Maulvi Life Imprisonment : ಮಸೀದಿಯಲ್ಲಿ ೧೦ ವರ್ಷದ ಹುಡುಗನ ಮೇಲೆ ಲೈಂಗಿಕ ಕಿರುಕುಳ ನೀಡಿದ ಮೌಲ್ವಿ ನಸೀಮ ಖಾನ್ ಗೆ ಜೀವಾವಧಿ ಶಿಕ್ಷೆ

(ಮೌಲ್ವಿ ಎಂದರೆ ಇಸ್ಲಾಂ ಧಾರ್ಮಿಕ ಮುಖಂಡ)

ಆರೋಪಿ ಮೌಲ್ವಿ ನಸೀಮ ಖಾನ್

ಕೋಟಾ – ಮಸೀದಿಯಲ್ಲಿ ಅರಬಿ ಕಲಿಯಲು ಬರುತ್ತಿದ್ದ ೧೦ ವರ್ಷದ ಹುಡುಗನ ಮೇಲೆ ಲೈಂಗಿಕ ಕಿರುಕುಳ ಎಸಗಿರುವ ಪ್ರಕರಣದಲ್ಲಿ ಆರೋಪಿ ಮೌಲ್ವಿ ನಸೀಮ ಖಾನ್ ಇವನಿಗೆ ಕೋಟ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ದೀಪಕ ದುಬೆ ಇವರು ‘ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಷ್ಯುಅಲ್ ಅಫೇನ್ಸ್’ (ಪೋಕ್ಸೋ) ಈ ಕಾನೂನಿನ ಅಂತರ್ಗತ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ೫ ತಿಂಗಳ ಹಳೆಯ ಮೊಕದ್ದಮೆಯ ತೀರ್ಪು ನೀಡುವಾಗ ನ್ಯಾಯಾಧೀಶ ದೀಪಕ ದುಬೆ ಇವರು, ನಿನ್ನ (ಸಂತ್ರಸ್ತ ಹುಡುಗ) ಅಪರಾಧಿ ಈಗ ಜೈಲಲ್ಲಿ ಇದ್ದಾನೆ ಮತ್ತು ಅವನು ನಿನಗೆ ಕಿರುಕುಳ ನೀಡುವುದಿಲ್ಲ ಎಂದು ಬರೆದರು.

ಸರಕಾರಿ ನ್ಯಾಯವಾದಿ ಲಲಿತ ಕುಮಾರ ಶರ್ಮಾ ಇವರು, ನ್ಯಾಯಾಲಯವು ಪಲವಲ (ಹರಿಯಾಣ) ಇಲ್ಲಿಯ ಮೌಲ್ವಿ ನಸೀಮ ಖಾನ್ ಇವನಿಗೆ ಕೊನೆಯ ಉಸಿರು ಇವರೆಗೆ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಅವನಿಗೆ ೨೧ ಸಾವಿರ ರೂಪಾಯಿಯ ದಂಡ ಕೂಡ ವಿಧಿಸಿದೆ ಎಂದು ಹೇಳಿದರು. ಅವರು, ಧಾರ್ಮಿಕ ನಾಯಕರಾಗಿದ್ದರು ಕೂಡ ಪವಿತ್ರ ಸ್ಥಳಗಳಲ್ಲಿ ತಪ್ಪಾದ ಕೃತ್ಯಗಳು ಮಾಡಿರುವುದರ ಬಗ್ಗೆ ನ್ಯಾಯಾಲಯವು ತಮ್ಮ ತೀರ್ಪಿನಲ್ಲಿ ಅಮಾಯಕ ಹುಡುಗನ ಬಗ್ಗೆ ಖೇದ ವ್ಯಕ್ತಪಡಿಸುವ ಒಂದು ಕವಿತೆ ಕೂಡ ಬರೆದಿದ್ದಾರೆ. ವಿಚಾರಣೆಯ ಸಮಯದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹಿಸಿದ್ದರು ಆದರೆ ನ್ಯಾಯಾಲಯವು, ಈ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವುದು, ಪ್ರಾಯಶ್ಚಿತ್ತವಲ್ಲ, ಅವನು ಜೀವನ ಪೂರ್ತಿ ಜೈಲಲ್ಲಿ ಉಳಿದರೆ ಆಗ ಅದು ಪ್ರತಿದಿನ ಅವನಿಗೆ ಪಾಪದ ಪ್ರಾಯಶ್ಚಿತ್ತವಾಗುವುದು ಎಂದು ಹೇಳಿದರು.

ಈ ಪ್ರಕರಣದಲ್ಲಿ ಅಕ್ಟೋಬರ್ ೨೨, ೨೦೨೩ ರಂದು ಸಂತ್ರಸ್ತ ಹುಡುಗನ ಚಿಕ್ಕಪ್ಪ ಬುಧಡಿಯ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನಲ್ಲಿ, ಹುಡುಗನ ತಂದೆಯ ಮೃತ್ಯುವಿನ ನಂತರ ಅವರ ಮಗ ಅವರ ಜೊತೆಗೆ ವಾಸಿಸುತ್ತಿದ್ದನು. ಅವನು ೫ ನೆ ತರಗತಿಯಲ್ಲಿ ಓದುತ್ತಿದ್ದನು. ಅಕ್ಟೋಬರ್ ೨೨, ೨೦೨೩ ರಂದು ಸಂಜೆ ಅವನು ಅಳುತ್ತಾ ಮನೆಗೆ ಬಂದನು. ಮಧ್ಯಾಹ್ನ ೩.೩೦ ಗಂಟೆಗೆ ಅವನು ಮಸೀದಿಯಲ್ಲಿ ಮೌಲ್ವಿಯ ಬಳಿ ಅರಬಿ ಕಲಿಯಲು ಹೋಗಿದ್ದನು. ಅಲ್ಲಿ ಮೌಲ್ವಿ ನಸೀಮ್ ಖಾನ್ ಇವನು ಅವನಿಗೆ ಸ್ವಲ್ಪ ಸಮಯ ಕಲಿಸಿದನು ನಂತರ ಮಸೀದಿಯ ಕೋಣೆಗೆ ಕರೆದುಕೊಂಡು ಹೋಗಿ ಅವನ ಮೇಲೆ ದೌರ್ಜನ್ಯ ಎಸೆಗಿದನು ಮತ್ತು ಯಾರಿಗಾದರೂ ಹೇಳಿದರೆ ಜೀವ ಬೆದರಿಕೆ ನೀಡಿದನು. ದೂರಿನ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿ ಆರೋಪಿ ಮೌಲ್ವಿ ನಸೀಮ ಖಾನ್ ಇವನನ್ನು ಬಂಧಿಸಿದ್ದರು.

ಸಂಪಾದಕೀಯ ನಿಲುವು

ಹಿಂದೂಗಳ ಅರ್ಚಕರು, ಸಂತರು ಮುಂತಾದವರ ಮೇಲೆ ಕೆಸರು ಎರಚುವ ಪ್ರಗತಿ (ಅಧೋ) ಪರರು ಈಗ ಮೌಲ್ವಿಯ ಕೃತ್ಯದ ಬಗ್ಗೆ ಒಂದು ಶಬ್ದ ಕೂಡ ಮಾತನಾಡುವುದಿಲ್ಲ, ಇದನ್ನು ತಿಳಿಯಿರಿ !