ಪಾಕಿಸ್ತಾನವು ಭಾರತಕ್ಕೆ ಉಪದೇಶ ನೀಡುವ ಬದಲು ಭಯೋತ್ಪಾದಕರ ನಿರ್ಮಾಣ ಮಾಡುವ ಕಾರ್ಖಾನೆ ಮುಚ್ಚಬೇಕು ! – ಭಾರತ

ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಭಾರತ !

ಜಿನೇವಾ (ಸ್ವಿಜರ್ಲ್ಯಾಂಡ್) – ಭಾರತಕ್ಕೆ ಉಪದೇಶ ನೀಡುವ ಬದಲು ಪಾಕಿಸ್ತಾನವು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಭಯೋತ್ಪಾದಕರನ್ನು ನಿರ್ಮಾಣ ಮಾಡುವ ಕಾರ್ಖಾನೆ ಮುಚ್ಚಬೇಕು, ವಿಶ್ವಸಂಸ್ಥೆಯ ಕಾರ್ಯಾಲಯದಲ್ಲಿ, ‘ಪಾರ್ಲಿಮೆಂಟ್ರಿ ಯೂನಿಯನ್’ ನ ಸಭೆಯ ಸಮಯದಲ್ಲಿ ಭಾರತದ ಪ್ರತಿನಿಧ್ಯ ಮಾಡುತ್ತಿರುವ ರಾಜ್ಯಸಭೆಯ ಉಪಸಭಾಪತಿ ಹರಿವಂಶ ಇವರು ಪಾಕಿಸ್ತಾನಕ್ಕೆ ತಪರಾಕಿ ಹಾಕಿದರು. ಇದಲ್ಲದೆ ಹರಿವಂಶ ಇವರು ‘ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಇರಲಿದೆ’ ಇದನ್ನು ಪುನರುಚ್ಚರಿಸಿದರು. ಪಾಕಿಸ್ತಾನದ ಪ್ರತಿನಿಧಿಯು ಮಾಡಿರುವ ಭಾಷಣದಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಭಾರತವನ್ನು ಟೀಕಿಸಿತ್ತು. ಅದಕ್ಕೆ ಹರಿವಂಶ ಇವರು ಪ್ರತ್ಯುತ್ತರ ನೀಡುವಾಗ ಮೇಲಿನ ಪದಗಳಲ್ಲಿ ಖಂಡಿಸಿದರು.

ಹರಿವಂಶ ಇವರು ಮಾತು ಮುಂದುವರೆಸುತ್ತಾ,

೧. ಪ್ರಜಾಪ್ರಭುತ್ವ ಬಗ್ಗೆ ಕೆಟ್ಟ ಇತಿಹಾಸ ಇರುವ ದೇಶಗಳಿಂದ ನಮಗೆ ಉಪದೇಶ ನೀಡುವುದು ಎಂದರೆ ಇದು ಹಾಸ್ಯಾಸ್ಪದವಾಗಿದೆ. ಪಾಕಿಸ್ತಾನ ಈ ರೀತಿ ಆರೋಪ ಹೋರಸಿ ಈ ರೀತಿ ವೇದಿಕೆಯ ಮಹತ್ವ ಕಡಿಮೆಗೊಳಿಸದ್ದಿದ್ದರೆ ಒಳ್ಳೆಯದಾಗುತ್ತಿತ್ತು. ಭಾರತವು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ಇರುವ ದೇಶವಾಗಿದೆ ಮತ್ತು ಅನೇಕ ದೇಶಗಳು ಭಾರತೀಯ ಪ್ರಜಾಪ್ರಭುತ್ವವನ್ನು ಅನುಕರಣೆ ಯೋಗ್ಯ ಎಂದು ನಂಬಿದೆ ಇದು ನನ್ನ ಭಾಗ್ಯವೇ ಆಗಿದೆ.

೨. ಜಮ್ಮು-ಕಾಶ್ಮೀರ ಮತ್ತು ಲಡಾಖ ಕೇಂದ್ರಾಡಳಿತ ಪ್ರದೇಶದ ಸಂಬಂಧ ಇದೆ, ಅದು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಯಾವಾಗಲೂ ಇರಲಿದೆ. ಎಷ್ಟೇ ಸುಳ್ಳು ಹೇಳಿದರು ಅಥವಾ ತಪ್ಪು ಪ್ರಚಾರ ಮಾಡಿದರೂ ವಸ್ತು ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ.

೩. ಪಾಕಿಸ್ತಾನಕ್ಕೆ ಅದರ ಭಯೋತ್ಪಾದನೆ ನಿರ್ಮಾಣದ ಕಾರ್ಖಾನೆ ಮುಚ್ಚುವ ಸಲಹೆ ನೀಡಬೇಕು. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವುದು, ಸಹಾಯ ಮಾಡುವುದು ಮತ್ತು ಸಕ್ರಿಯವಾಗಿ ಬೆಂಬಲ ನೀಡುವ ಇತಿಹಾಸವಿದೆ.

೪. ಅಂತರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಇವನು ಪಾಕಿಸ್ತಾನದಲ್ಲಿಯೇ ಸಿಕ್ಕಿದನು, ಪಾಕಿಸ್ತಾನಕ್ಕೆ ಇದರ ನೆನಪು ಮಾಡಿಕೊಡಬೇಕಾಗುತ್ತದೆ. ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ನಿಷೇಧಿಸಿರುವ ಎಲ್ಲಕ್ಕಿಂತ ಹೆಚ್ಚು ಭಯೋತ್ಪಾದಕರಿಗೆ ಈ ದೇಶ ಆಶ್ರಯ ನೀಡಿದೆ. ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನಕ್ಕೆ ಮಾತಿನಲ್ಲಿ ಎಷ್ಟೇ ಹೇಳಿದರು, ಅದರ ಉಪಯೋಗವಾಗುತ್ತಿಲ್ಲ. ಆದ್ದರಿಂದ ಅದಕ್ಕೆ ತಿಳಿಯುವ ಭಾಷೆಯಲ್ಲಿಯೇ ಉತ್ತರ ನೀಡುವುದು ಅವಶ್ಯಕವಾಗಿದೆ !