ದೇವಾಲಯಗಳು ತಮ್ಮ ಬಾಕಿ ಪಡೆಯಲು ನ್ಯಾಯಾಲಯಕ್ಕೆ ಹೋಗಬೇಕಾಗಿರುವುದು ವಿಷಾದದ ಸಂಗತಿ ! – ಅಲಹಾಬಾದ್ ಹೈಕೋರ್ಟ್

ವಾರಣಾಸಿ – ಉತ್ತರಪ್ರದೇಶದ ದೇವಸ್ತಾನಗಳು ಮತ್ತು ಟ್ರಸ್ಟ್ ತಮ್ಮ ಬಾಕಿಯನ್ನು ಪಡೆಯಲು ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದಾರೆ, ಇದು ಕೇಳಿ ದುಃಖವಾಗಿದೆ, ಎಂದು ಅಲಹಾಬಾದ್ ಉಚ್ಛ ನ್ಯಾಯಾಲಯ ಹೇಳಿದೆ. ಉಚ್ಛನ್ಯಾಯಾಲಯವು ‘ಠಾಕೂರ್ ರಂಗಜಿ ಮಹಾರಾಜ ವಿರಾಜಮಾನ ಮಂದಿರ‘ದ ಪರವಾಗಿ ದಾಖಲಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ವಿಷಾದ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗ್ರವಾಲ ಅವರು ಈ ಸಂಬಂಧ ನಿರೀಕ್ಷಣೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಕಡೆ ಅಗತ್ಯ ಕ್ರಮಕ್ಕಾಗಿ ಕಳುಹಿಸಿದ್ದಾರೆ.

ಉಚ್ಛನ್ಯಾಯಾಲಯವು ಉತ್ತರಪ್ರದೇಶ ಕಂದಾಯ ಇಲಾಖೆಯ ಸಚಿವರಿಗೆ ಕಳೆದ ೪ ವರ್ಷಗಳಿಂದ ವೃಂದಾವನದಲ್ಲಿರುವ ಕನಿಷ್ಠ ೯ ದೇವಾಲಯಗಳ ವಾರ್ಷಿಕ ಬಾಕಿ ವಿಷಯಕ್ಕೆ ಸ್ಪಷ್ಠೀಕರಣ ಕೊಡಲು ಕರೆಸಿದೆ. ದೇವಸ್ತಾನಗಳ ನಿಧಿ ರಾಜ್ಯದ ಖಜಾನೆಯಿಂದ ದೇವಸ್ಥಾನಗಳ ಖಾತೆಗೆ ನೇರ ಜಮಾ ಆಗಬೇಕಿತ್ತು. ಅರ್ಜಿದಾರರು ನ್ಯಾಯಾಲಯಕ್ಕೆ, ೯ ದೇವಸ್ಥಾನಗಳಿಗೆ ೯ ಲಕ್ಷದ ೧೨ ಸಾವಿರದ ೫೦೭ ರೂಪಾಯಿಗಳ ವಾರ್ಷಿಕ ಹಣ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ವಿಭಾಗಿಯ ಪೀಠವು, ಕಳೆದ ೪ ವರ್ಷಗಳಿಂದ ದೇವಸ್ಥಾನಗಳಿಗೆ ವಾರ್ಷಿಕ ಪರಿಹಾರವನ್ನು ಹಸ್ತಾಂತರಿಸಿಲ್ಲ. ಆದ್ದರಿಂದ ಉಚ್ಛ ನ್ಯಾಯಾಲಯವು ಅಗತ್ಯ ಕ್ರಮಕ್ಕಾಗಿ ಈ ಪ್ರಕರಣವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಬಳಿ ಕಳುಹಿಸಿದೆ.