ನ್ಯಾಯಾಲಯದಿಂದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ವಿರುದ್ಧ ದೂರು ದಾಖಲಿಸಲು ಆದೇಶ

ಶ್ರೀ ಲಕ್ಷ್ಮಿ ದೇವಿಯ ಬಗ್ಗೆ ಅಕ್ಷೆಪಾರ್ಹ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ನೋವು ಉಂಟು ಮಾಡಿದ ಪ್ರಕರಣ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಿಂದೂ ದೇವತೆಗಳ ವಿರುದ್ಧ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿರುವ ಪ್ರಕರಣದಲ್ಲಿ ಇಲ್ಲಿಯ ಎಂ.ಪಿ.ಎಂ.ಎಲ್.ಎ. ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯದಂಡಾಧಿಕಾರಿ ಅಂಬರೀಶ ಶ್ರೀನಿವಾಸ್ತವ ಇವರು ವಜೀರಗಂಜ ಪೊಲೀಸ ಠಾಣೆಯ ಮುಖ್ಯಸ್ಥರಿಗೆ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಮೌರ್ಯ ಇವರ ವಿರುದ್ಧ ದೂರು ದಾಖಲಿಸ ಬೇಕೆಂದು ಆಗ್ರಹಿಸಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.

ಕಳೆದ ವರ್ಷ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಯದ ದಿನದಂದು ದೇಶಾದ್ಯಂತ ಜನರು ಮನೆಮನೆಗಳಲ್ಲಿ ಲಕ್ಷ್ಮೀ ಪೂಜೆ ಮಾಡಿದರು. ಆ ಸಮಯದಲ್ಲಿ ಮೌರ್ಯ ಇವರು ತಮ್ಮ ಪತ್ನಿಯ ಪೂಜೆ ಮಾಡಿ ಕೆಲುವು ಛಾಯಾಚಿತ್ರಗಳನ್ನು ‘ಎಕ್ಸ್’ನಲ್ಲಿ ಪೋಸ್ಟ ಮಾಡಿ, ದೀಪೋತ್ಸವ ಪ್ರಯುಕ್ತ ನಾನು ನನ್ನ ಪತ್ನಿಯ ಪೂಜೆ ಮಾಡಿ ಆಕೆಯನ್ನು ಗೌರವಿಸಿದ್ದೇನೆ. ಜಗತ್ತಿನಲ್ಲಿ ಯಾವುದೇ ಧರ್ಮದಲ್ಲಿ, ಜಾತಿಯಲ್ಲಿ, ವಂಶ, ಬಣ್ಣ ಅಥವಾ ದೇಶದಲ್ಲಿ ಜನಿಸಿರುವ ಮಕ್ಕಳಿಗೆ ೨ ಕೈಗಳು, ೨ ಕಾಲುಗಳು, ೨ ಕಿವಿಗಳು, ೨ ಕಣ್ಣುಗಳು ಮತ್ತು ೨ ಹೋಳ್ಳೆ ಇರುವ ಮೂಗು, ಒಂದು ತಲೆ, ಒಂದು ಹೊಟ್ಟೆ ಮತ್ತು ಒಂದು ಬೆನ್ನು ಇರುತ್ತದೆ; ಆದರೆ ೪ ಕೈಗಳು, ೮ ಕೈಗಳು, ೧೦ ಕೈಗಳು, ೨೦ ಕೈಗಳು, ಸಾವಿರಾರು ಕೈಗಳ ಇರುವ ಮಕ್ಕಳು ಇಲ್ಲಿಯವರೆಗೆ ಈ ಜಗತ್ತಿನಲ್ಲಿ ಜನಿಸಿಲ್ಲ. ಹಾಗಾದರೆ ೪ ಕೈ ಇರುವ ಲಕ್ಷ್ಮಿ ಹೇಗೆ ಜನಿಸಿರಬಹುದು ?’, ಎಂದು ಬರೆದಿದ್ದರು. (ಹಿಂದುಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ ಮತ್ತು ಸಮಾಜದಲ್ಲಿ ಕೂಡ ವಿಕೃತ ವಿಚಾರ ಹರಡುತ್ತಾರೆ ! – ಸಂಪಾದಕರು) ನೀವು ಲಕ್ಷ್ಮಿಯ ಪೂಜೆ ಮಾಡಬೇಕಿದ್ದರೆ, ನೀವು ನಿಮ್ಮ ಪತ್ನಿಯ ಪೂಜೆ ಮಾಡಿ; ಆಕೆಯನ್ನು ಗೌರವಿಸಿ; ಕಾರಣ ಆಕೆ ನಿಮ್ಮ ಕುಟುಂಬದ ಪಾಲನೆ ಪೋಷಣೆ ಮಾಡುತ್ತಾಳೆ, ಮನೆಯಲ್ಲಿ ಸುಖ ಸಮೃದ್ಧಿ ಇರುವ ಹಾಗೆ ಕಾಳಜಿ ವಹಿಸುತ್ತಾಳೆ. ಹಾಗೂ ತನ್ನ ಜವಾಬ್ದಾರಿ ನಿರ್ವಹಿಸುತ್ತಾಳೆ. (ಒಂದು ಕಡೆ ಶ್ರೀ ಲಕ್ಷ್ಮಿ ದೇವಿ ಎಂದು ಪತ್ನಿಯ ಪೂಜೆ ಮಾಡುವುದು ಮತ್ತು ಇನ್ನೊಂದು ಕಡೆ ಈ ರೀತಿಯ ಹೇಳಿಕೆ ನೀಡಿ ಶ್ರೀ ಲಕ್ಷ್ಮಿ ದೇವಿಯನ್ನು ಅವಮಾನಿಸುವುದು, ಇಂತಹ ಮನೋಪ್ರವೃತ್ತಿಯ ಮೌರ್ಯ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳ ದೇವತೆಗಳನ್ನು ಬಹಿರಂಗವಾಗಿ ಅವಮಾನ ಮಾಡಲಾಗುತ್ತಿದೆ; ಆದರೆ ಅವರ ವಿರುದ್ಧ ಸರಕಾರ, ಆಡಳಿತ ಮತ್ತು ಪೊಲೀಸರು ತಾವಾಗಿಯೇ ಗಮನಹರಿಸಿ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ಹಿಂದೂಗಳು ಸಹಿಷ್ಣುಗಳು ಮತ್ತು ಕಾನೂನಿನ ಪಾಲನೆ ಮಾಡುತ್ತಾರೆ ಆದ್ದರಿಂದ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಾರೆ; ಆದರೆ ಮತಾಂಧ ಮುಸಲ್ಮಾನರು ಕಾನೂನು ಕೈಗೆತ್ತಿಕೊಂಡು ಹಿಂಸಾಚಾರ ನಡೆಸುತ್ತಾರೆ ಮತ್ತು ನಂತರ ಪೊಲೀಸರು ಅವಮಾನ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತಾರೆ !