಪರಾತ್ಪರ ಗುರು ಡಾ. ಆಠವಲೆ : ಇದಕ್ಕೆಲ್ಲ ಎಷ್ಟು ವರ್ಷ ಬೇಕು ?
ಉದ್ಯಮಿ : ಇದಕ್ಕಾಗಿ ೧೦ – ೧೨ ವರ್ಷ ಬೇಕಾಗಬಹುದು!
ಪರಾತ್ಪರ. ಗುರು ಡಾ. ಆಠವಲೆ : ೧೦ – ೧೨ ವರ್ಷಗಳ ನಂತರ, ಎಂದರೆ ೨೦೨೫ ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ. ಆಗ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿ ಕನ್ನಡ ಮಾಧ್ಯಮದ ಶಾಲೆಗಳು ಇರುವುವು !
ಯಾರು ಬುದ್ಧಿಯಿಂದ ವಿಚಾರ ಮಾಡುತ್ತಾರೆಯೋ ಅವರು, ‘ನಾನು ಇದನ್ನು ಮಾಡುವೆ, ನಾನು ಅದನ್ನು ಮಾಡುವೆ’ ಎನ್ನುತ್ತಾರೆ. ಸಾಧನೆ ಮಾಡುವುದರ ಲಾಭ ಏನೆಂದರೆ, ನಾವು ಸಂತರ ಮಾರ್ಗದರ್ಶನದ ಪ್ರಕಾರ ಎಲ್ಲಾ ಕೃತಿಗಳನ್ನು ಮಾಡುತ್ತೇವೆ. ಆದ್ದರಿಂದ ಕಾರ್ಯ ಕೂಡ ಒಳ್ಳೆಯದಾಗುತ್ತದೆ ಮತ್ತು ನಮ್ಮ ಆಧ್ಯಾತ್ಮಿಕ ಉನ್ನತಿಯೂ ಆಗುತ್ತದೆ.