ಕ್ರೈಸ್ತರಿಂದ ಸರಕಾರಿ ಜಾಗದಲ್ಲಿ ಅತಿಕ್ರಮಣ !
ಮುಂಬಯಿ – ಸ್ಥಳೀಯ ಮಢ ಸಮುದ್ರದಡದ ಹತ್ತಿರದ ಹಿಂದೂ ಬಹುಸಂಖ್ಯಾತ ಬೆಸ್ತರ ಗ್ರಾಮದಲ್ಲಿ ಸ್ಥಳೀಯ ಬೆಸ್ತರಿಂದ ಹೋಳಿ ದಹನ ಮತ್ತು ಅದಕ್ಕೆ ಸಂಬಂಧಿಸಿದ ಪದ್ಧತಿ – ಸಂಪ್ರದಾಯಗಳನ್ನು ಪಾಲಿಸಲು ಅಲ್ಲಿನ ಕ್ರೈಸ್ತರು ವಿರೋಧಿಸಿದರು. ಇದರೊಂದಿಗೆ ಬೆಸ್ತರಿಗೆ ಜೀವ ಬೆದರಿಕೆ ಹಾಕಿದರು. ಈ ಕುರಿತು ಮಾಲವಣಿ ಪೊಲೀಸ ಠಾಣೆಯಲ್ಲಿ ದೂರ ದಾಖಲಿಸಲಾಗಿದೆ. ಪೊಲೀಸರು ಸಂಬಂಧಪಟ್ಟವರಿಗೆ ಕಲಂ 149 ರ ನೊಟೀಸನ್ನು ಕಳುಹಿಸುವುದನ್ನು ಬಿಟ್ಟು ಬೇರೆ ಏನೂ ಮಾಡಿಲ್ಲವೆಂದು ಆರೋಪಿಸಲಾಗಿದೆ.
ಈ ಬಾರಿ ಹೋಳಿ ಅಂದರೆ ಹುಣ್ಣಿಮೆ ಮಾರ್ಚ 24 ರಂದು ಇದೆ. ಇಲ್ಲಿಯ ಬೆಸ್ತರು 15 ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಅವರು 15 ದಿನ ಒಂದುಗೂಡಿ ಜನಪದಗೀತೆ ಹಾಡುತ್ತಾರೆ, ಜನಪದ ನೃತ್ಯ ಮಾಡುತ್ತಾರೆ ಮತ್ತು ಕೊನೆಯ ದಿನ ಹೋಳಿಕಾ ದಹನ ಮಾಡುತ್ತಾರೆ. 1964 ರಿಂದ ಇಲ್ಲಿ ಬೆಸ್ತರು ಈ ಹಬ್ಬವನ್ನು ಆಚರಿಸುತ್ತಿದ್ದಾರೆ.
ಈ ಹಬ್ಬವನ್ನು ಆಚರಿಸಲು ಸ್ವಚ್ಛತೆ ಮತ್ತು ಪೂರ್ವಸಿದ್ಧತೆ ಮಾಡಿಕೊಳ್ಳಲು ಒಂದೆಡೆ ಸೇರಿದ್ದ ಹಿಂದೂಗಳಿಗೆ ರಿಚರ್ಡ ಕಿಲಮೊ, ಜೇಕಬ ಕಿಲಮೊ, ಕೆವಿನ ಬೆಸ್ತ, ಶಾನ ಬೆಸ್ತ, ಪುಲುಬಾಯಿ ಬೆಸ್ತ, ಪ್ರಿಸೀಲಾ ಕಿಲಮೊ ಈ ಪಕ್ಕದ ಓಣಿಯ ಕ್ರೈಸ್ತರು `ಹೋಳಿ ಹೊತ್ತಿಸಿದರೆ ಕಲ್ಲಿನಿಂದ ಚಚ್ಚಿ ಕೊಲ್ಲುತ್ತೇವೆ’ ಎಂದು ಬೆದರಿಸಿ, ತಳ್ಳುತ್ತಾ ಅವಾಚ್ಯ ಪದಗಳಿಂದ ಬೈದಿದ್ದಾರೆ.
ಈ ಹಿಂದೆಯೂ ಸಂಬಂಧಿಸಿದ ಆಡಳಿತದ ಸ್ಥಳದಲ್ಲಿ ಕ್ರೈಸ್ತರು ಕಲ್ಲು ಎಸೆದು ಅತಿಕ್ರಮಣ ಮಾಡಲು ಪ್ರಯತ್ನಿಸಿದ್ದರು. ಈ ಗ್ರಾಮದ ‘ಕೋಳಿ(ಬೆಸ್ತರು) ಸಮಾಜ ಕೃತಿ ಸಮಿತಿ’ ಯ ಅಧ್ಯಕ್ಷ ಪಾಂಡುರಂಗ ಕೋಳಿ ಇವರು ಮಾತನಾಡಿ, ಮಳೆಗಾಲದಲ್ಲಿ ದೋಣಿಗಳನ್ನು ಎಲ್ಲಿ ನಿಲ್ಲಿಸುತ್ತಾರೆಯೋ, ಅಲ್ಲಿ ಕ್ರೈಸ್ತರು ಕಲ್ಲು ಎಸೆದು ಅತಿಕ್ರಮಣ ನಡೆಸಿದ್ದಾರೆ. ಆದ್ದರಿಂದ ಹಬ್ಬವನ್ನು ಆಚರಿಸಲು ತೊಂದರೆ ಮಾಡುತ್ತಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಇಲ್ಲಿಯ ಅತಿಕ್ರಮಣವನ್ನು ತೆರವುಗೊಳಿಸದಿದ್ದರೆ ಬೆಸ್ತರ ಸಮಾಜವು ಅದನ್ನು ತೆರವುಗೊಳಿಸಲಿದೆ, ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಿತಿ ರಾವುತ್ ಇವರು ಎಚ್ಚರಿಕೆ ನೀಡಿದ್ದಾರೆ.
ಸಂಪಾದಕೀಯ ನಿಲುವು
|