Canada Khalistan Protest : ಕೆನಡಾದಲ್ಲಿ ಭಾರತೀಯ ಹೈಕಮೀಷನರ್ ಮೇಲೆ ಹಲ್ಲೆ ನಡೆಸಲು ಕಾರ್ಯಕ್ರಮದ ಸ್ಥಳದಲ್ಲಿ ಶಸ್ತ್ರಸಜ್ಜಿತವಾಗಿ ಬಂದ ಖಲಿಸ್ತಾನಿ !

ಕೆನಡಾ ಪೊಲೀಸರು ಖಲಿಸ್ತಾನಿಗಳನ್ನು ಕಾರ್ಯಕ್ರಮದ ಸ್ಥಳದಿಂದ ಹೊರಗಟ್ಟಿದರು !

ಒಟಾವಾ (ಕೆನಡಾ) – ಖಲಿಸ್ತಾನ ಬೆಂಬಲಿಗರು ಕೆನಡಾದ ಭಾರತದ ಹೈ ಕಮೀಷನ ಸಂಜಯ ಕುಮಾರ ವರ್ಮಾ ಇವರ ಕಾರ್ಯಕ್ರಮದ ಸ್ಥಳಕ್ಕೆ ಖಡ್ಗ ಮತ್ತು ಈಟಿಗಳನ್ನು ತೆಗೆದುಕೊಂಡು ಬಂದಿದ್ದರು. ಈ ಸಮಯದಲ್ಲಿ ಅವರಿಂದ ಅನುಚಿತ ಘಟನೆ ನಡೆಯುವ ಮೊದಲೇ ಕೆನಡಾ ಪೊಲೀಸರು ಅವರನ್ನು ಅಲ್ಲಿಂದ ಹೊರಗೆ ಅಟ್ಟಿದರು. ವರ್ಮಾ ಇವರು ಮಾರ್ಚ 11 ರಂದು ‘ಇಂಡೋ-ಕೆನಡಿಯನ್ ಚೇಂಬರ್ ಆಫ್ ಕಾಮರ್ಸ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಡ್ಮಂಟನ್‌ಗೆ ಬಂದಿದ್ದರು, ಆಗ ಈ ಘಟನೆ ನಡೆದಿದೆ. ಈ ಸಮಯದಲ್ಲಿ ಖಲಿಸ್ತಾನ ಬೆಂಬಲಿಗರು ವರ್ಮಾ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದರು. ಈ ಘಟನೆಯ ವಿಡಿಯೋ ಪ್ರಸಾರವಾಗಿದೆ. ಇದರಲ್ಲಿ ಕೆನಡಾದ ಪೊಲೀಸ್ ಸಿಬ್ಬಂದಿಯು ಶಸ್ತ್ರಾಸ್ತ್ರಗಳೊಂದಿಗೆ ಮುಂದೆ ಸಾಗುತ್ತಿದ್ದ ಖಲಿಸ್ತಾನಿ ಬೆಂಬಲಿಗರನ್ನು ಹಿಂದಕ್ಕೆ ತಳ್ಳುತ್ತಿರುವುದು ಕಾಣಿಸುತ್ತಿದೆ. ಭಾರತೀಯ ಹೈಕಮಿಷನರ್ ಸಂಜಯ ಕುಮಾರ್ ವರ್ಮಾ ಇವರು ‘ದಿ ಹಿಂದೂ’ ಸುದ್ದಿಪತ್ರಿಕೆಗೆ, ಖಲಿಸ್ತಾನ ಬೆಂಬಲಿಗರು ಕಾರ್ಯಕ್ರಮದಲ್ಲಿ ತಡೆಯನ್ನುಂಟುಮಾಡಲು ಪ್ರಯತ್ನಿಸಿದರು; ಆದರೆ ಅವರು ಯಶಸ್ವಿಯಾಗಲಿಲ್ಲ ಎಂದು ಹೇಳಿದರು.

