Court Pending Cases : ದೇಶದಲ್ಲಿ ೪ ಕೋಟಿ ೪೦ ಲಕ್ಷ ಮೊಕದ್ದಮೆ ಬಾಕಿ !

  • ಕೇಂದ್ರ ಸರಕಾರದ ವರದಿಯಲ್ಲಿನ ಮಾಹಿತಿ

  • ಪ್ರಯತ್ನಿಸಿದರೆ ಒಂದೇ ವರ್ಷದಲ್ಲಿ ೨ ಕೋಟಿ ೧೯ ಲಕ್ಷ ಮೊಕದ್ದಮೆಗಳನ್ನು ಪರಿಹರಿಸಬಹುದು !

ನವದೆಹಲಿ – ಕೇಂದ್ರ ಸರಕಾರವು ‘ನ್ಯಾಷನಲ್ ಜ್ಯುಡಿಶಿಯಲ್ ಡೇಟಾ ಗ್ರಿಡ್’ ನ ಸಹಾಯದಿಂದ ಪಡೆದ ವರದಿಯ ಪ್ರಕಾರ, ದೇಶದಲ್ಲಿನ ವಿವಿಧ ನ್ಯಾಯಾಲಯಗಳಲ್ಲಿ ೪ ಕೋಟಿ ೪೦ ಲಕ್ಷ ಮೊಕದ್ದಮೆಗಳು ಬಾಕಿ ಉಳಿದಿವೆ. ಅದರಲ್ಲಿ ೯೧ ಲಕ್ಷ ೯೧ ಸಾವಿರ ೬೯೩ ಮೊಕದ್ದಮೆಗಳು ಪೊಲೀಸರು ಸರಿಯಾಗಿ ತನಿಖೆ ಮಾಡದ ಕಾರಣ ಬಾಕಿ ಉಳಿದಿವೆ, ಎಂದು ವರದಿ ತಿಳಿಸಿದೆ.

೧.೪ ಕೋಟೆ ೪೦ ಲಕ್ಷ ಮೊಕದ್ದಮೆಯಲ್ಲಿ ೨ ಕೋಟಿ ೨೧ ಲಕ್ಷ ಮೊಕದ್ದಮೆಗಳು ೩ ವರ್ಷಗಳಷ್ಟು ಹಳೆಯದಾಗಿವೆ. ಉಳಿದಿರುವ ಮೊಕದ್ದಮೆಗಳು ೧೫ ವಿವಿಧ ಕಾರಣಗಳಿಂದ ಬಾಕಿ ಉಳಿದಿವೆ. ಈ ಅಡಚಣೆಗಳನ್ನು ತೊಲಗಿಸಿದರೆ ಒಂದೇ ವರ್ಷದಲ್ಲಿ ೨ ಕೋಟಿ ೧೯ ಲಕ್ಷ ಮೊಕದ್ದಮೆಗಳನ್ನು ಪರಿಹರಿಸಬಹುದು. (ಇದಕ್ಕಾಗಿ ಈಗ ಸರಕಾರವೇ ನೇತೃತ್ವ ವಹಿಸುವುದು ಅವಶ್ಯಕವಾಗಿದೆ ! – ಸಂಪಾದಕರು)

೨. ೧೮ ಲಕ್ಷ ೧೭ ಸಾವಿರ ೭೭೧ ಮೊಕದ್ದಮೆಗಳಿಗೆ ಸಂಬಂಧಿತ ನೋಂದಣಿಗಳು-ಕಾಗದಪತ್ರಗಳು ಪೋಲಿಸ್ ಠಾಣೆ ಮತ್ತು ಸ್ಥಳೀಯ ನ್ಯಾಯಾಲಯಗಳಿಂದ ಕಳೆದು ಹೋಗಿವೆ. ಅನೇಕ ವರ್ಷಗಳಿಂದ ಈ ಮೊಕದ್ದಮೆಗಳು ಬಾಕಿ ಉಳಿದಿರುವುದರಿಂದ ಅವುಗಳ ಕಾಗದಪತ್ರಗಳು ಕಳೆದು ಹೋಗಿವೆ ಎಂದು ಹೇಳಲಾಗುತ್ತಿದೆ. (ಇಂತಹ ನಿರ್ಲಕ್ಷ್ಯತನ ಮಾಡುವವರಿಗೆ ಶಿಕ್ಷೆ ಆಗುವುದೆ ? – ಸಂಪಾದಕರು)

೩.೧೦ ಲಕ್ಷ ೧೭ ಸಾವಿರ ಮೊಕದ್ದಮೆಗಳು ಅನೇಕ ವರ್ಷಗಳ ಹಳೆಯದಾಗಿದ್ದು, ಈ ಮೊಕದ್ದಮೆಗಳಿಗೆ ಸಂಬಂಧಿತ ಜನರು ನ್ಯಾಯದ ಅಪೇಕ್ಷೆಯನ್ನು ಬಿಟ್ಟಿರುವುದರಿಂದ ಅವರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ. (ಇದು ಭಾರತೀಯ ನ್ಯಾಯವ್ಯಸ್ಥೆಗೆ ನಾಚಿಕೆಗೇಡಿನ ವಿಷಯವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಕಳೆದ ಅನೇಕ ವರ್ಷಗಳಿಂದ ಇಂತಹ ಅನೇಕ ಅಂಕಿಅಂಶಗಳು ಬೆಳಕಿಗೆ ಬಂದಿವೆ; ಆದರೆ ಈ ಮೊಕದ್ದಮೆಗಳನ್ನು ಆದಷ್ಟು ಬೇಗನೆ ಪರಿಹರಿಸಲು ಯಾವ ಉಪಾಯ ಮಾಡಲಾಗುತ್ತಿದೆ? ಮತ್ತು ಅದಕ್ಕೆ ಎಷ್ಟು ಯಶಸ್ಸು ಸಿಗುತ್ತಿದೆ? ಎಂಬುದು ಯಾವತ್ತೂ ಬಯಲಿಗೆ ಬರುವುದಿಲ್ಲ; ಹಾಗಾಗಿ, ಈ ಬಗ್ಗೆ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲವೆಂದು ಜನಸಾಮಾನ್ಯರಿಗೆ ಅನಿಸುತ್ತದೆ !