‘ಏರ್ ಇಂಡಿಯಾ’ ವಿಮಾನದಲ್ಲಿ ಬಾಂಬ್ ಬೆದರಿಕೆ!

  • ನ್ಯೂಯಾರ್ಕ್‌ಗೆ ಹೊರಟ ವಿಮಾನವನ್ನು ಮತ್ತೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು

  • ವಿಮಾನದಲ್ಲಿ ೩೨೦ ಕ್ಕೂ ಹೆಚ್ಚು ಪ್ರಯಾಣಿಕರು

ಮುಂಬಯಿ – ಮುಂಬಯಿನಿಂದ ನ್ಯೂಯಾರ್ಕ್‌ಗೆ ಹೊರಟ ‘ಏರ್ ಇಂಡಿಯಾ’ ವಿಮಾನಕ್ಕೆ ಬಾಂಬ್ ನಿಂದ ಸ್ಫೋಟಿಸುವ ಬೆದರಿಕೆ ಬಂದ ನಂತರ, ವಿಮಾನವನ್ನು ಮತ್ತೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಇದರಲ್ಲಿ ೩೨೦ ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಭದ್ರತಾ ಸಂಸ್ಥೆಗಳಿಂದ ವಿಮಾನವನ್ನು ಪರಿಶೀಲನೆ ಮಾಡಲಾಯಿತು. ಮುಂಬಯಿ-ನ್ಯೂಯಾರ್ಕ್ ವಿಮಾನ ಪ್ರಯಾಣದಲ್ಲಿ ‘ಎಐ ೧೧೯’ ವಿಮಾನಕ್ಕೆ ಈ ಬೆದರಿಕೆ ಬಂದಿದೆ. ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರ ಪತ್ತೆಯಾಗಿದೆ.

ಈಗ ಮಾರ್ಚ್ ೧೧ ರಂದು ಬೆಳಿಗ್ಗೆ ೫ ಗಂಟೆಗೆ ಈ ವಿಮಾನ ಮತ್ತೆ ಹಾರಾಟ ನಡೆಸಲಿದೆ. ಅಲ್ಲಿಯವರೆಗೆ ಎಲ್ಲಾ ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ಊಟದೊಂದಿಗೆ ಉಳಿಯುವ ವ್ಯವಸ್ಥೆ ಮಾಡಲಾಗುವುದು ಮತ್ತು ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ಮಾಡಲಾಗುವುದು.

ಸಂಪಾದಕೀಯ ನಿಲುವು

ವಿಮಾನದಲ್ಲಿ ಬಾಂಬ್ ಬೆದರಿಕೆಗಳು ಹೆಚ್ಚುತ್ತಿರುವುದನ್ನು ಗಮನಿಸಿದರೆ, ಸಂಬಂಧಪಟ್ಟವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು!