Demolish Illegal Structures: ಮಾರ್ಚ್ ೨೨ ವರೆಗೆ ಅಕ್ರಮ ಕಟ್ಟಡ ನೆಲಸಮ ಮಾಡದೇ ಇದ್ದರೆ ಸರಕಾರದಿಂದ ಕ್ರಮ !

  • ಉತ್ತನ (ಠಾಣೆ ಜಿಲ್ಲೆ)ದಲ್ಲಿ ೭೦ ಸಾವಿರ ಅಡಿ ಸರಕಾರಿ ಜಾಗದಲ್ಲಿನ ಆಘಾತಕಾರಿ ಘಟನೆ !

  • ಮುಂಬಯಿ ಸರಕಾರಿ ಜಾಗದಲ್ಲಿ ಅಕ್ರಮ ದರ್ಗಾದ ಕಾಮಗಾರಿ !

ಠಾಣೆ – ಮುಂಬಯಿದಿಂದ ೫ ಕಿಲೋಮೀಟರ್ ದೂರದಲ್ಲಿರುವ ಉತ್ತನ ಪ್ರದೇಶದಲ್ಲಿ ಒಂದು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹಜರತ್ ಸಯ್ಯದ್ ಬಾಲೆಶಾಹ ಪೀರ ದರ್ಗಾ ಕಟ್ಟಿರುವ ಆರೋಪವಿದೆ. ೭೦ ಸಾವಿರ ಅಡಿಯಲ್ಲಿ ೧೦೦ ಅಡಿಯ ದರ್ಗಾ ಅಕ್ರಮವಾಗಿ ಕಟ್ಟಲಾಗಿದೆ.

ಈ ಸಂಬಂಧ ಮೀರಾ-ಬಾಯಿಂದರ ಮಹಾನಗರ ಪಾಲಿಕೆಯ ಬಳಿ ಸತತವಾಗಿ ದೂರುಗಳು ಬರುತ್ತಿದ್ದವು; ಆದರೆ ದೃಢವಾದ ಕ್ರಮ ಕೈಗೊಂಡಿರಲಿಲ್ಲ. ದರ್ಗಾದ ಬಗ್ಗೆ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ. ದರ್ಗಾದ ಸಂಚಾಲಕನ ಮೇಲೆ ಅಕ್ರಮ ಕಾಮಗಾರಿ ಮತ್ತು ಸರಕಾರಿ ಜಾಗದ ಕಬಳಿಕೆಯ ಆರೋಪ ಮಾಡಿಲಾಗಿದೆ. ದರ್ಗಾ ಟ್ರಸ್ಟಿಗೆ ಮಾರ್ಚ್ ೨೨ ವರೆಗೆ ಅಕ್ರಮ ಕಟ್ಟಡ ಕೆಡವಲು ಹೇಳಲಾಗಿದೆ. ಹಾಗೆ ಮಾಡದಿದ್ದರೆ ಸರಕಾರ ಈ ಕಟ್ಟಡ ನೆಲಸಮ ಮಾಡುವುದೆಂದು ನ್ಯಾಯಾಲಯವು ಹೇಳಿದೆ.

೧. ಮಾರ್ಚ್ ೧೯೯೩ ರ ಬಾಂಬ್ ಸ್ಪೋಟಕ್ಕಾಗಿ ತಂದಿದ್ದ ಸ್ಪೋಟದ ಸಾಹಿತ್ಯ ರಾಯಗಡದಲ್ಲಿನ ಶೇಖಾಡಿಯ ಸಮುದ್ರ ತೀರದಲ್ಲಿ ಇಳಿಸಲಾಗಿತ್ತು. ೨೦೦೮ ರಲ್ಲಿ ಮುಂಬಯಿಯಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ೧೦ ಭಯೋತ್ಪಾದಕರು ಸಮುದ್ರ ಮಾರ್ಗದಿಂದ ಮುಂಬಯಿಯಲ್ಲಿ ನುಸಳಿದ್ದರು.

