ಪರಸ್ಪರ ವಿಶ್ವಾಸ ಇದ್ದರೆ, ತಪ್ಪು ತಿಳುವಳಿಕೆಗಳು ದೂರವಾಗಿ ನಮ್ಮ ಸಂಬಂಧವು ಗಟ್ಟಿಯಾಗುವುದು: ಚೀನಾ

ಭಾರತದ ಬಗ್ಗೆ ವಿಶ್ವಾಸಘಾತಿ ಚೀನಾ ಹೇಳಿಕೆ!

ಬೀಜಿಂಗ್(ಚೀನಾ) – ಭಾರತ-ಚೀನಾ ಗಡಿ ವಿವಾದವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿನಿಧಿಸುವುದಿಲ್ಲ.ನಾವು ಪರಸ್ಪರ ವಿಶ್ವಾಸವಿಡಬೇಕು. ಇದರಿಂದ ನಮ್ಮಲ್ಲಿನ ತಪ್ಪು ತಿಳುವಳಿಕೆಗಳು ದೂರವಾಗಿ ಸಂಬಂಧ ಗಟ್ಟಿಯಾಗುವವು, ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನಬಿನ್ ಹೇಳಿದ್ದಾರೆ. ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜಯಶಂಕರ ಮಾತನಾಡಿ, ಎಲ್ಲಿಯವರೆಗೆ ಗಡಿವಿವಾದಗಳು ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಭಾರತ-ಚೀನಾ ಸಂಬಂಧ ಸಹಜವಾಗಿರಲು ಸಾಧ್ಯವಿಲ್ಲ ಎಂದಿದ್ದರು

ಸಂಪಾದಕೀಯ ನಿಲುವು

‘ಪರಸ್ಪರ ವಿಶ್ವಾಸ ಇಡಲು ಚೀನಾ ನಂಬಿಕಸ್ಥವಾಗಿದೆಯೇ? ಚೀನಾದ ಮೇಲೆ ವಿಶ್ವಾಸ ಇಟ್ಟವರಿಗೆ ಆತ್ಮ ಘಾತಕವಾಗಿದೆ ಎಂಬುದು ಇತಿಹಾಸ ಹೇಳುತ್ತದೆ ಮತ್ತು ಅಂತಹ ಅನುಭವ ಈ ಹಿಂದೆ ಭಾರತಕ್ಕೂ ಆಗಿದೆ! ಅಂತಹ ಕಟು ಅನುಭವ ಹೊಂದಿರುವ ಭಾರತವು ಚೀನಾದ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ!