POK Residents Expose PAK : ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಭಾರತೀಯ ಕಾಶ್ಮೀರ ನಡುವೆ ಬಹಳ ವ್ಯತ್ಯಾಸ !

ಭಾರತ ಸರಕಾರವನ್ನು ಹಾಡಿಹೊಗಳಿದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು !

ಇಸ್ಲಾಮಾಬಾದ (ಪಾಕಿಸ್ತಾನ) – ಕಲಂ 370 ರದ್ದು ಪಡಿಸಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 7 ರಂದು ಮೊದಲ ಬಾರಿಗೆ ಕಾಶ್ಮೀರ ಕಣಿವೆಗೆ ಭೇಟಿ ನೀಡಿದರು. ಇಲ್ಲಿ ಅವರು ‘ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ’ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶದ 6 ಸಾವಿರದ 400 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಿದರು. ಈ ಬಗ್ಗೆ ಕೆಲವು ಪತ್ರಕರ್ತರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ನಾಗರಿಕರೊಂದಿಗೆ ಸಂವಾದ ನಡೆಸಿದರು. ಅಲ್ಲಿಯ ಜನರು ಅವರ ಪರಿಸ್ಥಿತಿ ತುಂಬಾ ಜಟಿಲವಾಗಿದೆ ಎಂದು ಹೇಳಿದರು. ಅಲ್ಲಿನ ಜನರು ಹಣದುಬ್ಬರದಿಂದ ತೊಂದರೆಗೀಡಾಗಿದ್ದಾರೆಂದು ಹೇಳಿದ್ದಾರೆ.

‘ಅನೇಕ ಗ್ರಾಮಗಳಲ್ಲಿ ವಿದ್ಯುತ ಎಂದರೆ ಏನು’ ಎನ್ನುವುದೇ ತಿಳಿದಿಲ್ಲ !

ಒಬ್ಬ ವ್ಯಕ್ತಿ ಮಾತನಾಡಿ, ‘ನಮ್ಮ ಅನೇಕ ಗ್ರಾಮಗಳಲ್ಲಿ `ವಿದ್ಯುತ್ ಎಂದರೆ ಏನು?’ ಎನ್ನುವುದೇ ತಿಳಿದಿಲ್ಲ. ಗಡಿಯಲ್ಲಿರುವ ಭಾರತೀಯ ಸೇನೆಯ ನೆಲೆಗಳ ಮೇಲೆ 24 ಗಂಟೆಗಳ ಕಾಲ ವಿದ್ಯುತ್ ಇರುತ್ತದೆ; ಆದರೆ ಇಲ್ಲಿ 12 ಗಂಟೆಗಳ ಕಾಲ ವಿದ್ಯುತ್ ಇಲ್ಲದಿದ್ದರೆ ಪ್ರವಾಸಿಗರು ಹೇಗೆ ಬರುತ್ತಾರೆ? ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ತಯಾರಿಸಲಾಗುತ್ತದೆ ಮತ್ತು ಅದು ಸಂಪೂರ್ಣ ಪಾಕಿಸ್ತಾನಕ್ಕೆ ಹೋಗುತ್ತದೆ. ನಮಗೆ ಮಾತ್ರ ನಮ್ಮ ಆವಶ್ಯಕತೆಯಲ್ಲಿ 10 ಮೆಗಾವ್ಯಾಟ ವಿದ್ಯುತ್ ಕೂಡ ಸಿಗುವುದಿಲ್ಲ’ ಎಂದು ಹೇಳಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಭಿವೃದ್ಧಿ ಯೋಜನೆಯಲ್ಲಿ ಶೂನ್ಯ ಶೇಕಡಾದಷ್ಟೂ ಹೂಡಿಕೆ ಇಲ್ಲ !

