Chariot Burned by Miscreants: ತುಮಕೂರಿಲ್ಲಿ ೮೦೦ ವರ್ಷಗಳಷ್ಟು ಹಳೆ ದೇವಾಲಯದ ರಥವನ್ನು ಅಪರಿಚಿತರಿಂದ ಬೆಂಕಿಗಾಹುತಿ !

  • ಸುಟ್ಟಿದ ರಥ

ತುಮಕೂರು – ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ೮೦೦ ವರ್ಷಗಳಷ್ಟು ಹಳೆಯ ಚೋಳರ ಕಾಲದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ರಥವನ್ನು ಅಪರಿಚಿತರು ಬೆಂಕಿ ಹಚ್ಚಿದ್ದಾರೆ. ಮಾರ್ಚ್ ೧೨ ರಂದು ಈ ಘಟನೆ ನಡೆದಿದೆ. ಈ ದೇವಾಲಯವು ದತ್ತಿ ಇಲಾಖೆಯ ಪಟ್ಟಿಯಲ್ಲಿ ‘ಸಿ‘ ದರ್ಜೆಯ ದೇವಾಲಯವಾಗಿದೆ. ಇಲ್ಲಿ ಮಾರ್ಚ್ ೨೦ ರಿಂದ ಜಾತ್ರೆ ಆರಂಭವಾಗಲಿದೆ. ಜಾತ್ರೆಯ ಸಿದ್ಧತೆಯ ಮೊದಲೇ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಭಾರತದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ರಾಜ್ಯ ಸಂಚಾಲಕ ಶ್ರೀ. ಮೋಹನ ಗೌಡ ಇವರು ಪ್ರಸಾರ ಮಾಡಿದ ಮನವಿಯಲ್ಲಿ, ‘ಈ ಘಟನೆ ಅತ್ಯಂತ ಗಂಭೀರವಾಗಿದ್ದು ಇದರ ಹಿಂದಿರುವ ಅಪರಾಧಿ ಯಾರಿದ್ದಾರೆ?‘, ‘ಯಾವ ಉದ್ದೇಶದಿಂದ ಈ ಕೃತ್ಯವನ್ನು ಮಾಡಿದ್ದಾರೆ?‘, ಇದರ ಹಿಂದಿನ ಷಡ್ಯಂತ್ರವೇನು?‘ ಇದರ ತನಿಖೆಯಾಗಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಸರಕಾರ ಹಿಂದೂ ದೇವಾಲಯಗಳಿಂದ ತೆರಿಗೆ ಸಂಗ್ರಹಿಸುತ್ತದೆ; ಆದರೆ ಅದರ ಸಂರಕ್ಷಣೆ ಮಾಡುವುದಿಲ್ಲ, ಇದು ಅತ್ಯಂತ ಖಂಡನೀಯವಾಗಿದೆ. ದೇವಸ್ಥಾನದ ಜಾತ್ರೆಗೆ ಸರಕಾರ ರಕ್ಷಣೆ ನೀಡಬೇಕು‘, ಎಂದು ಹೇಳಿದ್ದಾರೆ.

(ಈ ಮೇಲೆ ಪ್ರಸಿದ್ಧಗೊಳಿಸಿದ ಚಿತ್ರದ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ)

ಸಂಪಾದಕೀಯ ನಿಲುವು

ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