|
ಮುಂಬಯಿ – ಕಮ್ಯುನಿಸ್ಟ್ ಸಿದ್ಧಾಂತಗಳಿಂದ ತುಂಬಿರುವ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ (‘ಜೆ.ಎನ್.ಯು.’ನ) ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯೊಂದಿಗೆ ಸರ್ವಾಂಗೀಣ ಅಧ್ಯಯನ ನಡೆಸಲು ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ‘ಛತ್ರಪತಿ ಶಿವಾಜಿ ಮಹಾರಾಜ ಅಧ್ಯಯನ ಕೇಂದ್ರ’ ಎಂದು ಈ ಕೇಂದ್ರಕ್ಕೆ ಹೆಸರಿಡಲಾಗಿದ್ದು, ಇದಕ್ಕಾಗಿ ಮಹಾರಾಷ್ಟ್ರ ಸರಕಾರವು 10 ಕೋಟಿ ರೂಪಾಯಿ ನಿಧಿಯನ್ನು ಅನುಮೋದಿಸಿದೆ. ಈ ಅಧ್ಯಯನ ಕೇಂದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ, ನೀತಿಗಳು, ರಾಜಕಾರಣದ ಪದ್ಧತಿ ಮತ್ತು ಬೋಧನೆಗಳ ಅಧ್ಯಯನ ನಡೆಸಲಿದೆ.
ಛತ್ರಪತಿ ಶಿವಾಜಿ ಮಹಾರಾಜರ 350 ನೇ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ ಮುನಗಂಟಿವಾರ ಅವರು ಇಂತಹ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವ ಕಲ್ಪನೆಯನ್ನು ರೂಪಿಸಿದ್ದರು. ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶಾಂತಿಶ್ರೀ ಪಂಡಿತ ಅವರೊಂದಿಗೆ ಸುಧೀರ ಮುನಗಂಟಿವಾರ್ ಅವರು ಈ ಕುರಿತು ಚರ್ಚಿಸಿದ್ದಾರೆ. ಈ ಅಧ್ಯಯನಕ್ಕಾಗಿ ಪಠ್ಯಕ್ರಮವನ್ನು ತಯಾರಿಸಲು, ವಿಷಯ ಮಂಡನೆಗಾಗಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ವಿಷಯದ ಸಂಶೋಧನೆಗಾಗಿ ಮಹಾರಾಷ್ಟ್ರ ಸರಕಾರ ಜವಾಹರಲಾಲ ನೆಹರು ವಿಶ್ವವಿದ್ಯಾಲಯಕ್ಕೆ ಸಹಕಾರ ನೀಡಲಿದೆ. ಸ್ವತಃ ಸುಧೀರ ಮುನಗಂಟಿವಾರ ಇವರು ಈ ಬಗ್ಗೆ ಗಮನ ಹರಿಸಲಿದ್ದಾರೆ. ಮಹಾರಾಷ್ಟ್ರ ಸರಕಾರ ಆದಷ್ಟು ಬೇಗನೆ ಈ ನಿಧಿಯನ್ನು ವಿತರಿಸಲಿದೆ.
देशातील नामवंत जवाहरलाल नेहरू विद्यापीठात स्थापन होणार छत्रपती शिवाजी महाराज अध्यासन केंद्र.#ChhatrapatiShivajiMaharaj #JNU #SMUpdate pic.twitter.com/ClWPkLiP2j
— Sudhir Mungantiwar (Modi Ka Parivar) (@SMungantiwar) March 15, 2024
ಗಮಿನಿ ಕಾವ್ಯದ ಬಗ್ಗೆಯೂ ಸಂಶೋಧನೆ !
ಛತ್ರಪತಿ ಶಿವಾಜಿ ಮಹಾರಾಜರ ಕಾಲಾವಧಿಯಲ್ಲಿ ಭದ್ರತೆ, ಪಶ್ಚಿಮ ಹಿಂದೂ ಮಹಾಸಾಗರದ ಮರಾಠಾ ನೌಕಾ ರಣನೀತಿ, ಗನಿಮಿ ಕಾವ್ಯ, ಕೋಟೆ-ದುರ್ಗದ ಕರಾವಳಿ ರಕ್ಷಣಾ ರಣತಂತ್ರ, ಮರಾಠಾ ಇತಿಹಾಸ ಮುಂತಾದ ವಿಷಯಗಳ ಕುರಿತು ಸಂಶೋಧನಾತ್ಮಕ ಕಾರ್ಯ ನಡೆಯಲಿದೆ. ಈ ಅಧ್ಯಯನದ ಮೂಲಕ, ಮರಾಠಿ ಭಾಷೆಯಿಂದಲೂ ಡಿಪ್ಲೊಮಾ, ಪದವಿ ಮತ್ತು ವಿದ್ಯಾವಾಚಸ್ಪತಿ ಪದವಿ (ಪಿ.ಎಚ್.ಡಿ.) ನೀಡಲಾಗುತ್ತದೆ. ಮರಾಠಾ ಸಾಮ್ರಾಜ್ಯದ ಸೈನ್ಯದ ವ್ಯೂಹರಚನೆ, ಕೋಟೆ ಮತ್ತು ಕರಾವಳಿ ದಡಗಳ ರಚನೆ ವಿಷಯದ ಅಭ್ಯಾಸಕ್ರಮ ಇರಲಿದೆ. ವಿಶ್ವವಿದ್ಯಾಲಯದ ಅನುದಾನ ಆಯೋಗದ ನಿಯಮಗಳ ಪ್ರಕಾರ ಈ ಅಧ್ಯಯನ ಕಾರ್ಯ ನಡೆಯಲಿದೆ.
