|
(ಪಿಒಪಿ ಎಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್)

ಪುಣೆ – ಕೆಲವು ವರ್ಷಗಳ ಹಿಂದೆ ಮುಂಬಯಿ ಹೈಕೋರ್ಟ್ ವಿಧಿಸಿದ ‘ಪಿಒಪಿ’ ಮೇಲಿನ ನಿಷೇಧಕ್ಕೆ ಸಂಬಂಧಿಸಿದಂತೆ ಪುಣೆ ಮಹಾನಗರ ಪಾಲಿಕೆ ಈ ವರ್ಷ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಪಾಲಿಕೆಯ ಆಡಳಿತವು ಅಭಿಯಾನವನ್ನು ತೀವ್ರಗೊಳಿಸಿರುವುದರಿಂದ ರಾಜ್ಯದ 80 ಪ್ರತಿಶತ ಮೂರ್ತಿ ತಯಾರಿಕಾ ಶಾಲೆಗಳಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸ ಸ್ಥಗಿತಗೊಂಡಿದೆ. ಪುಣೆಯ ಮೂರ್ತಿ ತಯಾರಿಕಾ ಶಾಲೆಗಳಲ್ಲಿ 80 ಪ್ರತಿಶತ ಮೂರ್ತಿಗಳನ್ನು ‘ಪಿಒಪಿ’ಯಿಂದ ಮತ್ತು 20 ಪ್ರತಿಶತ ಮೂರ್ತಿಗಳನ್ನು ಮಣ್ಣಿನಿಂದ ತಯಾರಿಸಲಾಗುತ್ತದೆ. ಮಣ್ಣಿನ ಮೂರ್ತಿಗಳ ಕೆಲಸವನ್ನು ಈಗಿನಿಂದಲೇ ಪ್ರಾರಂಭಿಸಿದರೆ, ಕೇವಲ 3 ತಿಂಗಳು ಮಾತ್ರ ಸಮಯ ಸಿಗುತ್ತದೆ. ಮೂರ್ತಿ ತಯಾರಕರು ಮೂರ್ತಿ ಸಿದ್ಧವಾದ ನಂತರ ಅದನ್ನು ಬಣ್ಣ ಬಳಿಯಬೇಕು, ಅದಕ್ಕೆ ಸಮಯ ಬೇಕಾಗುತ್ತದೆ. ಬಣ್ಣ ಹಾಕದ ಮೂರ್ತಿ ಮಳೆಗಾಲದಲ್ಲಿ ತೇವಾಂಶದಿಂದ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಸದ್ಯ ಪುಣೆಯಲ್ಲಿ ಗಣೇಶ ಮೂರ್ತಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರೆ, ಕಡಿಮೆ ಸಿಬ್ಬಂದಿಯಲ್ಲಿ ‘ಮಣ್ಣಿನ ಮೂರ್ತಿಗಳನ್ನು ಹೇಗೆ ತಯಾರಿಸುವುದು?’ ಎಂಬ ಪ್ರಶ್ನೆ ಉದ್ಭವಿಸಿದೆ.
ಸಾರ್ವಜನಿಕ ಮಂಡಳಿಗಳ ಒಲವು ‘ಫೈಬರ್’ ಕಡೆಗೆ
ಮುಂಬಯಿ ಹೈಕೋರ್ಟ್, ಗಣೇಶೋತ್ಸವದಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ನೋಡಿಕೊಳ್ಳಲು ರಾಜ್ಯ ಸರಕಾರಕ್ಕೆ ಸೂಚಿಸಿದೆ. ಅದರಂತೆ, ಹೆಚ್ಚಿನ ಮಂಡಳಿಗಳು ‘ಫೈಬರ್’ ಮೂರ್ತಿಗಳನ್ನು ತಯಾರಿಸಲು ಒಲವು ತೋರುತ್ತಿವೆ. (ಸಾರ್ವಜನಿಕ ಮಂಡಳಿಗಳ ಗಣೇಶ ಮೂರ್ತಿಗಳು ಎತ್ತರದಲ್ಲಿ ದೊಡ್ಡದಾಗಿರುತ್ತವೆ. ಮಣ್ಣಿನಿಂದ ದೊಡ್ಡ ಮೂರ್ತಿಗಳನ್ನು ತಯಾರಿಸಲು ಸಾಧ್ಯವಿಲ್ಲ. ಆಡಳಿತವು ಮೊದಲು ಸಣ್ಣ ಮೂರ್ತಿಗಳನ್ನು ತಯಾರಿಸಲು ಮಿತಿಗಳನ್ನು ವಿಧಿಸುವುದು ಅಗತ್ಯವಾಗಿತ್ತು! – ಸಂಪಾದಕರು)
ಸಂಪಾದಕೀಯ ನಿಲುವು
|
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ
ಮಧ್ಯಪ್ರದೇಶದ ಮೌಲಾನಾ ಬಂಧನ !
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