ಹಣೆಯ ಮೇಲೆ 3 ಹೊಲಿಗೆ !
ಕೋಲಕಾತಾ (ಬಂಗಾಳ) – ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ-ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಮಾರ್ಚ್ 14 ರ ಸಂಜೆ ಮನೆಯಲ್ಲಿರುವಾಗ ಹಿಂದಿನಿಂದ ಯಾರೋ ದೂಡಿದ್ದರಿಂದ ಕೆಳಗೆ ಬಿದ್ದರು. ಇದರಿಂದ ಅವರ ಹಣೆಯ ಮೇಲೆ ಮತ್ತು ಮೂಗಿಗೆ ಗಾಯವಾಯಿತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಹಣೆಯ ಮೇಲೆ 3 ಹೊಲಿಗೆ ಹಾಕಲಾಗಿದೆ. ವೈದ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪೂರ್ಣ ಕಾಳಜಿ ತೆಗೆದುಕೊಳ್ಳಲು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು. ಆದರೆ ಅವರು ಮನೆಗೆ ಹೋದರು ಎಂದು ಅಲ್ಲಿಯ ಎಸ್.ಎಸ್.ಕೆ. ಎಮ್. ಆಸ್ಪತ್ರೆಯ ನಿರ್ದೇಶಕ ಮೊನಿಮೋಯ ಬಂದೋಪಾಧ್ಯಾಯ ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿಯವರು ಆದಷ್ಟು ಬೇಗನೆ ಗುಣಮುಖರಾಗಬೇಕೆಂದು ಪ್ರಧಾನಮಂತ್ರಿಯವರು ಶುಭ ಹಾರೈಸಿದ್ದಾರೆ.
ಪೊಲೀಸರು ಘಟನೆಯ ತನಿಖೆ ನಡೆಸಲಿದ್ದಾರೆ
ಕೋಲಕಾತಾದ ಲಾಲಬಾಜಾರ ಪೊಲೀಸ ಠಾಣೆಯ ಪೊಲೀಸರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಾಯಗೊಂಡಿರುವ ಘಟನೆಯ ತನಿಖೆ ನಡೆಸಲಿದ್ದಾರೆ. ಮಮತಾ ಬ್ಯಾನರ್ಜಿಯವರ ಮಲಗುವ ಕೋಣೆಯಲ್ಲಿ ಪ್ರವೇಶಿಸಿರುವವರ ಬಗ್ಗೆಯೂ ವಿಚಾರಣೆ ನಡೆಸಲಿದ್ದಾರೆ.
Trinamool chief Mamata Banerjee hospitalised after ‘major injury’
Trinamool Congress chief Mamata Banerjee has been hospitalised after suffering a major injury, said the party on Thursday. She was admitted to the state-run SSKM hospital after getting injured.
The party did not… pic.twitter.com/oXDeIW15Lj
— IndiaToday (@IndiaToday) March 14, 2024