ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ಸನಾತನದ ರಾಮನಾಥಿಯ ಆಶ್ರಮದಲ್ಲಿ ಕೆಲವು ದಿನ ವಾಸ್ತವ್ಯ ಮಾಡಿದ ನಂತರ ಅವರ ಟ್ರಸ್ಟಿನ ಅಧ್ಯಕ್ಷ ಶ್ರೀ. ಶರದ ಬಾಪಟ ಇವರು ಪ.ಪೂ. ಡಾ. ಆಠವಲೆ ಇವರಿಗೆ ಬರೆದಿರುವ ಪತ್ರ
|| ಹರಿ ಓಂ ತತ್ಸತ್ ||
ಶ್ರದ್ಧೆಯ ಪ.ಪೂ. ಡಾ. ಆಠವಲೆಕಾಕಾ ಇವರಿಗೆ ಸಪ್ರೇಮ ಹರಿ ಓಂ ತತ್ಸತ್ ||
೧. ಆಶ್ರಮದಲ್ಲಿ ವಾಸ್ತವ್ಯದಿಂದ ಸಾಧಕರಿಗೆ ಅವರ ಅಂತಿಮ ಧ್ಯೇಯದ ಕಡೆಗೆ ಕರೆದುಕೊಂಡು ಹೋಗುವ ಏಕೈಕ ಸಂಸ್ಥೆ ಎಂದರೆ ‘ಸನಾತನ ಸಂಸ್ಥೆ ಎಂದು ಗಮನಕ್ಕೆ ಬರುವುದು !
ಅ. ತಮ್ಮೆಲ್ಲರ ಪ್ರೇಮಮಯ ವಿದಾಯ ಪಡೆದು ನಾವೆಲ್ಲರೂ ೧೩.೩.೨೦೨೩ ರಂದು ಇಂದೂರಿಗೆ ಕ್ಷೇಮವಾಗಿ ತಲುಪಿದ್ದೇವೆ. ೮.೩.೨೦೨೩ ರಿಂದ ೧೨.೩.೨೦೨೩ ಇದು ಅವಿಸ್ಮರಣೀಯ ದಿನಗಳು. ನಮ್ಮೆಲ್ಲ ಭಕ್ತವತ್ಸಲ-ಆಶ್ರಮ ವಾಸಿಯರಿಗೆ ಅದ್ವಿತೀಯ, ಅದ್ಭುತ ಮತ್ತು ಅವಿಸ್ಮರಣೀಯ ಆಗಿತ್ತು ಮತ್ತು ಆಗಿರುವುದು. ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ನಮ್ಮ ವಾಸ್ತವ್ಯ ಒಂದು ಅತ್ಯಂತ ಸುಖಕರ ಮತ್ತು ಮನಸ್ಸು ತುಂಬಿರುವ ಅವಸ್ಥೆಯಲ್ಲಿ ಇತ್ತು.
ಆ. ಆಶ್ರಮದಲ್ಲಿನ ಸಾಧಕರ ದಿನಚರಿ, ಪ್ರೀತಿಯ ಮತ್ತು ಆನಂದದಾಯಕ ವರ್ತನೆ, ಸತತ ಮಂದಹಾಸದಿಂದ ನಮ್ಮ ಆದರಾತಿಥ್ಯ ಮಾಡಿರುವುದು ಶಾಶ್ವತವಾಗಿ ನಮ್ಮ ಗಮನದಲ್ಲಿ ಉಳಿಯುವುದು. ಆಶ್ರಮ ಪರಿಸರದಲ್ಲಿನ ಸ್ವಚ್ಛತೆ, ಪಾವಿತ್ರ್ಯವನ್ನು ಕಾಪಾಡುವ ಎಲ್ಲಾ ಸಾಧಕರು ನಿಜವಾಗಿಯೂ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಇ. ಸ್ವಚ್ಛತೆ, ಶುಚಿತ್ವ, ಅತ್ಯಂತ ಶಾಂತ ಮತ್ತು ಪ್ರಸನ್ನ ವಾತಾವರಣವು ನಮ್ಮ ಗಮನಕ್ಕೆ ಬಂದಿದೆ. ಸಾಧನಾಮಾರ್ಗದಲ್ಲಿನ ಉಬ್ಬುತಗ್ಗುಗಳನ್ನು ಬಹಳ ಸೂಚ್ಯವಾಗಿ, ಜಾಗ್ರತೆಯಿಂದ ಮತ್ತು ಮೃದುವಾಗಿ ಪ್ರೇಮದಿಂದ ಸೂಚಿಸಿ ಸಾಧಕರನ್ನು ಅವರ ಅಂತಿಮ ಧ್ಯೇಯುದ ಕಡೆಗೆ ಕರೆದುಕೊಂಡು ಹೋಗುವ ಏಕೈಕ ಸಂಸ್ಥೆ ಎಂದರೆ ‘ಸನಾತನ ಸಂಸ್ಥೆ. ವ್ಯಷ್ಟಿಯಿಂದ ಸಮಷ್ಟಿ ಕಡೆಗೆ ಮಾರ್ಗಕ್ರಮಣ ಮಾಡುವ ಸಾಧನಾಮಾರ್ಗ ಸ್ವೇಚ್ಛೆಯಿಂದ ಒಂದು ‘ವ್ರತ ವೆಂದು ಸ್ವೀಕರಿಸಿರುವ ಸಾಧಕರ ವಿಶ್ರಾಂತಿಸ್ಥಾನ ಎಂದರೆ ಸನಾತನ ಸಂಸ್ಥೆ ಎಂದರಿವಾಯಿತು.
೨. ತನು, ಮನ ಮತ್ತು ಧನ ಸಮರ್ಪಿತ ಸಾಧಕರ ಕಾರ್ಯಕ್ಕೆ ಸಾಟಿಯೇ ಇಲ್ಲ !
೨ ಅ. ತನು ಮನ ಮತ್ತು ಧನ ಸಮರ್ಪಿತ ಸಾಧಕ ಶ್ರೀ. ದಿನೇಶ ಶಿಂದೆ, ಸೌ. ಪ್ರಿಯಾಂಕಾ ರಾಜಹಂಸ, ಸುಶ್ರೀ. ತೇಜಲ ಪಾತ್ರಿಕರ ಮತ್ತು ಸೌ. ಮಂಗಲಾ ಮರಾಠೆ ಇವರ ಕಾರ್ಯಕ್ಕೆ ಸಾಟಿಯೇ ಇಲ್ಲ. ಅವರ ಅತಿಶಯ ಪ್ರೇಮದಿಂದ ತುಂಬಿರುವ, ಅತ್ಯಂತ ಹಸನ್ಮುಖ, ವಿನಮ್ರ ಮಾರ್ಗದರ್ಶನ ನಮ್ಮೆಲ್ಲರಿಗೂ ದೊರೆಯಿತು. ಅವರಿಗೆಷ್ಟು ಧನ್ಯವಾದ ಹೇಳಲಿ ! ಅವರ ನಿಷ್ಠೆಗೆ, ಶ್ರದ್ಧೆಗೆ ಮತ್ತು ಸಮರ್ಪಣಾ ಭಾವಕ್ಕೆ ನಮ್ಮ ವಿನಮ್ರ ಅಭಿವಾದನೆ !
೨ ಆ. ಎಲ್ಲಕ್ಕಿಂತ ಮಹತ್ವದ ವಿಭಾಗ ಎಂದರೆ ಭೋಜನ ವ್ಯವಸ್ಥೆ. ಪೂ. ರೇಖಾತಾಯಿ ಇವರ ಶಿಸ್ತುಬದ್ಧ, ನಿಖರ ಮತ್ತು ಸ್ವಚ್ಛತಾಪೂರ್ಣ ವ್ಯವಸ್ಥಾಪನೆಯ ವಿಲಕ್ಷಣ ಮತ್ತು ಅದ್ಭುತ ಅನುಭವ ನಮಗೆ ನೋಡಲು ದೊರೆಯಿತು. ಅವರು ಸಾಕ್ಷಾತ್ ಅನ್ನಪೂರ್ಣಾಮಾತೆಯೇ ಆಗಿದ್ದಾರೆ. ಅದೇ ರೀತಿ ಸಾಧಕ ಶ್ರೀ. ಆಕಾಶ ಕದಮ, ಕು. ಕೋಮಲ ಪಾಟೀಲ ಮತ್ತು ಕು. ವೈಷ್ಣವಿ ಗುರವ ಇವರ ನೆನಪು ನಮಗೆ ಸದಾ ಬರುವುದು. ಆಹಾರದ ಸಂಪೂರ್ಣ ಆಯೋಜನೆ ಅನುಭವಿಸಿದ ನಂತರ ‘ಅನ್ನದಾತಾ ಸುಖಿ ಭವ | ಎಂದು ನಮ್ಮ ಮನಸ್ಸಿಗೆ ಪ್ರಸಾದ ಸ್ವೀಕರಿಸುವಾಗ ಈ ವಿಚಾರ ಬರುತ್ತಿತ್ತು.
