ಪಾಕಿಸ್ತಾನದಲ್ಲಿ ಹಿಂದೂಗಳು ಈಗ ಮುಕ್ತವಾಗಿ ಉಸಿರಾಡಬಹುದು ! – ಪಾಕಿಸ್ತಾನದ ಮಾಜಿ ಕ್ರಿಕೆಟಪಟು ದಾನಿಶ ಕನೆರಿಯಾ

ಸಿಎಎ ಕಾನೂನು ಜಾರಿಗೊಳಿಸಿದ್ದರಿಂದ ಜಗತ್ತಿನಾದ್ಯಂತದಿಂದ ವಿವಿಧ ಪ್ರತಿಕ್ರಿಯೆಗಳು !

ಸಿಎಎ ಕಾನೂನು ಇದು ನಿಜವಾದ ಪ್ರಜಾಪ್ರಭುತ್ವದ ಪರಿಚಯ ಇರುವುದು ಎಂದು ಅಮೇರಿಕಾದ ಗಾಯಕಿ ಮೇರಿ ಮಿಲಬೇನ ಇವರ ಅಭಿಪ್ರಾಯ

(ಸಿಎಎ ಎಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಟಿಜನ್ ಶಿಪ್ ಅಮೆಂಡ್ಮೆಂಟ್ ಆಕ್ಟ್)

ನವ ದೆಹಲಿ – ೨೦೧೯ ರಲ್ಲಿ ಸಿಎಎ ಕಾನೂನು ಜಾರಿ ಮಾಡಿದ ನಂತರ ಒಂದು ಸುತ್ತೋಲೆಯ ಮೂಲಕ ಕೇಂದ್ರ ಸರಕಾರವು ಮಾರ್ಚ್ ೧೧ ರಿಂದ ದೇಶಾದ್ಯಂತ ಜಾರಿಗೊಳಿಸಿದೆ. ಇದಕ್ಕೆ ಜಗತ್ತಿನಾದ್ಯಂತದಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತಪಡಿಸಲಾಗುತ್ತಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟ್ ಪಟು ದಾನೇಶ ಕನೇರಿಯಾ ಇವರು, ಈ ಕಾನೂನಿನಿಂದ ಪಾಕಿಸ್ತಾನದಲ್ಲಿನ ಹಿಂದುಗಳು ಈಗ ಮುಕ್ತವಾಗಿ ಉಸಿರಾಡಬಹುದು. ಸಿಎಎ ಜಾರಿಗೊಳಿಸಿದ ಬಗ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ ಶಾಹ ಇವರಿಗೆ ಧನ್ಯವಾದ ಹೇಳಿದ್ದಾರೆ.

(ಸೌಜನ್ಯ – News Nation)

ಅಮೇರಿಕಾದಲ್ಲಿನ ಪ್ರಸಿದ್ಧ ಗಾಯಕಿ ಮೇರಿ ಮೀಲಬೆನ್ ಇವರು ಕೂಡ ಈ ಕಾನೂನಿಗೆ ಬೆಂಬಲ ಸೂಚಿಸಿದ್ದಾರೆ. ಅವರು, ಪ್ರಧಾನಮಂತ್ರಿ ಮೋದಿ ಇವರು ದೇಶವನ್ನು ಒಂದು ಶಾಂತಿಯ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ.

ಈ ಕಾನೂನು ಎಂದರೆ ನಿಜವಾದ ಪ್ರಜಾಪ್ರಭುತ್ವದ ಪರಿಚಯವಾಗಿದೆ. ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಕ್ರೈಸ್ತ ಮತ್ತು ಇತರ ಧರ್ಮಮಿಯರಿಗೆ ಅವರ ಧಾರ್ಮಿಕ ಸ್ವಾತಂತ್ರ್ಯ ದೊರೆಯುವುದು. ಈ ೩ ದೇಶದ ಮುಸಲ್ಮಾನೆತರರಿಗೆ ಯಾವ ಕಿರುಕುಳ ಎದುರಿಸಬೇಕಾಗುತ್ತದೆ, ಈಗ ಅವರಿಗೆ ಅಭಯ ದೊರೆಯಲಿದೆ. ಅವರಿಗೆ ಈಗ ಅವರ ಬೇರೆ ಪರಿಚಯ ಸಿಗುವುದು.

ಮೇರೆ ಮೀಲಬೆನ್ ಮಾತು ಮುಂದುವರಿಸುತ್ತಾ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆ ಪರಿಚಯವೆಂದು ಯಾವ ‘ಸಿಎಎ’ ಕಾನೂನಿನ ಘೋಷಣೆ ಮಾಡಿದ್ದಾರೆ ಅದಕ್ಕಾಗಿ ಓರ್ವ ಕ್ರೈಸ್ತ ಮಹಿಳೆ ಎಂದು ನಾನು ಮೋದಿ ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.