ಪೊಲೀಸರಿಂದ ಭಾಗ್ಯನಗರ (ತೆಲಂಗಾಣ)ದ ಭಾಜಪದ ಹಿಂದುತ್ವನಿಷ್ಠ ಸಂಸದ ಟಿ. ರಾಜಸಿಂಹಗೆ ಗೃಹಬಂಧನ !

ಹೋಳಿಯ ಸಮಯದಲ್ಲಿ ಮುಸಲ್ಮಾನರು ದಾಳಿ ನಡೆಸಿರುವ ಸಂತ್ರಸ್ತ ಹಿಂದೂಗಳಿಗೆ ಸಹಾಯ ಮಾಡಲು ಹೋಗಲು ತಡೆದರು !

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಚಂಗಿಚೇರ್ಲಾ ಪ್ರದೇಶದಲ್ಲಿ ಹೋಳಿಯ ದಿನದಂದು ಮಸೀದಿಯ ಹತ್ತಿರ ಹೋಳಿ ಆಡುವ ಹಿಂದೂಗಳ ಮೇಲೆ ಮುಸಲ್ಮಾನರು ದಾಳಿ ನಡೆಸಿದರು. ಈ ಪ್ರಕರಣದಲ್ಲಿ ಪೊಲೀಸರಿಂದ ಹಿಂದುಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದರ ವಿರುದ್ಧ ನಗರದಲ್ಲಿನ ಗೋಶಾಮಹಲ್ ಪ್ರದೇಶದ ಭಾಜಪದ ಹಿಂದುತ್ವನಿಷ್ಠ ಸಂಸದ ಟಿ. ರಾಜಸಿಂಹ ಇವರು ಧ್ವನಿ ಎತ್ತಿದ್ದರು ಹಾಗೂ ಚಂಗಿಚೇರ್ಲಾ ಪ್ರದೇಶಕ್ಕೆ ಭೇಟಿ ನೀಡುವವರಿದ್ದರು. ಅದರ ಮೊದಲೇ ಪೊಲೀಸರು ಟಿ. ರಾಜಸಿಂಹ ಅವರನ್ನು ಗೃಹಬಂಧನದಲ್ಲಿ ಇರಿಸಿದರು. ಟಿ. ರಾಜಸಿಂಹ ಇವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ ಇದರ ಮಾಹಿತಿ ನೀಡಿದರು.

೧. ರಾಜಸಿಂಹ ಇವರು ಪೋಸ್ಟ್ ಮಾಡುವಾಗ ಜೊತೆಗೆ ಒಂದು ಛಾಯಾಚಿತ್ರ ಕೂಡ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರ ಬೆಂಬಲಿಗರ ಸಹಿತ ಮನೆಯ ಹೊರಗೆ ನಿಂತಿದ್ದು ಅಲ್ಲಿ ಅನೇಕ ಪೋಲಿಸರು ಕೂಡ ಇದ್ದಾರೆ. ಈ ಪೋಸ್ಟ್ ನಲ್ಲಿ ಟಿ. ರಾಜಸಿಂಹ ಇವರು, ಹೋಳಿಯ ದಿನದಂದು ಮತಾಂಧರ ದಾಳಿಯಲ್ಲಿ ಗಾಯಗೊಂಡಿರುವವರಿಗೆ ವಸ್ತುಗಳು ಹಂಚಲು ಹೋಗುತ್ತಿರುವಾಗ ನನ್ನನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಕಾಂಗ್ರೆಸ್ ಸರಕಾರದಿಂದ ಇಲ್ಲಿಯ ಹಿಂದುಗಳಿಗೆ ಆಹಾರ ನೀರು ನಿಲ್ಲಿಸಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಸಲ್ಮಾನರ ಓಲೈಕೆ ನೀತಿಗೆ ಬೇಸತ್ತು ಜನರು ತಪ್ಪಿ ಕಾಂಗ್ರೆಸನನ್ನು ಆಯ್ಕೆ ಮಾಡಿದ್ದಾರೆ. ಎಂದು ಬರೆದಿದ್ದಾರೆ.

೨. ರಾಜಸಿಂಹ ಇವರು ಮಾತು ಮುಂದುವರೆಸಿ, ತೆಲಂಗಾಣ ಪೋಲೀಸರಿಂದ ಹಿಂದೂಗಳ ಮೇಲಿನ ದಾಳಿಯಲ್ಲಿನ ಆರೋಪಿಯ ಬದಲು ಸಂತ್ರಸ್ತರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಹಿಂದೂಗಳ ಮೇಲೆ ದಾಖಲಾಗಿರುವ ದೂರುಗಳು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ತೀವ್ರ ಪ್ರತಿಭಟನೆ ನಡೆಯುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಎಂದರೆ ಪಾಕಿಸ್ತಾನದ ಆಡಳಿತ ಬಂದ ನಂತರ ಹಿಂದೂ ಮತ್ತು ಅವರ ಮುಖಂಡರು ಇವರ ಮೇಲೆ ಅನ್ಯಾಯ ಆಗುತ್ತಿದೆ, ಇದು ಕಾಂಗ್ರೆಸ್ಸನ್ನು ಅಧಿಕಾರದಲ್ಲಿ ಕೂಡಿಸಿರುವ ಹಿಂದುಗಳ ಗಮನಕ್ಕೆ ಬರುವ ದಿನವೇ ಸುದಿನ !