Arunachal Pradesh Border Issue: ‘ಅರುಣಾಚಲ ಪ್ರದೇಶ ಚೀನಾದ ಭಾಗ!’ (ಅಂತೆ)

ಪ್ರಧಾನಿ ಮೋದಿ ಇವರು ಅರುಣಾಚಲ ಪ್ರದೇಶದಲ್ಲಿ ಸೆಲಾ ಸುರಂಗವನ್ನ ಉದ್ಘಾಟಿಸಿದ್ದರಿಂದ ಚೀನಾದಲ್ಲಿ ಕೋಲಾಹಲ !

ಬೀಜಿಂಗ್ (ಚೀನಾ) – ಪ್ರಧಾನಿಮೋದಿ ಇವರು ಅರುಣಾಚಲ ಪ್ರದೇಶಕ್ಕೆ ಹೋಗಿ ಸೆಲಾ ಸುರಂಗವನ್ನು ಉದ್ಘಾಟಿಸಿದರು. ಈ ಘಟನೆಯನ್ನು ಚೀನಾವು ಖಂಡಿಸಿದೆ. ಚೀನಾವು ಮತ್ತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವೆಂದು ಹೇಳಿಕೊಂಡಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ ವೆನಬಿನ ಇವರು ಮಾತನಾಡಿ, ಅರುಣಾಚಲ ಪ್ರದೇಶದ ಹೆಸರು ‘ಜಂಗನಾನ‘ ಎಂದಿದೆ. ಚೀನಾ ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್‘ ಎಂದು ಕರೆಯುತ್ತದೆ. ಇದು ಚೀನಾದ ಪರಿಸರದಲ್ಲಿದೆ. ಭಾರತದ ಪಕ್ಕದಲ್ಲಿ ಆಕ್ರಮವಾಗಿ ಸ್ಥಾಪಿಸಲಾದ ಅರುಣಾಚಲ ಪ್ರದೇಶವನ್ನು ನಮ್ಮ ಸರಕಾರ ಎಂದಿಗೂ ಮಾನ್ಯತೆ ನೀಡಿಲ್ಲ. ಇಂದಿಗೂ ನಮ್ಮ ವಿರೋಧವಿದೆ. ಇದು ಚೀನಾದ ಭಾಗವಾಗಿದ್ದು ಭಾರತ ತನ್ನ ಇಚ್ಛೆಯಂತೆ ಇಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಭಾರತ ಏನು ಮಾಡಿದರೂ, ಅದರಿಂದ ಉಭಯದೇಶಗಳ ನಡುವಿನ ಗಡಿವಿವಾದ ಉಲ್ಬಣಗೊಳ್ಳಬಹುದು. ಪ್ರಧಾನಿಮೋದಿಯವರ ಪೂರ್ವ ಪ್ರವಾಸಕ್ಕೆ ನಮ್ಮ ವಿರೋಧವಿದೆ. ನಾವು ಭಾರತಕ್ಕೆ ನಮ್ಮ ನಿಷೇಧವನ್ನು ವ್ಯಕ್ತಪಡಿಸಿದ್ದೇವೆ. ಭಾರತ ಕೈಗೊಂಡಿರುವ ಈ ಕ್ರಮಗಳು ವಾಸ್ತವ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲಿದೆ ಎಂದಿದ್ದಾರೆ.

ಸಂಪಾದಕೀಯ ನಿಲುವು

ಚೀನಾವು ಎಷ್ಟೇ ಕೂಗಾಡಿದರೂ, ಅರುಣಾಚಲ ಪ್ರದೇಶ ಭಾರತದ ಭಾಗವಾಗಿದ್ದು ಮತ್ತು ಭಾರತದ ಭಾಗವಾಗಿಯೇ ಇರುವುದು, ಇದನ್ನು ಅವರು ಗಮನದಲ್ಲಿಡಬೇಕು !