Approval for Railway Station Name Change: ಅಮೇಠಿ (ಉತ್ತರ ಪ್ರದೇಶ)ಯ ೮ ರೈಲು ನಿಲ್ದಾಣಗಳ ಮರುನಾಮಕರಣ !

ಜೈಸ ರೈಲು ನಿಲ್ದಾಣಕ್ಕೆ ಗುರು ಗೋರಕನಾಥ ಧಾಮ ಎಂದು ಮರುನಾಮಕರಣ

ಅಮೇಠಿ (ಉತ್ತರಪ್ರದೇಶ) – ಆಮೇಠಿ ಜಿಲ್ಲೆಯಲ್ಲಿನ ೮ ರೈಲು ನಿಲ್ದಾಣಗಳ ಹೆಸರು ಬದಲಾಯಿಸಲು ರೈಲು ಸಚಿವಾಲಯದಿಂದ ಒಪ್ಪಿಗೆ ಸಿಕ್ಕಿದೆ. ಈಗ ಜೈಸ ರೈಲು ನಿಲ್ದಾಣವನ್ನು ಗುರು ಗೋರಖನಾಥ ಧಾಮ ಎಂದು ಗುರುತಿಸಲಾಗುವುದು. ಜಿಲ್ಲೆಯಲ್ಲಿನ ಇತರ ೭ ರೈಲು ನಿಲ್ದಾಣಗಳಿಗೆ ಜಿಲ್ಲೆಯಲ್ಲಿನ ಪ್ರಸಿದ್ಧ ದೇವಸ್ಥಾನಗಳು ಮತ್ತು ಮಹಾಪುರುಷರ ಹೆಸರುಗಳು ನೀಡುವರು. ಈ ಕುರಿತು ರಾಜ್ಯಪತ್ರದಲ್ಲಿ ಸುತ್ತೋಲೆ ಪ್ರಸಿದ್ಧ ಗೊಳಿಸಬೇಕೆಂದು ಕೇಂದ್ರ ಸರಕಾರವು ರಾಜ್ಯ ಸರಕಾರದ ವಿಶೇಷ ಸಚಿವರಿಗೆ ಪತ್ರ ಕಳುಹಿಸಿದ್ದಾರೆ.

೧. ಇತ್ತೀಚಿಗೆ ಜಿಲ್ಲೆಯಲ್ಲಿನ ಜನರು ರೈಲು ನಿಲ್ದಾಣದ ಹೆಸರುಗಳು ಬದಲಾಯಿಸಲು ಆಗ್ರಹಿಸಿದ್ದರು. ಈ ವಿಷಯ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇವರ ಗಮನಕ್ಕೆ ಬಂದ ನಂತರ ಅವರು ಜನರ ಭಾವನೆ ಗಮನಕ್ಕೆ ತೆಗೆದುಕೊಂಡು ರೈಲು ಸಚಿವಾಲಯಕ್ಕೆ ಈ ಪ್ರಸ್ತಾವ ಕಳಿಸಿದ್ದರು.

೨. ಈ ಪ್ರಸ್ತಾಪದ ಬಗ್ಗೆ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸಚಿವ ಲಲಿತ ಕಪೂರ ಇವರ ವತಿಯಿಂದ ರಾಜ್ಯ ಸರಕಾರದ ವಿಶೇಷ ಸಚಿವರಿಗೆ ‘ತೊಂದರೆ ಇಲ್ಲ’ ಪ್ರಮಾಣ ಪತ್ರ ಕಳುಹಿಸಿದರು.

೩. ಜಿಲ್ಲೆಯಲ್ಲಿನ ಕಾಸಿಮಪುರ ಹಾಲ್ಟಗೆ ಜೈಸ ಸಿಟಿ, ಜೈಸ್ ರೈಲು ನಿಲ್ದಾಣಕ್ಕೆ ಗುರು ಗೋರಕನಾಥ ಧಾಮ, ಬಾನಿ ರೈಲು ನಿಲ್ದಾಣಕ್ಕೆ ಸ್ವಾಮಿ ಪರಮಹಂಸ, ಮಿಶ್ರೌಲಿ ರೈಲು ನಿಲ್ದಾಣಕ್ಕೆ ಮಾ ಕಾಲಿಕನ ಧಾಮ, ಪುರುಸಾತಗಂಜ ನಿಲ್ದಾಣಕ್ಕೆ ಬಾಬಾ ತಪೇಶ್ವರ ಧಾಮ ಎಂದು ಹೆಸರುಗಳು ನೀಡುವರು. ನಿಹಾಲಗಢ ರೈಲು ನಿಲ್ದಾಣಕ್ಕೆ ಮಹಾರಾಜ ಬಿಜಲಿ ಪಾಸಿ, ಅಕ್ಬರಗಂಜ ರೈಲು ನಿಲ್ದಾಣಕ್ಕೆ ಮಾ ಅಹೋರ್ವ ಭವಾನಿ ಧಾಮ, ವಾರಿಸಗಂಜ ನಿಲ್ದಾಣಕ್ಕೆ ಅಮರ ಶಹೀದ ಭಲೇ ಸುಲತಾನ ಎಂದು ಬದಲಾಯಿಸುವರು.