ಸಿಎಎ ಯಂತಹ ಕಾನೂನನ್ನು ಜಾರಿಗೆ ತಂದದ್ದು ಭಾರತವೇ ಮೊದಲ ದೇಶವಲ್ಲ !

ಸಿಎಎ ಬಗ್ಗೆ ಆತಂಕ ವ್ಯಕ್ತಪಡಿಸಿದ ಅಮೆರಿಕ ಮತ್ತು ಯುರೋಪಿಯನ್ ದೇಶಗಳಿಗೆ ವಿದೇಶಾಂಗ ಸಚಿವ ಎಸ್ ಜಯಶಂಕರ ಇವರಿಂದ ತಪರಾಕಿ !

ನವದೆಹಲಿ – ವಿದೇಶಾಂಗ ಸಚಿವ ಡಾ. ಎಸ್ ಜೈ ಶಂಕರ ಇವರು ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ (ಸಿಎಎ ಬಗ್ಗೆ) ಅಮೇರಿಕಾ ಮತ್ತು ಯುರೋಪಿಯನ್ ದೇಶಗಳ ಹೇಳಿಕೆಯ ಬಗ್ಗೆ ಪ್ರತ್ಯುತ್ತರ ನೀಡಿದರು. ಇಂತಹ ಮಸೂದೆ ತಂದಿರುವ ಭಾರತವು ಜಗತ್ತಿನ ಮೊದಲ ದೇಶವೇನಲ್ಲ. ಜಗತ್ತಿನಲ್ಲಿ ಇಂತಹ ಕಾನೂನಿನ ಅನೇಕ ಉದಾಹರಣೆಗಳಿವೆ. ಟೀಕೆ ಮಾಡುವ ದೇಶಗಳು ಮೊದಲು ತಮ್ಮ ರಾಷ್ಟ್ರದಲ್ಲಿರುವ ನಿಯಮಗಳ ಕಡೆಗೆ ಗಮನ ನೀಡಬೇಕೆಂದು, ಸಚಿವರು ಖಾರವಾಗಿ ಉತ್ತರಿಸಿದರು. ಒಂದು ವಾರ್ತಾವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೈ ಶಂಕರ ಮಾತನಾಡುತ್ತಿದ್ದರು. ಭಾರತದಲ್ಲಿನ ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ ಅವರು ಮೊದಲು ಸಿಎಎ ಬಗ್ಗೆ ಟಿಪ್ಪಣಿ ಮಾಡಿದ್ದರು, ಆ ಬಳಿಕ ಅಮೆರಿಕಾದ ರಾಯಭಾರಿ ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಆತಂಕ ವ್ಯಕ್ತಪಡಿಸಿ, ಅಮೇರಿಕಾ ಈ ಬದಲಾವಣೆಯನ್ನು ಗಮನಿಸುತ್ತಿದ್ದು ನಮಗೆ ಆತಂಕವಿದೆ ಎಂದು ಹೇಳಿದರು. ಭಾರತದ ಆಂತರಿಕ ವಿಷಯದಲ್ಲಿ ಯಾರೂ ಮೂಗು ತೂರಿಸಬಾರದೆಂದು ವಿದೇಶಾಂಗ ಸಚಿವರು ಈ ಹಿಂದೆ ಕೂಡ ಹೇಳಿದ್ದರು .

ಅವರ ಇತಿಹಾಸದ ಗ್ರಹಿಕೆಯನ್ನೇ ನಾನು ಪ್ರಶ್ನಿಸುತ್ತಿದ್ದೇನೆ !

