೧೭ ವರ್ಷದ ಅಂಕಿತಾಳನ್ನು ಜೀವಂತ ಸುಟ್ಟ ಶಾಹರೂಖ್ ಮತ್ತು ನಯೀಮ್ ಗೆ ಜೀವಾವಧಿ ಶಿಕ್ಷೆ

ದುಮಕಾ (ಝಾರ್ಖಂಡ್) – ೨೦೨೨ ರ ಆಗಸ್ಟ್ ೨೩ ರಂದು ೧೮ ವರ್ಷದ ಅಂಕಿತಾ ಎಂಬ ಹಿಂದೂ ಯುವತಿಯ ಮೇಲೆ ಪೆಟ್ರೋಲ್ ಸುರಿದು ಜಿವಂತ ಸುಟ್ಟ ಶಾಹರೂಖ್ ಮತ್ತು ನಯೀಮ್ ಇವರಿಬ್ಬರಿಗೆ ಅಲ್ಲಿನ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ೨೫ ಸಾವಿರ ರೂಪಾಯಿ ದಂಡ ವಿಧಿಸಿದೆ. ಪಕ್ಕದ ಮನೆಯಲ್ಲಿರುವ ಶಾಹರೂಖ್ ಪ್ರತಿದಿನ ಸ್ನೇಹಕ್ಕಾಗಿ ಅಂಕಿತಾಳನ್ನು ಪೀಡಿಸುತ್ತಿದ್ದ; ಆದರೆ ಅಂಕಿತಾ ಅವನನ್ನು ನಿರಾಕರಿಸಿದ್ದಳು.

ಈ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಮುಖ್ಯಸ್ಥ ಪ್ರಿಯಾಂಕ್ ಕಾನೂನಗೊ ಮಾತನಾಡಿ, ಬಾಂಗ್ಲಾದೇಶದ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಗಳು ಈ ಅಪರಾಧಿಗಳನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಸುತ್ತಿದ್ದವು.

ಈ ಪ್ರಕರಣದ ಬಗ್ಗೆ ನಾವು ನಡೆಸಿದ ತನಿಖಾ ವರದಿಯಲ್ಲಿ ಈ ಅಪರಾಧಿಗಳು ಬಾಂಗ್ಲಾದೇಶಿ ನುಸುಳುಕೋರರು ಎಂದು ಶಂಕಿಸಿದ್ದೇವೆ. ದುರದೃಷ್ಟವೆಂದರೆ ರಾಜ್ಯಸರಕಾರವು ಈ ಪ್ರಕರಣದ ಸರಿಯಾಗಿ ತನಿಖೆ ಮಾಡಲಿಲ್ಲ ಹಾಗೂ ನ್ಯಾಯಾಲಯಕ್ಕೆ ಇದರ ಮಾಹಿತಿ ಕೂಡ ನೀಡಲಿಲ್ಲ. ಸರಕಾರವು ರಾಜಧರ್ಮದ ಪಾಲನೆ ಮಾಡುತ್ತ ಈ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕಾಗಿತ್ತು ಎಂದವರು ಹೇಳಿದರು.

ಸಂಪಾದಕೀಯ ನಿಲುವು

ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವುದೇ ಯೋಗ್ಯವೆಂದು ಜನರಿಗೆ ಅನಿಸುತ್ತದೆ !