ಕಾಂಗ್ರೆಸ್ ಸರಕಾರದಿಂದ ರಮಝಾನ್ ನಿಮಿತ್ತ ಶಾಲೆಯ ವೇಳಾಪಟ್ಟಿಯಲ್ಲಿ ಬದಲಾವಣೆ !

ಬೆಂಗಳೂರು – ಮುಸಲ್ಮಾನರ ಪವಿತ್ರ ತಿಂಗಳು ರಮಝಾನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರ ಶಾಲೆಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಈ ಆದೇಶವನ್ನು ರಾಜ್ಯದ ಶಾಲೆಗಳಿಗೆ ಕಳುಹಿಸಲಾಗಿದೆ. ಇದರಿಂದ ರಮಝಾನ ತಿಂಗಳಿನಲ್ಲಿ ಅಭ್ಯಾಸ ಮತ್ತು ಪ್ರಾರ್ಥನೆ ಒಂದೇ ಸಮಯದಲ್ಲಿ ಮುಂದುವರಿಸಬಹುದು, ಎಂದು ಸರಕಾರದ ವ್ಯಾಪ್ತಿಗೆ ಬರುವ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷೆಯ ಶಾಲೆಯ ನಿರ್ದೇಶಕರು ಹೇಳಿದ್ದಾರೆ. ಮಕ್ಕಳು ಶಾಲೆಗೆ ಗೈರು ಹಾಜರಾಗಬಾರದು ಮತ್ತು ಅವರು ತಮ್ಮ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಬಹುದು ಇದಕ್ಕಾಗಿ ಈ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ. ಈ ಆದೇಶ ಮಾರ್ಚ 6 ರಂದೇ ನೀಡಲಾಗಿದೆ.

1. ರಮಝಾನ ಮಾರ್ಚ 11 ರಿಂದ ಎಪ್ರಿಲ್ 9 ಈ ಕಾಲಾವಧಿಯಲ್ಲಿರುವುದರಿಂದ ಈ ಆದೇಶ ಜಾರಿಗೊಂಡಿದೆ. ಎಪ್ರಿಲ್ 10ರ ವರೆಗೆ ಶಾಲೆಯ ವೇಳಾಪಟ್ಟಿಯಲ್ಲಿ ಬದಲಾವಣೆಯಿರಲಿದೆ.

2. ಅಧಿಕೃತ ಆದೇಶದನುಸಾರ ಶಾಲೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.45 ಗಂಟೆಯ ವರೆಗೆ ನಡೆಯುವುದು ಮತ್ತು ವಿದ್ಯಾರ್ಥಿಗಳು ಬೆಳಿಗ್ಗೆ 10 ರಿಂದ 10.15 ಈ ಕಾಲಾವಧಿಯಲ್ಲಿ 15 ನಿಮಿಷದ `ವಿಶ್ರಾಂತಿ’ (ಬ್ರೆಕ್) ನೀಡಲಾಗಿದೆ. ಈ ಹಿಂದೆಯೂ ಇಂತಹ ಆದೇಶವನ್ನು ನೀಡಲಾಗಿದೆಯೆಂದು ಹೇಳಲಾಗುತ್ತಿದೆ.

3. ಒಂದೆಡೆ ಹಿಂದೂ ವಿದ್ಯಾರ್ಥಿಗಳೊಂದಿಗೆ ತಾರತಮ್ಯದ ಘಟನೆಗಳು ಜರುಗುತ್ತಿವೆ. ಇದರಲ್ಲಿ ಮಕ್ಕಳಿಗೆ ಹನುಮಾನ ಚಾಲಿಸಾ ಪಠಣ ಮಾಡುವುದರಿಂದ ತಡೆಯಲಾಗುತ್ತಿದೆ, ಇನ್ನೊಂದೆಡೆ ರಮಝಾನ ಹಿನ್ನೆಲೆಯಲ್ಲಿ ಶಾಲೆಯ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

4. `ಮಿಸ್ಟರ ಸಿಂಹಾ’ ಹೆಸರಿನ `ಎಕ್ಸ’ ಖಾತೆಯಲ್ಲಿ, ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ರಮಝಾನಗಾಗಿ ಶಾಲೆಗಳಲ್ಲಿ ವೇಳಾಪಟ್ಟಿ ಬದಲಾಯಿಸಲಾಗಿದೆ. ಅದೇ ಸರಕಾರದ ಪೊಲೀಸರು ಜನವರಿ ತಿಂಗಳಿನಲ್ಲಿ ಹಿಂದೂ ಹಚ್ಚಿದ 108 ಅಡಿ ಎತ್ತರದ ಕೇಸರಿ ಹನುಮಾನ ಧ್ವಜವನ್ನು ಬಲವಂತವಾಗಿ ತೆಗೆದರು. ಇದು ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ್ದಾಗಿದೆ.

ಆಂಧ್ರಪ್ರದೇಶದಲ್ಲಿಯೂ ಇದೇ ರೀತಿಯ ಆದೇಶ ಜಾರಿ

ಸ್ವತಃ ಕ್ರೈಸ್ತ ಆಗಿರುವ ಮುಖ್ಯಮಂತ್ರಿ ಜಗನಮೋಹನ ರೆಡ್ಡಿಯವರ ಸರಕಾರದ ಒಂದಂಶದ ಕಾರ್ಯಕ್ರಮವು ಕ್ರೈಸ್ತ ಮತ್ತು ಮುಸಲ್ಮಾನರ ಓಲೈಕೆಯ ಮಾಡುವುದಕ್ಕಾಗಿಯೇ ಇದೆಯೆಂದು ಗಮನಿಸಬೇಕಾದ ವಿಷಯವಾಗಿದೆ.

ಕರ್ನಾಟಕ ಸೇರಿ ಆಂಧ್ರಪ್ರದೇಶ ಶಾಲೆಯ ಶಿಕ್ಷಣ ಇಲಾಖೆಯೂ ಉರ್ದು ಮಾಧ್ಯಮಗಳ ಶಾಲೆಯ ವೇಳಾಪಟ್ಟಿಯನ್ನು ಬದಲಾಯಿಸಿದೆ. ಆಂದ್ರಪ್ರದೇಶದಲ್ಲಿ ಮಾರ್ಚ 12 ರಿಂದ ಎಪ್ರಿಲ್ 10 ಈ ಕಾಲಾವಧಿಯಲ್ಲಿ ಶಾಲೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30 ಗಂಟೆಯ ವರೆಗೆ ನಡೆಯುವುದು. ಅಲ್ಪಸಂಖ್ಯಾತ ಶಿಕ್ಷಕ ಸಂಘದ ಪ್ರತಿನಿಧಿಗಳು ಸರಕಾರದಲ್ಲಿ ಮಾಡಿದ ಅನೇಕ ಮನವಿಗಳ ಬಳಿಕ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಈ ಆದೇಶ ರಾಜ್ಯಾದ್ಯಂತ ಇರುವ ಉರ್ದು ಮಾಧ್ಯಮಗಳ ಪ್ರಾಥಮಿಕ, ಮಾಧ್ಯಮಿಕ, ಹಿರಿಯ ಮಾಧ್ಯಮವಿಕ ಶಾಲೆ ಹಾಗೆಯೇ ಸಮಾಂತರ ತರಗತಿಗಳಿಗೂ ಅನ್ವಯಿಸುತ್ತದೆ.