Kalaram Temple Notice Withdrawn : ಹಿಂದೂ ಜನಜಾಗೃತಿ ಸಮಿತಿಯ ರಮೇಶ ಶಿಂದೆ ಇವರು ಪೊಲೀಸರ ಪಕ್ಷಪಾತ ಭಹಿರಂಗಪಡಿಸುತ್ತಲೆ ಶ್ರೀ ಕಾಳಾರಾಮ ದೇವಸ್ಥಾನಕ್ಕೆ ನೀಡಿರುವ ನೋಟಿಸ್ ಪೋಲಿಸರಿಂದ ಹಿಂಪಡೆ !

ಧ್ವನಿವರ್ಧಕದ ಪ್ರಕರಣದಲ್ಲಿ ನಾಶಿಕದ ಕಾಳಾರಾಮ ದೇವಸ್ಥಾನಕ್ಕೆ ನೋಟಿಸ್ ಜಾರಿ ಮಾಡಿದ ಪ್ರಕರಣ !

ನಾಶಿಕ – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು ಶ್ರೀ. ರಮೇಶ ಶಿಂದೆ ಇವರು ಒಂದು ಪ್ರಕರಣದಲ್ಲಿ ಪೊಲೀಸರ ಕ್ರಮದ ಹಿಂದಿನ ಪಕ್ಷಪಾತವನ್ನು ಬಹಿರಂಗ ಪಡಿಸಿದ ನಂತರ ಶ್ರೀ ಕಾಳಾರಾಮ ದೇವಸ್ಥಾನಕ್ಕೆ ಧ್ವನಿ ವರ್ಧಕದ ಪ್ರಕರಣದಲ್ಲಿ ನೀಡಿರುವ ಕ್ರಮ ಕೈಗೊಳ್ಳುವ ನೋಟಿಸ್ಅನ್ನು ಪೊಲೀಸರು ಹಿಂಪಡೆದಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು ಶ್ರೀ. ರಮೇಶ ಶಿಂದೆ ಇವರು ‘ಶ್ರೀ ಕಾಳಾರಾಮ ದೇವಸ್ಥಾನದಲ್ಲಿ ಭಕ್ತಿ ಗೀತೆ ಹಾಕುತ್ತಿದ್ದರು ಎಂದು ನೋಟಿಸ್ ಕಳುಹಿಸುವವರು ಬೆಳಿಗ್ಗೆ ೫ ರಿಂದ ೬ ಈ ಸಮಯದಲ್ಲಿ ಧ್ವನಿ ಮಾಲಿನ್ಯ ಕಾನೂನು ಉಲ್ಲಂಘನೆ ಮಾಡುವ ಮಸೀದಿಯ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ತೋರಿಸುವರೇ ? ಎಂದು ಮಾರ್ಚ್ ೧೨ ರಂದು ‘ಎಕ್ಸ್’ನಲ್ಲಿ ಪ್ರಶ್ನೆ ಕೇಳಿದ್ದರು. ಅದರ ನಂತರ ದೂರುದಾರರು ದೂರು ಹಿಂಪಡೆದಿರುವುದರಿಂದ ನೋಟಿಸ್ ಹಿಂಡೆಯುತ್ತಿರುವುದಾಗಿ ಪೊಲೀಸರು ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಪಂಚವಟಿಯಲ್ಲಿ ಓರ್ವ ನಾಗರಿಕನು ಮಾರ್ಚ್ ೭ ರಂದು ಪಂಚವಟಿ ಪೊಲೀಸ ಠಾಣೆಯಲ್ಲಿ ಶ್ರೀ ಕಾಳಾರಾಮ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ೬ ರಿಂದ ೭ ವರೆಗೆ ಧ್ವನಿವರ್ಧಕ ಹಾಕುತ್ತಿರುವುದಿರಿಂದ ಅದರ ವಿರುದ್ಧ ಲಿಖಿತ ದೂರು ದಾಖಲಿಸಿದ್ದರು. ‘ಈ ಧ್ವನಿ ಇಂದ ಸ್ಥಳೀಯರಿಗೆ ತೊಂದರೆ ಆಗುತ್ತದೆ ಹಾಗೂ ೧೦ ನೆಯ ಮತ್ತು ೧೨ ನೆ ತರಗತಿಯ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತೊಂದರೆ ಆಗುತ್ತಿದೆ. ಎಲ್ಲರ ನಿದ್ದೆ ಹಾಳಾಗುತ್ತದೆ’, ಎಂದು ದೂರಿನಲ್ಲಿ ಹೇಳಿದ್ದರು. ಇದರ ನಂತರ ಪೊಲೀಸರು ‘ದೇವಸ್ಥಾನದಲ್ಲಿನ ಧ್ವನಿವರ್ಧಕ ಬಂದ ಮಾಡಿ’,ಎಂದು ನೋಟಿಸ್ ಕಳುಹಿಸಿದ್ದರು.

ಸಂಪಾದಕೀಯ ನಿಲುವು

ದೇವಸ್ಥಾನದ ಮೇಲೆ ಕ್ರಮ; ಆದರೆ ನೂರಾರು ದೂರಿನ ನಂತರ ಕೂಡ ಮಸೀದಿ ಮೇಲಿನ ಬೋಂಗಾದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಪೊಲೀಸರ ಪಕ್ಷಪಾತ ಅಲ್ಲವೇ ?