ಗಾಂಧಿನಗರ (ಗುಜರಾತ್) – ಇಲ್ಲಿನ ದಹೇಗಾಮ್‌ನಲ್ಲಿ ದೇಶಭಕ್ತ ಹಿಂದೂ ಚಾಂಪಿಯನ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಭಾರತ ಗೆದ್ದಾಗ, ಅದರ ಸಂಭ್ರಮಾಚರಣೆಯ ಮೆರವಣಿಗೆಯನ್ನು ನಡೆಸಲಾಯಿತು. ‘ಭಾರತ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗುತ್ತಾ ಈ ಮೆರವಣಿಗೆ ಇಲ್ಲಿನ ಬಡಿ ಮಸೀದಿ ಪ್ರದೇಶಕ್ಕೆ ತಲುಪಿದಾಗ ಮುಸಲ್ಮಾನರು ಅದರ ಮೇಲೆ ಕಲ್ಲು ತೂರಿದರು. ಇದರಿಂದ ಕೆಲವು ವಾಹನಗಳಿಗೆ ಹಾನಿಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೆಲವು ಮುಸಲ್ಮಾನರನ್ನು ಬಂಧಿಸಿದ್ದಾರೆ. ಈ ಘಟನೆ ಮಾರ್ಚ್ 9ರ ರಾತ್ರಿ ನಡೆದಿದೆ. ಕಲ್ಲು ತೂರಾಟದಲ್ಲಿ 3 ಹಿಂದೂಗಳು ಗಾಯಗೊಂಡಿದ್ದಾರೆ.
ಪೊಲೀಸರು ಮೊಹಮ್ಮದ್, ಅರ್ಬಾಜ್ ಖಾನ್, ಓವೈಸ್, ಸಾಜಿದ್ ಹುಸೇನ್, ವಾಸಿಂ, ಮೊಹಮ್ಮದ್ ತೌಫಿಕ್, ಮೊಹಮ್ಮದ್ ಇರ್ಫಾನ್ ಮತ್ತು ನಾಸಿರ್ ಖಾನ್ ಸೇರಿದಂತೆ 6 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. “ನೀವು ಇಲ್ಲಿಗೆ ಏಕೆ ಬಂದಿದ್ದೀರಿ?” ಎಂದು ಹೇಳುತ್ತಾ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ ಮತ್ತು ಬೈದಿದ್ದಾರೆ.
ಸಂಪಾದಕೀಯ ನಿಲುವು
|