ಚೀನಾ ಪಾಕಿಸ್ತಾನದ ‘ಒಂದು ರೀತಿಯಲ್ಲಿ ನೆರೆಯ ದೇಶ’ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡ ಪಾಕಿಸ್ತಾನ ವಿದೇಶಾಂಗ ಸಚಿವರು !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ ಇವರು ಪಾಕಿಸ್ತಾನವು ಬಲವಂತವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಿದೆ ಎಂದು ಲಂಡನ್ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದರಿಂದ ಈಗ ಪಾಕಿಸ್ತಾನದಲ್ಲಿ ಚರ್ಚೆಯಾಗುತ್ತಿದೆ. ಡಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನವನ್ನು ಪಾಕಿಸ್ತಾನದ ನೆರೆಯ ರಾಷ್ಟ್ರಗಳು ಮತ್ತು ಚೀನಾವನ್ನು ‘ಒಂದು ರೀತಿಯ ನೆರೆಯ ದೇಶ’ ಎಂದು ಬಣ್ಣಿಸಿದರು. ಇದೇ ಪತ್ರಿಕಾಗೋಷ್ಠಿಯಲ್ಲಿ ಇಶಾಕ ಡಾರ ಇವರು ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಸಹಜ ಸ್ಥಿತಿಗೆ ತರುವ ರೀತಿಯಲ್ಲಿ ಒತ್ತು ನೀಡುತ್ತಿದ್ದರು.

ಪಾಕಿಸ್ತಾನ ಚೀನಾವನ್ನು ತನ್ನ ಅತ್ಯಂತ ಹತ್ತಿರದ ಮಿತ್ರನೆಂದು ಪರಿಗಣಿಸುತ್ತದೆ; ಆದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದು ಎರಡೂ ದೇಶಗಳನ್ನು ಸಂಪರ್ಕಿಸುತ್ತದೆ. ಒಂದು ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತೆ ಭಾರತದೊಂದಿಗೆ ಸೇರಿಕೊಂಡರೆ, ಚೀನಾ ಪಾಕಿಸ್ತಾನದ ನೆರೆ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಹೇಳಿದರು.