‘ಸ್ವಾತಂತ್ರ್ಯವೀರ ಸಾವರ್ಕರ್’ ಚಲನಚಿತ್ರದ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಅಭೂತಪೂರ್ವ ಉತ್ಸಾಹ !

  • ಚಲನಚಿತ್ರ ಪ್ರಚಾರ ಮಾಡುವ ಅಮೆರಿಕದ ಮ್ಯಾನಹ್ಯಟನ್ ಆಕಾಶದಲ್ಲಿ ‘ಏರ್ ಕ್ರಾಫ್ಟ್ ಡಿಸ್ಪ್ಲೇ !’

  • ಬೃಹತ್ ಪ್ರಮಾಣದ ಪ್ರಚಾರ ಆರಂಭ !

ಮುಂಬಯಿ – ಮಾರ್ಚ್ ೨೨ ರಂದು ಬಿಡುಗಡೆಗೊಳ್ಳಲಿರುವ ‘ ಸ್ವಾತಂತ್ರ್ಯ ವೀರ ಸಾವರ್ಕರ್ ‘ ಚಲನಚಿತ್ರದ ಬಗ್ಗೆ ಜಗತ್ತಿನಾದ್ಯಂತ ಇರುವ ಅನಿವಾಸಿ ಭಾರತೀಯರಲ್ಲಿ ಅಭೂತಪೂರ್ವ ಉತ್ಸಾಹ ನೋಡಲು ಸಿಗುತ್ತಿದೆ. ‘ಸನಾತನ ಪ್ರಭಾತ ‘ ಜೊತೆಗೆ ಮಾತನಾಡಿದ ಈ ಚಲನಚಿತ್ರದ ಮುಖ್ಯ ಪ್ರಚಾರಕರು (ಮಾರ್ಕೆಟಿಂಗ್ ಮ್ಯಾನೇಜರ್) ಈ ಬಗ್ಗೆ ಮಾಹಿತಿ ನೀಡಿದರು. ಈ ಚಲನಚಿತ್ರದ ನಿರ್ದೇಶಕ , ನಿರ್ಮಾಪಕ ಮತ್ತು ನಾಯಕ ರಣದೀಪ ಹುಡಾ ಮತ್ತು ಚಿತ್ರದ ಅನ್ಯ ಕಲಾವಿದರಿಗೆ ಜಗತ್ತಿನಾದ್ಯಂತ ಇರುವ ಹಿಂದುಗಳು ಈ ಮಾಹಿತಿ ಕಳಿಸುತ್ತಿದ್ದಾರೆ. ಅಲ್ಲಿನ ಭಾರತೀಯರಿಗೆ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿನ ಸಶಸ್ತ್ರ ಕ್ರಾಂತಿಯ ಇತಿಹಾಸ ಮತ್ತು ವೀರ ಸಾವರ್ಕರ್ ಇವರಂತಹ ಅಗಮ್ಯ ಸ್ವಾತಂತ್ರ್ಯ ಸೇನಾನಿಯ ಜೀವನ ಚರಿತ್ರೆ ಹೆಚ್ಚೆಚ್ಚು ಭಾರತೀಯರವರೆಗೆ ತಲುಪಿಸುವ ಆಸೆ ಇದೆ.

ಇಲ್ಲಿಯತನಕ ನಮಗೆ ಕೇವಲ ಅರ್ಧ ಸತ್ಯವನ್ನು ಮಾತ್ರ ಕಲಿಸಲಾಗಿದೆ ! – ಬ್ರಿಟನ್ ನ ಹಿಂದುಗಳು

ಬ್ರಿಟನಿನ ನಿವಾಸಿ ಶಕ್ತಿ ಲೋಹಾರ ಇವರು ಹುಡಾ ಇವರಿಗೆ ಇತ್ತೀಚಿಗೆ ‘ ಇ-ಮೇಲ್ ‘ ಮಾಡಿ, ಬ್ರಿಟನ್ ನಲ್ಲಿನ ಭಾರತೀಯರಿಗೆ ಈ ಚಲನಚಿತ್ರದ ಟ್ರೈಲರ್ (ಜಾಹೀರಾತು) ತುಂಬಾ ಇಷ್ಟವಾಗಿದ್ದು, ಈ ಚಿತ್ರ ಬಹಳ ಯಶಸ್ವಿಯಾಗಬೇಕು ಎಂಬುದೇ ನಮ್ಮ ಆಸೆಯಾಗಿದೆ ಎಂದು ಬರೆದಿದ್ದಾರೆ. ಈ ಚಲನಚಿತ್ರವು ನಮಗೆ ಮತ್ತು ಮುಂಬರುವ ನಮ್ಮ ಪೀಳಿಗೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು. ಬ್ರಿಟನ್ ನಲ್ಲಿ ನಮ್ಮ ಸಮುದಾಯ ಬಹಳ ಶಕ್ತಿಶಾಲಿ ಆಗಿದೆ ಮತ್ತು ನಾವು ಲಂಡನ್ ನಲ್ಲಿ ಒಂದು ಹಿಂದೂ ಸಾಂಸ್ಕೃತಿಕ ಕೇಂದ್ರ ನಡೆಸುತ್ತೇವೆ. ಈ ಚಲನಚಿತ್ರವನ್ನು ಬೆಂಬಲಿಸಲು ಮತ್ತು ಪ್ರಚಾರ ಮಾಡಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಭಾರತೀಯ ಕ್ರಾಂತಿ ವೀರರ ನಿಜವಾದ ಸತ್ಯ ಜನರಿಗೆ ತಿಳಿಯಬೇಕು, ಎಂಬುದು ನಮ್ಮ ಆಸೆ ಆಗಿದೆ. ಇಲ್ಲಿತನಕ ನಮಗೆ ಕೇವಲ ಸುಳ್ಳು ಮತ್ತು ಅರ್ಧ ಸತ್ಯದ ಇತಿಹಾಸವನ್ನು ಕಲಿಸಿದ್ದಾರೆ !

ಅಮೇರಿಕಾದ ೪ ನಗರಗಳಲ್ಲಿ ‘ ಏರ್ ಕ್ರಾಫ್ಟ್ ಡಿಸ್ಪ್ಲೇ ‘ ಮೂಲಕ ಚಲನಚಿತ್ರದ ಐತಿಹಾಸಿಕ ಪ್ರಚಾರ !

ಅಮೇರಿಕಾದಲ್ಲಿನ ಅನಿವಾಸಿ ಭಾರತೀಯರು ನಟ ರಣದೀಪ ಹುಡಾ ಅವರಿಗೆ ‘ಇ-ಮೇಲ್ ‘ ಮೂಲಕ ಒಂದು ವಿಶೇಷ ಸಂದೇಶ ಮತ್ತು ವಿಡಿಯೋ ಕಳುಹಿಸಿದ್ದಾರೆ. ‘ಸ್ವಾತಂತ್ರ್ಯವೀರ ಸಾವರ್ಕರ್ ‘ಚಲನಚಿತ್ರ ಪ್ರದರ್ಶನಗೊಳ್ಳುವುದು ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಈ ಸಂದೇಶದಲ್ಲಿ ಬರೆಯಲಾಗಿದೆ.

ಮ್ಯಾನಹ್ಯಾಟನ್ ನಗರದ ಹಡಸನ್ ನದಿಯ ಮೇಲೆ ದೈದಿಪ್ಯಮಾನವಾದ ‘ ಏರ್ ಕ್ರಾಫ್ಟ್ ಡಿಸ್ಪ್ಲೇ ‘ಮೂಲಕ ‘ಸ್ವಾತಂತ್ರ್ಯ ವೀರ ಸಾವರ್ಕರ್ ರನ್ನು ಅಮೇರಿಕಾ ಭವ್ಯ ಸ್ವಾಗತ ಕೋರುತ್ತಿದೆ !’ ಎಂಬ ಸಂದೇಶ ಡಿಸ್ಪ್ಲೇ ಮಾಡಲಾಯಿತು. ನ್ಯೂಯಾರ್ಕ್, ನ್ಯೂ ಜರ್ಸಿ, ಟೇಟರಬೋರೋ ಮತ್ತು ಲಾಗಾರ್ಡಿಯ ಈ ನಾಲ್ಕು ವಾಯು ಸಂಚಾರ ನಿಯಂತ್ರಣ ಕೇಂದ್ರಗಳಿಂದ ವಿಶೇಷ ಅನುಮತಿ ಪಡೆದು ಈ ಅವಿಸ್ಮರಣೀಯ ಪ್ರಚಾರ ಮಾಡಲಾಯಿತು. ಸ್ವಾತಂತ್ರ್ಯ ವೀರ ಸಾವರ್ಕರರ ಸ್ವಾಗತಕ್ಕಾಗಿ ನಾವೆಲ್ಲರೂ ಉತ್ಸುಕರಾಗಿದ್ದೇವೆ. ೯/೧೧ ದಾಳಿಯ ನಂತರ ಮೊಟ್ಟ ಮೊದಲು ಬಾರಿ ನಗರದಲ್ಲಿನ ಒಂಬತ್ತು ಸ್ಥಳಗಳಲ್ಲಿ ‘ಯು ಎಸ್ ಎ ವೆಲ್ಕಾಮ್ಸ್ ವೀರ ಸಾವರ್ಕರ್ ‘ ಎಂಬ ಸಂದೇಶ ನೀಡುತ್ತಾ ‘ ಏರ್ ಕ್ರಾಫ್ಟ್ ಡಿಸ್ಪ್ಲೇ ‘ಪ್ರದರ್ಶನ ನಡೆಸಲಾಗಿದೆ.

ಆಸ್ಟ್ರೇಲಿಯಾದಲ್ಲಿಯೂ ಕೂಡ ವ್ಯಾಪಕ ಜಾಗೃತಿ !

ಆಸ್ಟ್ರೇಲಿಯಾದಲ್ಲಿ ಅನಿವಾಸಿ ಭಾರತೀಯರ ಒಂದು ಸಂಘಟನೆಯು ‘ ಸ್ವಾತಂತ್ರ್ಯ ವೀರ ಸಾವರ್ಕರ್ ‘ ಚಲನಚಿತ್ರದ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಮತ್ತು ಈ ಚಿತ್ರದ ಐತಿಹಾಸಿಕ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಒಂದು ಅದ್ವಿತೀಯ ‘ ನೆಟ್ವರ್ಕ್ ‘ ಅನ್ನು ಸಿದ್ಧಗೊಳಿಸಿದೆ. ಹುಡಾ ಅವರ ಜೊತೆಗೆ ಮಾತನಾಡಿದ ಅಲ್ಲಿನ ಭಾರತೀಯರು, ಚಲನಚಿತ್ರದ ಟ್ರೈಲರ್ ಮತ್ತು ಐತಿಹಾಸಿಕ ಮಾಹಿತಿಯ ಜೊತೆಗೆ ಒಂದು ಇ-ಮೇಲ್ ತಯಾರಿಸಲಾಗಿದ್ದು ಅದನ್ನು ಮೇಲಬರ್ನ್ , ಸಿಡ್ನಿ ಮತ್ತು ಪರ್ತ್ ನಲ್ಲಿರುವ ಭಾರತೀಯರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.