ಬಂಗಾಳದಲ್ಲಿ ಮೊದಲ ಬಾರಿಗೆ ರಾಮನವಮಿಗೆ ರಜೆ ಘೋಷಣೆ!

ಕೋಲಕಾತಾ (ಬಂಗಾಳ) – ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರವು ರಾಮ ನವಮಿಯ ಸಂದರ್ಭದಲ್ಲಿ ಏಪ್ರಿಲ್ 17 ರಂದು ಸಾರ್ವಜನಿಕ ರಜೆ ಘೋಷಿಸಿದೆ. ತೃಣಮೂಲ ಸರಕಾರ 2011ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ರಾಮನವಮಿಯ ಮೆರವಣಿಗೆಯಲ್ಲಿ ಸಾರ್ವಜನಿಕ ರಜೆ ಘೋಷಿಸಿದೆ. ಕಳೆದ ಕೆಲವು ವರ್ಷಗಳಿಂದ, ಬಂಗಾಳದಲ್ಲಿ ರಾಮನವಮಿ ಮೆರವಣಿಗೆಯಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಕಳೆದ ವರ್ಷವೂ ರಾಮನವಮಿಯ ಮೆರವಣಿಗೆಯ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಹಿಂಸಾಚಾರದ ಘಟನೆ ನಡೆದಿತ್ತು. ಕೋಲಕತ್ತಾ ಉಚ್ಚ ನ್ಯಾಯಾಲಯದ ಆದೇಶದ ನಂತರ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಅರ್ಜಿದಾರರ ವಿಚಾರಣೆ ನಡೆಸುತ್ತಿದೆ.

ಭಾಜಪದ ಒತ್ತಡಕ್ಕೆ ಮಣಿದು ರಾಮ ನವಮಿಗೆ ರಜೆಯ ನಿರ್ಧಾರ! – ಭಾಜಪ ಹೇಳಿಕೆ

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರು ಭಾಜಪದ ಒತ್ತಡಕ್ಕೆ ಮಣಿದ ಮಮತಾ ಬ್ಯಾನರ್ಜಿ ಸರಕಾರವು ರಾಮನವಮಿಯ ರಜೆಯ ನಿರ್ಣಯ ತೆಗೆದುಕೊಂಡಿದೆಯೆಂದು ಹೇಳಿದೆ. ಸುವೆಂದು ಅಧಿಕಾರಿಯವರು `ಎಕ್ಸ’ ಮೇಲೆ ಪೋಸ್ಟ ಮಾಡಿ ಜನೇವರಿ ತಿಂಗಳಿನಲ್ಲಿ ನಾನು ರಾಮನವಮಿಗೆ ರಜೆ ಕೊಡದೇ ಇರುವ ಬಗ್ಗೆ ರಾಜ್ಯ ಸರಕಾರವನ್ನು ಟೀಕಿಸಿದ್ದೆನು. ಈಗ ರಾಜ್ಯ ಸರಕಾರಕ್ಕೆ ರಜೆ ಘೋಷಿಸದೇ ನಿರ್ವಾಹವಿಲ್ಲದಂತಾಗಿದೆ.

ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಬಂಗಾಳಕ್ಕಾಗಿ ಪಕ್ಷದ ಕೇಂದ್ರೀಯ ನಿರೀಕ್ಷಕ ಅಮಿತ ಮಾಳವಿಯಾ ಅವರು ಮಾತನಾಡಿ, ಮಮತಾ ಬ್ಯಾನರ್ಜಿ ಅವರು ತಮ್ಮ ಹಿಂದೂ ವಿರೋಧಿ ಪ್ರತಿಮೆ(ಪ್ರತಿಷ್ಠೆ) ಸುಧಾರಿಸಲು ಇದನ್ನು ಮಾಡಿದ್ದಾರೆ. ಬಹಳ ತಡವಾಗಿದ್ದರೂ, ಮಹತ್ವದ್ದೆಂದರೆ ರಾಮನವಮಿಯ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಯದಂತೆ ಅವರು ಎಚ್ಚರಿಕೆ ವಹಿಸಬೇಕು.

ಸಂಪಾದಕೀಯ ನಿಲುವು

ಅಯೋಧ್ಯೆಯ ಶ್ರೀರಾಮ ಮಂದಿರದಿಂದಾಗಿ ಹಿಂದೂಗಳು ಎಚ್ಚರಗೊಂಡಿದ್ದಾರೆ. ಅದರ ಬಿಸಿ ಮುಂಬರುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಸಿಗೆ ತಟ್ಟಬಾರದು; ಎಂದು ಮಮತಾ ಬ್ಯಾನರ್ಜಿ ಸರಕಾರವೇ ‘ರಜೆಯನ್ನು ಎಂದು ಘೋಷಿಸಿದೆ. ಇದೇ ಸ್ಪಷ್ಟವಾಗಿದೆ !