ಖ್ವಾಜಾ ಶಬ್ಬೀರ ಅಹಮದ ಹೆಸರಿನ ವ್ಯಕ್ತಿಯು ಮಾತನಾಡಿ ಭಾರತದ ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಅಭಿವೃದ್ಧಿ ಕುರಿತು ಮಾತನಾಡುತ್ತಾ ‘ಅಭಿವೃದ್ಧಿಯಲ್ಲಿ ಬಹಳ ವ್ಯತ್ಯಾಸವಿದೆ. ನಮ್ಮ ಬಳಿ ಅಭಿವೃದ್ಧಿ ಯೋಜನೆಗಾಗಿ ಶೂನ್ಯ ಶೇಕಡಾ ಹೂಡಿಕೆಯೂ ಇಲ್ಲ. ಇಲ್ಲಿಯ ಎಲ್ಲ ಪ್ರೇಕ್ಷಣೀಯ ಸ್ಥಳಗಳಲ್ಲಿಯೂ ಕಾಮಗಾರಿ ನಡೆಯಬೇಕು. ಇಲ್ಲಿನ ಹಲವೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ನಿರ್ಬಂಧಿಸಲಾಗಿದೆ.

ಇಲ್ಲಿನ ಹಣದುಬ್ಬರ ಮಿತಿ ಮೀರಿದೆ !

ಮತ್ತೊಬ್ಬರು ಹಣದುಬ್ಬರದ ಬಗ್ಗೆ ಮಾತನಾಡುತ್ತಾ, `ಇಲ್ಲಿನ ಹಣದುಬ್ಬರ ಮಿತಿ ಮೀರಿದೆ. ಕಾಶ್ಮೀರದಲ್ಲಿ ಏನು ಉತ್ಪಾದನೆಯಾಗುತ್ತಿದೆಯೋ, ಅದರ ದರ ಬಹಳ ಕಡಿಮೆಯಿರುತ್ತದೆ; ಆದರೆ ಹೊರಗಿನಿಂದ ಏನು ಆಮದು ಆಗುತ್ತದೆಯೋ, ಅವುಗಳ ಬೆಲೆ ಅತ್ಯಧಿಕವಿರುತ್ತದೆ. ಭಾರತದ ಕಾಶ್ಮೀರದಲ್ಲಿ ಹಣದುಬ್ಬರದ ದರ ಇಲ್ಲಿಗೆ ಹೋಲಿಸಿದರೆ ಬಹಳ ಕಡಿಮೆಯಿದೆ. ಅಲ್ಲಿ ಉದ್ಯೋಗಗಳೂ ಇವೆ. ನಮ್ಮ ಪಾಕಿಸ್ತಾನಿಗಳು ತಮ್ಮ ತಮ್ಮಲ್ಲಿಯೇ ಹೊಡೆದಾಡಿ ಸಾಯುತ್ತಿದ್ದಾರೆ, ಎಂದು ಹೇಳಿದನು.

ಪಾಕಿಸ್ತಾನ ಸರಕಾರ ಕೇವಲ ತನ್ನ ಹೊಟ್ಟೆಯನ್ನು ತುಂಬಿಕೊಳ್ಳುತ್ತಿದೆ !

ಒಂಭತ್ತನೇಯ ತರಗತಿಯಲ್ಲಿ ಕಲಿಯುತ್ತಿರುವ ಒಬ್ಬ ವಿದ್ಯಾರ್ಥಿಯು ಮಾತನಾಡಿ, ‘ಭಾರತ ಸರಕಾರಕ್ಕೆ ತನ್ನ ಜನರ ಬಗ್ಗೆ ಏನಾದರೂ ಅನಿಸುತ್ತದೆ. ಅವರ ಸರಕಾರ ಅಲ್ಲಿನ ಜನರಿಗಾಗಿ ಕೆಲಸ ಮಾಡುತ್ತದೆ. ನಮ್ಮ ಸರಕಾರ ಕೇವಲ ತನ್ನ ಹೊಟ್ಟೆಯನ್ನು ತುಂಬಿಕೊಳ್ಳುತ್ತದೆ.’ ಎಂದು ಹೇಳಿದ.