ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖರ ಹಸೀನಾ ಇವರು ಭಾರತೀಯ ವಸ್ತುಗಳ ಮೇಲೆ ಬಹಿಷ್ಕಾರ ಹಾಕುವ ಪ್ರಯತ್ನ ಮಾಡುವವರಿಗೆ ತರಾಟೆಗೆ ತೆಗೆದುಕೊಂಡರು !
ಢಾಕಾ (ಬಾಂಗ್ಲಾದೇಶ) – ಮಾಲದೀವದಿಂದ ಪ್ರೇರಿತವಾಗಿರುವ ಬಾಂಗ್ಲಾದೇಶದಲ್ಲಿನ ವಿರೋಧಿ ಪಕ್ಷಗಳಿಂದ ‘ಇಂಡಿಯಾ ಔಟ್’ ಅಭಿಯಾನ ನಡೆಸುವ ಪ್ರಯತ್ನ ನಡೆದಿತ್ತು. ಬಾಂಗ್ಲಾದೇಶದಲ್ಲಿ ಚುನಾವಣೆಯ ಸಮಯದಿಂದ ವಿರೋಧಿ ಪಕ್ಷ ವಿಶೇಷವಾಗಿ ಬಾಂಗ್ಲಾದೇಶ ನ್ಯಾಷನಾಲಿಸ್ಟ್ ಪಾರ್ಟಿ (ಬಿ.ಏನ್.ಪಿ.) ಈ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ‘ಇಂಡಿಯಾ ಔಟ್’ ಅಭಿಯಾನ ನಡೆಸುತ್ತಿದೆ. ಕಳೆದ ವಾರದಲ್ಲಿ ಬಿ.ಎಂ.ಪಿ.ಯ ಒಬ್ಬ ನಾಯಕರು ಭಾರತೀಯ ವಸ್ತುಗಳನ್ನು ಬಹಿಷ್ಕಾರ ಹಾಕಬೇಕು ಎಂದು ಅವರ ಹತ್ತಿರ ಇರುವ ಕಾಶ್ಮೀರಿ ಶಾಲನ್ನು ಎಸೆದಿದ್ದರು. ಈ ಪ್ರಕರಣದಲ್ಲಿ ಈಗ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ ಹಸೀನಾ ಇವರು ಹೇಳಿಕೆ ನೀಡಿದ್ದಾರೆ. ಅವರು ಹೇಳಿರುವುದು ”ನಿಮ್ಮ (ವಿರೋಧಿ ಪಕ್ಷದ ನಾಯಕರ) ಪತ್ನಿಯರ ಹತ್ತಿರ ಭಾರತೀಯ ಸೀರೆಗಳು ಎಷ್ಟು ಇದೆ ? ನೀವು ನಿಮ್ಮ ಪಕ್ಷದ ಕಾರ್ಯಾಲಯದ ಹೊರಗೆ ನಿಮ್ಮ ಪತ್ನಿಯರ ಬಳಿ ಇರುವ ಸೀರೆಗಳನ್ನು ಸುಟ್ಟರೆ, ಆಗ ನೀವು ಭಾರತದಲ್ಲಿ ತಯಾರಿಸಿರುವ ಉತ್ಪಾದನೆಯನ್ನು ಬಹಿಷ್ಕಾರ ಹಾಕುತ್ತಿರುವಿರಿ, ಎಂದು ಸಾಬೀತು ಆಗುವುದು.”
೧. ಬಾಂಗ್ಲಾದೇಶದಲ್ಲಿನ ಜನರು ಅವರ ದೈನಂದಿನ ಅವಶ್ಯಕತೆಗನುಸಾರ ಭಾರತದಿಂದ ಕಳುಹಿಸಿರುವ ವಸ್ತುಗಳ ಮೇಲೆ ಅವಲಂಬಿತವಾಗಿದ್ದಾರೆ. ಅದರಲ್ಲಿ ತರಕಾರಿ, ಎಣ್ಣೆ, ಸೌಂದರ್ಯ ವರ್ಧಕಗಳು, ಬಟ್ಟೆ, ಮೊಬೈಲ್ ಮತ್ತು ವಾಹನ ಇದರ ಸಮಾವೇಶವಿದೆ.
೨. ಬಾಂಗ್ಲಾದೇಶದಲ್ಲಿನ ಬೃಹತ್ ಜನಸಂಖ್ಯೆ ಭಾರತದಿಂದ ಬರುವ ಆಭರಣ ಮತ್ತು ಫ್ಯಾಷನ್ ಬಟ್ಟೆಗಳಂತಹ ವಸ್ತುಗಳನ್ನು ಖರೀದಿಸುತ್ತಾರೆ. ಅಷ್ಟೇ ಅಲ್ಲದೆ, ಭಾರತದಿಂದ ರಫ್ತು ಆಗುವ ಕಚ್ಚಾ ವಸ್ತುಗಳು, ಹತ್ತಿ ಮತ್ತು ಕುಶಲ ಕಾರ್ಮಿಕರಿಗೆ ಬಾಂಗ್ಲಾದೇಶದ ಉದ್ಯೋಗದಲ್ಲಿ ಬಹಳಷ್ಟು ಬೇಡಿಕೆ ಇದೆ.