೨. ಠಾಣೆಯಲ್ಲಿನ ಉತ್ತನ ದರ್ಗಾ ಪರಿಸರ ಇದು ಕೂಡ ಸಮುದ್ರ ತೀರದಲ್ಲಿ ಇದೆ. ಉತ್ತನ ದರ್ಗಾದ ಅಕ್ಕಪಕ್ಕದ ಜಾಗದ ಮೇಲೆ ಅಕ್ರಮವಾಗಿ ಸ್ವಾಧೀನ ಪಡೆದಿದ್ದಾರೆ. ದರ್ಗಾದ ಮೌಲ್ವಿಯ ಮೇಲೆ ಅಪ್ರಾಪ್ತ ಹುಡುಗಿಯ ಮತಾಂತರ ಮಾಡಿ ನಿಕಾಹ ಮಾಡುವುದು, ದರ್ಗಾದಲ್ಲಿ ೮ ಅಕ್ರಮ ನಿಸುಳುಕೊರರಿಗೆ ಆಶ್ರಯ ನೀಡಿರುವುದು, ನೆಲಮಾಳಿಗೆಯಲ್ಲಿ ಮಾದಕ ವಸ್ತುಗಳ ಕೇಂದ್ರ ಮಾಡಿರುವುದು, ಅಕ್ಕ ಪಕ್ಕದ ಪೋದೆಯ ಕಾಡಿನಲ್ಲಿನ ಮರಗಳ ಕತ್ತರಿಸುವುದು, ಹೀಗೆ ಅನೇಕ ಆರೋಪಗಳಿವೆ.

೩. ಕಳೆದ ಅನೇಕ ವರ್ಷಗಳಿಂದ ದರ್ಗಾ ಟ್ರಸ್ಟ್ ನಿಧಾನವಾಗಿ ಅರಣ್ಯ ಇಲಾಖೆಯ ಭೂಮಿಯ ಮೇಲೆ ನಿಯಂತ್ರಣ ಪಡೆದಿದೆ. ದರ್ಗಾದ ಹತ್ತಿರ ದೋಣಿಗಳು ಸುತ್ತುತ್ತವೆ; ಆದರೆ ಅಲ್ಲಿಯ ಪರಿಸರ ನಿರ್ಜನವಾಗಿದೆ. ಆದ್ದರಿಂದ ಇದು ಸಮಾಜಘಾತಕ ಕೇಂದ್ರವಾಗಿದೆ.

೪. ದರ್ಗಾದ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಲಾಗಿತ್ತು, ಆಗ ಸರಕಾರಕ್ಕೆ ಅಕ್ರಮ ಕಾಮಗಾರಿ ನೆಲಸಮ ಮಾಡುವ ನೋಟಿಸ್ ಕಳುಹಿಸಲಾಗಿತ್ತು.

೫. ದರ್ಗಾ ಟ್ರಸ್ಟ್ ದರ್ಗಾದ ಮೇಲೆ ಹೊರಿಸಿರುವ ಆರೋಪ ಅಯೋಗ್ಯ ಎಂದು ಹೇಳಿದೆ. ಅವರ ಪ್ರಕಾರ ಉತ್ತನದ ಈ ದರ್ಗಾ ಪೋರ್ತುಗಿಜರ ಕಾಲದ್ದಾಗಿದೆ.

ಸಂಪಾದಕೀಯ ನಿಲುವು

  • ಸರಕಾರಿ ಜಾಗದಲ್ಲಿ ಅತಿಕ್ರಮಣವಾಗುವವರೆಗೆ ಸರಕಾರ ನಿದ್ರಿಸುತ್ತಿತ್ತೆ ? ಇಂತಹವರ ಮೇಲೆ ಮೊದಲು ಕಠಿಣ ಕ್ರಮ ಕೈಗೊಳ್ಳಬೇಕು !
  • ದೊಡ್ಡ ಪ್ರಮಾಣದಲ್ಲಿ ದರ್ಗಾದ ಅಕ್ರಮ ಕಾಮಗಾರಿ ನಡೆಯುವುದು ಇದು ಭೂಮಿ ಜಿಹಾದದ ಪ್ರಕಾರವಾಗಿದೆ ! ಇದರ ವಿರುದ್ಧ ಹಿಂದೂಗಳು ಧ್ವನಿ ಎತ್ತಬೇಕು !