‘ಮುರಾದಾಬಾದ್‘ನ ಹೆಸರನ್ನು ‘ಮಾಧವನಗರ’ ಎಂದು ಬದಲಾಯಿಸಿ; ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯಿಂದ ಬೇಡಿಕೆ

ಮುರಾದಾಬಾದ್ (ಉತ್ರಪ್ರದೇಶ) – ಬಾಬಾ ಬಾಗೇಶ್ವರ ಧಾಮ್ ನ ಮುಖ್ಯಸ್ಥ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಪ್ರಸ್ತುತ ಉತ್ತರಪ್ರದೇಶದ ಮುರಾದಾಬಾದ್‌ನಲ್ಲಿದ್ದು ಅಲ್ಲಿ ಅವರ ಹನುಮಾನ್ ಚಾಲೀಸಾ ನಡೆಯುತ್ತಿದೆ. ಇಲ್ಲಿ ಅವರು ಮುರಾದಾಬಾದ್‌ನ ಹೆಸರನ್ನು ಬದಲಾಯಿಸಿ ‘ಮಾಧವನಗರ‘ ಎಂದು ಹೆಸರಿಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಅವರು ಅನೇಕ ಕಾರಣಗಳನ್ನೂ ನೀಡಿದ್ದಾರೆ. ಭಾರತದಲ್ಲಿ ಅನೇಕ ಹೆಸರುಗಳನ್ನು ಬದಲಾಯಿಸಲಾಗಿದೆ ಎಂದು ಧೀರೇಂದ್ರಕೃಷ್ಣಶಾಸ್ತ್ರಿ ಹೇಳಿದ್ದಾರೆ. ಫೈಜಾಬಾದ್‌ನ ಹೆಸರು ಬದಲಾಯಿಸಿ ಅಯೋಧ್ಯೆ ಆಗಬಹುದು, ಅಲಹಾಬಾದ್‌ನ ಹೆಸರು ಬದಲಾಗಿ ಪ್ರಯಾಗರಾಜ್ ಆಗಬಹುದು, ಆಗ ಮುರಾದಾಬಾದ್‌ನ ಹೆಸರು ಬದಲಾಯಿಸಿ ‘ಮಾಧವನಗರ‘ ಎಂದು ನಾಮಕರಣ ಮಾಡಬೇಕು ಎಂದು ಹೇಳಿದರು.

೧. ಧೀರೇಂದ್ರಶಾಸ್ತ್ರಿ ಮಾತನಾಡಿ, ‘ಎಲ್ಲಿ ಸಿದ್ಧಬಲಿ ಹನುಮಾನ ಮಂದಿರ, ಹರಿಹರ ಮಂದಿರ, ಗಡಗಂಗಾ, ಶ್ರೀಶೀತಲಮಾತಾ ಮಂದಿರ, ಶ್ರೀ ಕಾಳಿಕಾಮಾತಾ ಮಂದಿರ, ನೀಮ ಕರೋಲಿ ಬಾಬಾ ಮಂದಿರ ಇತ್ಯಾದಿ ಮಂದಿರಗಳು ಇರುವ ಕಡೆ ಗಂಗಾಮಾತೆ ಪ್ರಕಟವಾದಳೋ (ಹರಿಯುತ್ತಿರುವ) ಆ ನಗರವನ್ನು ಮಾಧವನಗರ ಎಂದು ಕರೆಯಬೇಕು.”

೨. ಈ ಹಿಂದೆ ಧೀರೇಂದ್ರಶಾಸ್ತ್ರಿ ಅವರು ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣುದೇವ ಸಾಯಿ ಅವರಿಗೆ ಚಂದ್ರಖುರಿ ನಗರದ ಹೆಸರನ್ನು ಬದಲಾಯಿಸಿ ‘ಕೌಶಲ್ಯ ಧಾಮ‘ ಹೆಸರಿಡಬೇಕೆಂಬ ಪ್ರಸ್ತಾವನೆ ಇಟ್ಟಿದ್ದರು.

೩. ಧೀರೇಂದ್ರಶಾಸ್ತ್ರಿ ಅವರು ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜಧಾನಿ ಭೋಪಾಲ್ ಹೆಸರನ್ನು ‘ಭೋಜಪಾಲ‘ ಎಂದು ಬದಲಾಯಿಸಿದರೆ ಉತ್ತಮ. ಎಂದು ಮನವಿ ಮಾಡಿದ್ದರು.

ಸಂಪಾದಕೀಯ ನಿಲುವು

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಮುಸಲ್ಮಾನ ದಾಳಿಕೊರರು ನಗರಗಳಿಗೆ ಇಟ್ಟಿರುವ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಮೂಲ ಹೆಸರನ್ನು ಇಟ್ಟಿದ್ದಾರೆ. ಆದ್ದರಿಂದ ಮುರಾದಾಬಾದ್‌ನ ಹೆಸರನ್ನು ಬದಲಾಯಿಸಬಹುದು, ಹೀಗೆ ಹಿಂದೂಗಳ ಅಪೇಕ್ಷೆಯಾಗಿದೆ !