1 ಲಕ್ಷ 36 ಸಾವಿರ 235 ಕೋಟಿ ರೂಪಾಯಿಗಳ ಕೊರತೆಯ ಮಹಾರಾಷ್ಟ್ರದ ಬಜೆಟ್ ಮಂಡನೆ!

ಮುಂಬಯಿ, ಮಾರ್ಚ್ 10 (ವಾರ್ತಾ) – ಹಿಂದಿನ ಬಜೆಟ್ ಮತ್ತು ಇತರ ರಾಜ್ಯಗಳಿಗೆ ಹೋಲಿಸಿದರೆ 7 ಲಕ್ಷ 20 ಸಾವಿರ ಕೋಟಿ ರೂಪಾಯಿಗಳ ಭವ್ಯ ಗಾತ್ರವನ್ನು ಹೊಂದಿರುವ; ಆದರೆ ಬರೋಬ್ಬರಿ 1 ಲಕ್ಷ 36 ಸಾವಿರ 235 ಕೋಟಿ ರೂಪಾಯಿಗಳ ರಾಜಕೋಶೀಯ ಕೊರತೆಯೊಂದಿಗೆ ಮಹಾರಾಷ್ಟ್ರದ 2025-2026ನೇ ಸಾಲಿನ ಬಜೆಟ್ ಅನ್ನು ಹಣಕಾಸು ಸಚಿವ ಅಜಿತ್ ಪವಾರ್ ಮಾರ್ಚ್ 10ರಂದು ವಿಧಾನಸಭೆಯಲ್ಲಿ ಮಂಡಿಸಿದರು. ವಿಧಾನ ಪರಿಷತ್ತಿನಲ್ಲಿ ರಾಜ್ಯ ಹಣಕಾಸು ಸಚಿವ ಆಶಿಶ್ ಜೈಸ್ವಾಲ್ ಬಜೆಟ್ ಮಂಡಿಸಿದರು.

5 ಲಕ್ಷ 60 ಸಾವಿರ 963 ಕೋಟಿ ರೂಪಾಯಿಗಳ ಆದಾಯ ಸಂಗ್ರಹ ಮತ್ತು 6 ಲಕ್ಷ 6 ಸಾವಿರ 855 ಕೋಟಿ ರೂಪಾಯಿಗಳ ಆದಾಯ ವೆಚ್ಚವನ್ನು ಈ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಆದಾಯ ಸಂಗ್ರಹಕ್ಕಿಂತ ಆದಾಯ ವೆಚ್ಚ ಹೆಚ್ಚಿರುವುದರಿಂದ ಬಜೆಟ್‌ನಲ್ಲಿ 45 ಸಾವಿರ 892 ಕೋಟಿ ರೂಪಾಯಿಗಳ ಆದಾಯ ಕೊರತೆಯನ್ನು ಈ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಬಜೆಟ್ ಕೊರತೆಯಲ್ಲಿದ್ದರೂ ರಾಜ್ಯದ ಸಾಲದ ಮಿತಿ ರಾಜ್ಯದ ಒಟ್ಟು ಉತ್ಪನ್ನಕ್ಕೆ ಹೋಲಿಸಿದರೆ 25 ಪ್ರತಿಶತಕ್ಕಿಂತ ಕಡಿಮೆಯಿದೆ. ಆದ್ದರಿಂದ ಬಜೆಟ್ ಕೊರತೆಯಲ್ಲಿದ್ದರೂ ಸ್ಥಿರವಾಗಿದೆ ಎಂದು ಸರಕಾರ ಹೇಳಿಕೊಂಡಿದೆ.

ಮಧ್ಯಾಹ್ನ 2 ಗಂಟೆಗೆ ಹಣಕಾಸು ಸಚಿವ ಅಜಿತ್ ಪವಾರ್ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲು ಪ್ರಾರಂಭಿಸಿದರು. ಬಜೆಟ್ ಮಂಡಿಸುವ ಮೊದಲು ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಸಂಭಾಜಿ ಮಹಾರಾಜ, ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದ ರಾಷ್ಟ್ರಪುರುಷರು ಮತ್ತು ಮಹಾನ್ ವ್ಯಕ್ತಿಗಳಿಗೆ ನಮಸ್ಕರಿಸಿ ಅಜಿತ್ ಪವಾರ್ ಬಜೆಟ್ ಹೇಳಲು ಪ್ರಾರಂಭಿಸಿದರು. ಬಜೆಟ್‌ನಲ್ಲಿ ಮರಾಠಿ ಕಾವ್ಯಗಳ ಉಲ್ಲೇಖವನ್ನು ಹಣಕಾಸು ಸಚಿವರು ಮಾಡಿದರು. ಅಜಿತ್ ಪವಾರ್ ಬಜೆಟ್‌ನ ಎರಡೂ ಭಾಗಗಳನ್ನು ಸತತವಾಗಿ ಓದಿದರು. ವಿರೋಧ ಪಕ್ಷಗಳ ಯಾವುದೇ ಗದ್ದಲವಿಲ್ಲದೆ ಎರಡೂ ಸದನಗಳಲ್ಲಿ ಬಜೆಟ್ ಪೂರ್ಣಗೊಂಡಿತು. ಛತ್ರಪತಿ ಸಂಭಾಜಿ ಮಹಾರಾಜರ ಸಂಗಮೇಶ್ವರದ ಸ್ಮಾರಕಕ್ಕೆ ಹಣದ ಉಲ್ಲೇಖಿಸುವಾಗ ಹಣಕಾಸು ಸಚಿವ ಅಜಿತ್ ಪವಾರ್ ‘ಛತ್ರಪತಿ ಸಂಭಾಜಿ ಮಹಾರಾಜ್ ಕಿ ಜೈ’ ಎಂದು ಸದನದಲ್ಲಿ ಘೋಷಣೆ ನೀಡಿದರು.