ಛತ್ರಪತಿ ಶಿವಾಜಿ ಮಹಾರಾಜರ ಸರ್ವಾಂಗೀಣ ಅಭ್ಯಾಸ ನಡೆಸುವುದು ಆವಶ್ಯಕತೆಯಿದೆ ! – ಸುಧೀರ್ ಮುನಗಂಟಿವಾರ, ಸಾಂಸ್ಕೃತಿಕ ವ್ಯವಹಾರಗಳ ಸಚಿವ, ಮಹಾರಾಷ್ಟ್ರ
ಛತ್ರಪತಿ ಶಿವಾಜಿ ಮಹಾರಾಜರ ಯುದ್ಧದಲ್ಲಿನ ಪರಾಕ್ರಮ ಮಾತ್ರವಲ್ಲ, ಅವರ ರಾಜ್ಯಾಡಳಿತ, ಅವರ ಆಡಳಿತದ ತತ್ವಜ್ಞಾನ, ಆಡಳಿತವನ್ನು ನಡೆಸಲು ರೂಪಿಸಿದ ಸುಸಂಘಟಿತ ಆಡಳಿತ ವ್ಯವಸ್ಥೆ, ಆಡಳಿತದಲ್ಲಿ ಸ್ವಭಾಷೆಗೆ ನೀಡಿದ ಮಹತ್ವ, ವಿದೇಶಾಂಗ ನೀತಿ, ವಿದೇಶಿ ದಾಳಿಗಳನ್ನು ನಾಶಪಡಿಸಿ ಸ್ವಕೀಯ ರಾಜ್ಯವನ್ನು ಸ್ಥಾಪಿಸುವ ಕಾರ್ಯ, ಮಹಾರಾಜರ ರಾಜಕೀಯ ತತ್ವಜ್ಞಾನಗಳೊಂದಿಗೆ ಭಾರತದ ರಾಜಕಾರಣ ಮತ್ತು ಸಮಾಜದ ಮನಸ್ಸು ಇವುಗಳ ಮೇಲೆ ಮಹಾರಾಜರ ಆಡಳಿತದ ಸುದಿರ್ಘ ಸಕಾರಾತ್ಮಕ ಪರಿಣಾಮ, ಅದರ ಅಭ್ಯಾಸವು ಅಧ್ಯಯನದ ಕೇಂದ್ರದಲ್ಲಿ ನಡೆಯಬೇಕು. ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ಕೌಶಲ್ಯಗಳು, ಅವರ ಆಡಳಿತಾತ್ಮಕ ಅಂಶಗಳು, ಸಂಸ್ಕೃತಿ, ದೇವಸ್ಥಾನಗಳು, ವ್ಯಾಪಾರ, ಕೃಷಿ, ಜಲ ಸಂರಕ್ಷಣೆ ಮತ್ತು ನೀರಾವರಿ, ಗ್ರಾಮಗಳು, ವಸತಿಗಳು ಹಾಗೆಯೇ ನಗರಗಳ ನಿರ್ವಹಣೆ ಮತ್ತು ನಿಯೋಜನೆ, ಸಂರಕ್ಷಣಾ ಕಾರ್ಯವಿಧಾನಗಳು, ವ್ಯವಸ್ಥಾಪನೆ, ವಿದೇಶಿ ಆಕ್ರಮಣದ ವಿಷಯದ ನೀತಿಗಳು, ಸಂತ ಮಹಾತ್ಮರ ವಿಷಯದ ಧೋರಣೆಗಳು, ಇತ್ಯಾದಿ ವಿವಿಧ ಅಂಗಗಳಿಂದ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರ ಮತ್ತು ರಾಜ್ಯಾಡಳಿತದ ಬಗ್ಗೆ ಅಭ್ಯಾಸ ಅಧ್ಯಯನ ಕೇಂದ್ರದಲ್ಲಿ ನಡೆಯುವುದು ಅವಶ್ಯಕವಾಗಿದೆ.