1. ಮಾರ್ಚ್ 11 ರಂದು ನಡೆದ ಘಟನೆಯ ಸಮಯದಲ್ಲಿ ಖಲಿಸ್ತಾನಿಗಳು ಭಾರತೀಯ ಹೈಕಮಿಷನರ್ ಮತ್ತು ಭಾರತದ ವಿರುದ್ಧ ಘೋಷಣೆ ಕೂಗಿದರು. ಈ ಸಮಯದಲ್ಲಿ ಓರ್ವ ಖಲಿಸ್ತಾನಿ ಭಾರತೀಯ ರಾಷ್ಟ್ರಧ್ವಜವನ್ನು ಅಪಮಾನಿಸಿದನು. ಖಲಿಸ್ತಾನಿಗಳು ಕಾರ್ಯಕ್ರಮವನ್ನು ನಿಲ್ಲಿಸಲು ಪ್ರಯತ್ನಿಸಿದನು.

2. ಖಾಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಹ ಪನ್ನುನ ಬೆಂಬಲಿಗರು ಮಾರ್ಚ್ 11 ರ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆಗೆ ಕರೆ ನೀಡುವ ಭಿತ್ತಿ ಪತ್ರಗಳನ್ನು ಪ್ರಸಾರ ಮಾಡಿದ್ದರು. ತದನಂತರ ಕೆನಡಾದ ಅಧಿಕಾರಿಗಳು ಕಾರ್ಯಕ್ರಮದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ತಂಡಗಳನ್ನು ನಿಯೋಜಿಸಿದರು. ಅವರೇ ದಾಳಿಯ ಸಂದರ್ಭದಲ್ಲಿ ಭಾರತೀಯ ಹೈಕಮಿಷನರ್ ಮತ್ತು ಅವರ ಪತ್ನಿಯನ್ನು ಕಾರ್ಯಕ್ರಮದಿಂದ ಸುರಕ್ಷಿತವಾಗಿ ಹೊರಗೆ ಕರೆದೊಯ್ದರು.

3. ಕೆಲವು ಸಮಯದಿಂದ ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಕೆಲಸ ಮಾಡುವ ಅಧಿಕಾರಿಗಳು ಖಲಿಸ್ತಾನಿಗಳ ಗುರಿಯಾಗಿದ್ದರು. ಹರದೀಪ ಸಿಂಹ ನಿಜ್ಜರ ಈ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ನಂತರ, ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಹ ಪನ್ನು ಇವನು ಭಾರತೀಯ ರಾಯಭಾರ ಕಚೇರಿಯನ್ನು ಗುರಿ ಮಾಡುವಂತೆ ಕರೆ ನೀಡಿದ್ದನು. ಆಗಿನಿಂದ ಭಾರತೀಯ ಅಧಿಕಾರಿಗಳನ್ನು ಗುರಿಯಾಗಿಸಲು ಪ್ರಯತ್ನಗಳು ನಡೆದಿವೆ.

ಸಂಪಾದಕೀಯ ನಿಲುವು

ಖಲಿಸ್ತಾನಿ ಭಾರತೀಯ ಹೈಕಮೀಷನರ ಮೇಲೆ ದಾಳಿ ನಡೆಸಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬರುತ್ತಾರೆ, ಈ ವಿಷಯದಲ್ಲಿ ಈಗ ಕೆನಡಾ ಪ್ರಧಾನಮಂತ್ರಿ ಟ್ರುಡೋ ಏಕೆ ಬಾಯಿ ತೆರೆಯುವುದಿಲ್ಲ ? ಅಮೇರಿಕಾ ಕೂಡ ಇದರ ಬಗ್ಗೆ ಏನೂ ಮಾತನಾಡುವುದಿಲ್ಲ ? ಅಥವಾ ಅವರಿಗೆ ಇದು ಯೋಗ್ಯವೆನಿಸುತ್ತದೆಯೇ ?