ಜೈ ಶಂಕರ್ ಅವರು ಮುಂದೆ ಮಾತನಾಡಿ, ನಾನು ಅವರ (ಅಮೇರಿಕಾದ) ಪ್ರಜಾಪ್ರಭುತ್ವ ಅಥವಾ ಅವರ ತತ್ವವನ್ನು ಪ್ರಶ್ನಿಸುತ್ತಿಲ್ಲ. ಭಾರತದ ಇತಿಹಾಸ ಅವರಿಗೆ ಎಷ್ಟರ ಮಟ್ಟಿಗೆ ಅರ್ಥ ಆಗಿದೆ, ಎಂದು ನಾನು ಪ್ರಶ್ನೆ ಕೇಳುತ್ತಿದ್ದೇನೆ. ಸಿಎಎ ಕಾಯ್ದೆ ಬಗ್ಗೆ ಜಗತ್ತಿನಲ್ಲಿನ ಕೆಲ ಭಾಗದಿಂದ ಬಂದ ಪ್ರತಿಕ್ರಿಯೆಗಳನ್ನು ಕೇಳಿದರೆ ಭಾರತದ ವಿಭಜನೆ ಎಂದಿಗೂ ಆಗಿಯೇ ಇಲ್ಲ ಎಂಬ ಭಾವನೆ ಬರುತ್ತದೆ! ಸಿಎಎ ಕಾಯ್ದೆಯಿಂದ ಪರಿಹರಿಸಬೇಕಾದ ಸಮಸ್ಯೆಗಳನ್ನು ಎಂದಿಗೂ ಸೃಷ್ಟಿಸಲಾಗಿಲ್ಲ ! ಎಂದವರು ಹೇಳಿದರು.

ಜಗತ್ತಿನಲ್ಲಿ ಇಂತಹ ಕಾನೂನಿನ ಅನೇಕ ಉದಾಹರಣೆಗಳಿವೆ !

ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ ಅವರು ಮುಂದೆ ಮಾತನಾಡಿ, ನೀವು ನಮ್ಮನ್ನು ಪ್ರಶ್ನಿಸುತ್ತೀರಿ ಆದರೆ ಜಗತ್ತಿನ ಇತರ ಪ್ರಜಾಪ್ರಭುತ್ವ ದೇಶಗಳು ವಿವಿಧ ಪ್ರಸಂಗದಲ್ಲಿ ಇಂತಹ ನಿರ್ಣಯ ತೆಗೆದುಕೊಂಡಿಲ್ಲವೇ ? ಅದರ ಅನೇಕ ಉದಾಹರಣೆಗಳನ್ನು ನಾನು ನೀಡಬಹುದು. ನೀವು ಯುರೋಪ್ ಅನ್ನು ನೋಡಿದರೆ, ಅನೇಕ ಯುರೋಪಿಯನ್ ದೇಶಗಳು ಮಹಾ ಯುದ್ಧದಲ್ಲಿ ಹಿಂದೆ ಉಳಿದಿದ್ದ ಜನರಿಗೆ ತ್ವರಿತವಾಗಿ ಪೌರತ್ವವನ್ನು ನೀಡುತ್ತವೆ. ಕೆಲವು ಸಂದರ್ಭಗಳಲ್ಲಿ , ಮಹಾ ಯುದ್ಧಕ್ಕೂ ಮುಂಚಿನ ನಿದರ್ಶನಗಳಿವೆ. ಜಗತ್ತಿನಲ್ಲಿ ಇಂತಹ ಕಾನೂನುಗಳಿರುವ ಅನೇಕ ಉದಾಹರಣೆಗಳಿವೆ ಎಂದು ಜೈ ಶಂಕರ ನೇರವಾಗಿ ಹೇಳಿದರು.

ಸಂಪಾದಕೀಯ ನಿಲುವು

ಜಗತ್ತಿಗೆ ಬುದ್ಧಿ ಹೇಳುವ ಅಮೆರಿಕ ಮತ್ತು ಯುರೋಪಿಯನ್ ದೇಶಗಳಂತಹ ಸ್ವಯಂ ಘೋಷಿತ ಬುದ್ಧಿವಾದಿಗಳನ್ನು ಭಾರತವು ಇದೇ ರೀತಿ ಖಂಡಿಸಿ ಅವರಿಗೆ ಅವರ ಯೋಗ್ಯತೆ ತೋರಿಸುತ್ತಿರಬೇಕು !