೨ ಇ. ಸನಾತನ ಆಶ್ರಮದಲ್ಲಿನ ಭವ್ಯ, ಸುಸಜ್ಜಿತ, ಆಧುನಿಕ ಯಂತ್ರಗಳಿಂದ ಕೂಡಿರುವ ಸ್ಟುಡಿಯೋ ಇದು ನಮ್ಮ ಆಕರ್ಷಣೆಯ ವಿಶೇಷ ಸ್ಥಾನವಾಗಿತ್ತು. ಉತ್ತಮ ಮತ್ತು ಕೌಶಲ್ಯಪೂರ್ಣ ಚಿತ್ರೀಕರಣ ಮಾಡುವ ಸದಾ ಹಸನ್ಮುಖ ಮತ್ತು ವಿನಮ್ರತೆಯಿಂದ ಸೂಚನೆ ನೀಡುವ ಸಾಧಕ ಶ್ರೀ. ಮತ್ತು ಸೌ. ಸುತಾರ, ಶ್ರೀ. ಅತುಲ ಬಧಾಲೆ, ಶ್ರೀ. ವಿನಯಕುಮಾರ ಮತ್ತು ಶ್ರೀ. ಕೇದಾರ ನಾಯಿಕ ಇವರ ಸಹಜ ಮತ್ತು ಪಾರದರ್ಶಕ ಸ್ವಭಾವದ ದರ್ಶನ ಪಡೆದೆವು.
೨ ಈ. ಪರಮ ಭಕ್ತ ಶ್ರೀ. ಭಾನುದಾದಾ ಇವರ ಸೇವಾಭಾವಕ್ಕೆ ಸಾಟಿಯೇ ಇಲ್ಲ.
೨ ಉ. ಸತತ ಸೇವಾಭಾವದಿಂದ ಉತ್ಸಾಹಭರಿತ ಭಾವನೆಯಿಂದ ಕೆಲಸ ಮಾಡುವ ಚಾಲಕವರ್ಗ (ಸಾಧಕರು) ಸರ್ವಶ್ರೀ. ಸಾಗರ ಮ್ಹಾತ್ರೆ, ಸ್ವಪ್ನಿಲ ನಾಯಿಕ, ಪರಶುರಾಮ ಪಾಟೀಲ, ಸೂರಜ ಪಾಟೀಲ ಮತ್ತು ಭಗವಂತ ನಾಯಿಕ ಇವರೆಲ್ಲರೂ ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿರುವರು.
ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಪ.ಪೂ. ರಾಮಾನಂದ ಮಹಾರಾಜ ಇವರಿಗೆ ಜಯವಾಗಲಿ !
ಹೆಚ್ಚೇನು ಬರೆಯಲಿ ?
ನಿಮ್ಮ ಸವಿನಯ
ಶರದ ಬಾಪಟ, ಅಧ್ಯಕ್ಷ, ಶ್ರೀ ಸದ್ಗುರು ಅನಂತಾನಂದ ಸಾಯಿಶ ಶೈಕ್ಷಣಿಕ ಮತ್ತು ಪಾರಮಾರ್ಥಿಕ ಸೇವಾ ಟ್ರಸ್ಟ್, ಭಕ್ತವಾತ್ಸಲ್ಯಾಶ್ರಮ, ಇಂದೂರು, ಮಧ್ಯಪ್ರದೇಶ.