ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸಿರುವುದರ ಪರಿಣಾಮ !
ನವ ದೆಹಲಿ – ವ್ಯಾಪಾರ ಸಂಘಟನೆ ‘ಕಾಟ್’ (ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ) ನೀಡಿರುವ ಮಾಹಿತಿಯನುಸಾರ ಈ ವರ್ಷ ಹೋಳಿಯ ವ್ಯಾಪಾರವು 50 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ. ದೆಹಲಿಯಲ್ಲಿ 5 ಸಾವಿರ ಕೋಟಿ ಮೌಲ್ಯದ ವಸ್ತುಗಳ ಮಾರಾಟವಾಗಿವೆ; ಆದರೆ ಈ ಬಾರಿ ಚೀನಾ ವಸ್ತುಗಳ ಬಳಕೆ ಕಡಿಮೆಯಾಗಿದೆ. ಇದರಿಂದ ಚೀನಾಕ್ಕೆ 10 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ದೇಶದ ನಾಗರಿಕರು ಸ್ವದೇಶಿ ವಸ್ತುಗಳನ್ನು ಬಳಸಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿದ್ದಾರೆ.
ಹೋಳಿ ನಿಮಿತ್ತ ಪಿಚಕಾರಿ, ಬಣ್ಣಗಳು, ಗುಲಾಲ್ ಮುಂತಾದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಅದರ ಲಾಭ ಚೀನಾಕ್ಕೆ ಆಗುತ್ತಿತ್ತು; ಆದರೆ ದೇಶದ ಜನರು ಈಗ ಸ್ವದೇಶಿ ವಸ್ತುಗಳನ್ನು ಬಳಸುತ್ತಿದ್ದಾರೆ. ಜನರು ‘ವೋಕಲ್ ಫಾರ್ ಲೋಕಲ್’ (ಸ್ಥಳೀಯ ಉತ್ಪನ್ನಗಳನ್ನು ಬಳಸುವಿಕೆ) ಬೆಂಬಲಿಸಿದರು. ದೇಶದ ಉದ್ಯಮಿಗಳಿಗೆ ಇದರ ಲಾಭ ಆಗಿದೆ.